IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ

IPL 2024 Captains: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್​-17 ಗಾಗಿ 10 ತಂಡಗಳ ನಾಯಕರುಗಳು ಫೈನಲ್ ಆಗಿದೆ. ಈ ಬಾರಿಯ ಐಪಿಎಲ್​ನಲ್ಲಿ ಮೂರು ತಂಡಗಳನ್ನು ಹೊಸ ನಾಯಕರುಗಳು ಮುನ್ನಡೆಸಲಿರುವುದು ವಿಶೇಷ. ಅದರಂತೆ ಈ ಬಾರಿ ಹತ್ತು ತಂಡಗಳನ್ನು ಮುನ್ನಡೆಸಲಿರುವ ಕ್ಯಾಪ್ಟನ್​ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

TV9 Web
| Updated By: ಆಯೇಷಾ ಬಾನು

Updated on: Mar 04, 2024 | 2:26 PM

ಐಪಿಎಲ್ ಸೀಸನ್​-17 ಕ್ಕೆ (IPL 2024) ಕೌಂಟ್ ಡೌನ್ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳ ನಾಯಕರುಗಳು ಫೈನಲ್ ಆಗಿದ್ದು, ಅದರಂತೆ ಮೂರು ತಂಡಗಳಲ್ಲಿ ಹೊಸ ಕ್ಯಾಪ್ಟನ್​ಗಳು ಕಾಣಿಸಿಕೊಳ್ಳಲಿದ್ದಾರೆ. ಹಾಗಿದ್ರೆ ಈ ಬಾರಿ ಐಪಿಎಲ್​ನಲ್ಲಿ ಯಾವ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂದು ನೋಡೋಣ...

1 / 11
1- ಎಂಎಸ್ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಬಾರಿ ಕೂಡ ಸಿಎಸ್​ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ರವೀಂದ್ರ ಜಡೇಜಾ ಕಾಣಿಸಿಕೊಳ್ಳಲಿದ್ದಾರೆ.

2 / 11
2- ಹಾರ್ದಿಕ್ ಪಾಂಡ್ಯ: ಮುಂಬೈ ಇಂಡಿಯನ್ಸ್ ತಂಡವನ್ನು ಈ ಬಾರಿ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಕಳೆದ ಬಾರಿ ನಾಯಕರಾಗಿದ್ದ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಬದಲಿಗೆ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ.

3 / 11
3- ರಿಷಭ್ ಪಂತ್: ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ ಪಂತ್ ಅವರ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಡೆಲ್ಲಿ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ಬಾರಿ ರಿಷಭ್ ಪಂತ್ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖಚಿತಪಡಿಸಿದೆ.

4 / 11
4- ಪ್ಯಾಟ್ ಕಮಿನ್ಸ್: ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವದಿಂದ ಐಡೆನ್ ಮಾರ್ಕ್ರಾಮ್ ಅವರನ್ನು ಕೆಳಗಿಳಿಸಲಾಗಿದ್ದು, ಅವರ ಬದಲಿಗೆ ಹೊಸ ಕ್ಯಾಪ್ಟನ್ ಆಗಿ ಪ್ಯಾಟ್ ಕಮಿನ್ಸ್ ಅವರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಈ ಬಾರಿ ಎಸ್​ಆರ್​ಹೆಚ್ ತಂಡವನ್ನು ಕಮಿನ್ಸ್ ಮುನ್ನಡೆಸಲಿದ್ದಾರೆ.

5 / 11
5- ಶ್ರೇಯಸ್ ಅಯ್ಯರ್: ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ ಅಯ್ಯರ್ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ಕೆಕೆಆರ್ ತಂಡವನ್ನು ಮುನ್ನಡೆಸಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಅಯ್ಯರ್ ಈ ಬಾರಿ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

6 / 11
6- ಸಂಜು ಸ್ಯಾಮ್ಸನ್: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಈ ಬಾರಿ ಕೂಡ ಸಂಜು ಸ್ಯಾಮ್ಸನ್ ಕಾಣಿಸಿಕೊಳ್ಳಲಿದ್ದಾರೆ.

7 / 11
7- ಶುಭ್​ಮನ್ ಗಿಲ್: ಗುಜರಾತ್ ಟೈಟಾನ್ಸ್ ತಂಡವನ್ನು ಈ ಬಾರಿ ಶುಭ್​ಮನ್ ಗಿಲ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದು, ಹೀಗಾಗಿ ಗಿಲ್ ಅವರಿಗೆ ಗುಜರಾತ್ ತಂಡದ ನಾಯಕತ್ವ ನೀಡಲಾಗಿದೆ.

8 / 11
8- ಶಿಖರ್ ಧವನ್: ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಈ ಬಾರಿ ಕೂಡ ಶಿಖರ್ ಧವನ್ ಕಾಣಿಸಿಕೊಳ್ಳಲಿದ್ದಾರೆ.

9 / 11
9- ಕೆಎಲ್ ರಾಹುಲ್: ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಈ ಬಾರಿ ಕೂಡ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಹಾಗೆಯೇ ಉಪನಾಯಕರಾಗಿ ನಿಕೋಲಸ್ ಪೂರನ್ ಕಾಣಿಸಿಕೊಳ್ಳಲಿದ್ದಾರೆ.

10 / 11
10- ಫಾಫ್ ಡುಪ್ಲೆಸಿಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫಾಫ್ ಡುಪ್ಲೆಸಿಸ್ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ. ಹಾಗೆಯೇ ಉಪನಾಯರಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.

11 / 11
Follow us
ಉಡುಪಿ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಥಳಿತ

ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕಿದೆ: ಪರಮೇಶ್ವರ್

ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ

ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್

ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ

Live: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪ ನೇರ ಪ್ರಸಾರ

ಅಂಜನಾದ್ರಿ ಬೆಟ್ಟದಲ್ಲಿ ನೆರೆದಿದ್ದಾರೆ ಮಾಲೆ ಧರಿಸಿರುವ ಸಾವಿರಾರು ಭಕ್ತರು

ಮೈಸೂರು ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕ ನೆರವು

ಹೇಗಿದೆ ನೋಡಿ ನಟಿ ಶ್ರುತಿ ಹೊಸ ಮನೆ; ಪ್ರಶಸ್ತಿ ಇಡಲು ಪ್ರತ್ಯೇಕ ಶೋಕೇಸ್

ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?
ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?