Updated on: Mar 02, 2024 | 2:52 PM
ವೆಲ್ಲಿಂಗ್ಟನ್ನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 1 ವಿಕೆಟ್ ಕಬಳಿಸುವುದರೊಂದಿಗೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ವಿಶೇಷ ದಾಖಲೆ ಬರೆದಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 10ನೇ ನಾಯಕ ಎನಿಸಿಕೊಂಡಿದ್ದಾರೆ.
ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 10 ಓವರ್ಗಳನ್ನು ಎಸೆದ ಕಮಿನ್ಸ್ 33 ರನ್ ನೀಡಿ 1 ವಿಕೆಟ್ ಕಬಳಿಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಕಬಳಿಸಿದ ವಿಶ್ವದ 10ನೇ ಕ್ಯಾಪ್ಟನ್ ಎನಿಸಿಕೊಂಡರು. ಹಾಗೆಯೇ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 2ನೇ ನಾಯಕ ಎಂಬ ಹಿರಿಮೆಗೆ ಪಾತ್ರರಾದರು.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಚಿ ಬೆನಾಡ್ ಈ ಸಾಧನೆ ಮಾಡಿದ್ದರು. ಇದೀಗ 100 ವಿಕೆಟ್ಗಳನ್ನು ಪೂರೈಸುವ ಮೂಲಕ ಪ್ಯಾಟ್ ಕಮಿನ್ಸ್ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ನಾಯಕ ಎಂಬ ದಾಖಲೆ ಪಾಕಿಸ್ತಾನದ ಇಮ್ರಾನ್ ಖಾನ್ ಹೆಸರಿನಲ್ಲಿದೆ. ಪಾಕ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಒಟ್ಟು 187 ವಿಕೆಟ್ಗಳನ್ನು ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇಮ್ರಾನ್ ಖಾನ್ ಅಲ್ಲದೆ ರಿಚಿ ಬೆನಾಡ್ (138 ವಿಕೆಟ್ಸ್), ಗ್ಯಾರಿ ಸೋಬರ್ಸ್ (117), ಡೇನಿಯಲ್ ವೆಟ್ಟೋರಿ (116), ಕಪಿಲ್ ದೇವ್ (111), ವಾಸಿಂ ಅಕ್ರಮ್ (107), ಬಿಷನ್ ಸಿಂಗ್ ಬೇಡಿ (106), ಶಾನ್ ಪೊಲಾಕ್ (103), ಜೇಸನ್ ಹೋಲ್ಡರ್ (100) ಈ ಸಾಧನೆ ಮಾಡಿದ್ದಾರೆ.
ಇದೀಗ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಕಬಳಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ 10ನೇ ಕ್ಯಾಪ್ಟನ್ ಎಂಬ ವಿಶ್ವ ದಾಖಲೆಯನ್ನು ಪ್ಯಾಟ್ ಕಮಿನ್ಸ್ ತಮ್ಮದಾಗಿಸಿಕೊಂಡಿದ್ದಾರೆ.