21ನೇ ಶತಮಾನದ ಅತೀ ವೇಗದ ಡಬಲ್ ಸೆಂಚುರಿ ಸಿಡಿಸಿದ ಪೃಥ್ವಿ ಶಾ

Updated on: Oct 28, 2025 | 7:30 AM

Prithvi Shaw Double Century: ಚಂಡೀಗಢ್ ನ ಸೆಕ್ಟರ್-16 ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಪೃಥ್ವಿ ಶಾ ಸ್ಫೋಟಕ ದ್ವಿಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಪೃಥ್ವಿ 156 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 29 ಫೋರ್ ಗಳೊಂದಿಗೆ ಅಜೇಯ 222 ರನ್ ಬಾರಿಸಿದ್ದಾರೆ.

1 / 6
ಸದಾ ವಿವಾದಗಳಿಂದ ಸುದ್ದಿಯಲ್ಲಿರುತ್ತಿದ್ದ ಪೃಥ್ವಿ ಶಾ (Prithvi Shaw) ಬ್ಯಾಟ್ ಕೊನೆಗೂ ಸದ್ದು ಮಾಡಿದೆ‌. ಅದು ಸಹ ಸ್ಫೋಟಕ ಡಬಲ್ ಸೆಂಚುರಿಯೊಂದಿಗೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯ ಎಲೈಟ್ ಗ್ರೂಪ್ ಬಿ ಪಂದ್ಯದಲ್ಲಿ ಪೃಥ್ವಿ ಶಾ ಸಿಡಿಲಬ್ಬರದ ದ್ವಿಶತಕ ಬಾರಿಸಿದ್ದಾರೆ.

2 / 6
ಚಂಡೀಗಢ್ ವಿರುದ್ಧದ ಈ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಮಹಾರಾಷ್ಟ್ರ ಪರ ಆರಂಭಿಕನಾಗಿ ಕಣಕ್ಕಿಳಿದ ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಪೃಥ್ವಿ ಬ್ಯಾಟ್ ನಿಂದ ಕೇವಲ 72 ಎಸೆತಗಳಲ್ಲಿ ಶತಕ ಮೂಡಿಬಂತು.

3 / 6
ಭರ್ಜರಿ ಸೆಂಚುರಿ ಬಳಿಕ ಆರ್ಭಟ ಮುಂದುವರೆಸಿದ ಪೃಥ್ವಿ ಶಾ ಚಂಡೀಗಢ್ ಬೌಲರ್‌ಗಳ ಬೆಂಡೆತ್ತಿದರು. ಈ ಮೂಲಕ ಕೇವಲ 141 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಇದು 21ನೇ ಶತಮಾನದಲ್ಲಿ ರಣಜಿ ಟೂರ್ನಿಯಲ್ಲಿ ಮೂಡಿಬಂದ ಅತೀ ವೇಗದ ಡಬಲ್ ಸೆಂಚುರಿ ಎಂಬುದು ವಿಶೇಷ.

4 / 6
ಇದಕ್ಕೂ ಮುನ್ನ ರಣಜಿ ಎಲೈಟ್ ಗ್ರೂಪ್ ಪಂದ್ಯದಲ್ಲಿ ಅತೀ ವೇಗದ ದ್ವಿಶತಕ ಬಾರಿಸಿದ್ದು ರವಿ ಶಾಸ್ತ್ರಿ. 1984 ರಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ರವಿ ಶಾಸ್ತ್ರಿ ಬರೋಡ ವಿರುದ್ಧ ಕೇವಲ 123 ಎಸೆತಗಳಲ್ಲಿ ಡಬಲ್ ಸೆಂಚುರಿ ಸಿಡಿಸಿದ್ದರು. ಇದು ರಣಜಿ ಇತಿಹಾಸದಲ್ಲಿ ಮೂಡಿಬಂದ ಅತೀ ವೇಗದ ದ್ವಿಶತಕವಾಗಿದೆ.

5 / 6
ಇದೀಗ 141 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಪೃಥ್ವಿ ಶಾ 21ನೇ ಶತಮಾನದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಡಬಲ್ ಸೆಂಚುರಿ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ರಣಜಿ ಟೂರ್ನಿಯ ಎಲೈಟ್ ಗ್ರೂಪ್ ಪಂದ್ಯದಲ್ಲಿ ಅತೀ ವೇಗವಾಗಿ ದ್ವಿಶತಕ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

6 / 6
ಇನ್ನು ಈ ಪಂದ್ಯದಲ್ಲಿ 156 ಎಸೆತಗಳನ್ನು ಎದುರಿಸಿದ ಪೃಥ್ವಿ ಶಾ 5 ಭರ್ಜರಿ ಸಿಕ್ಸ್ ಹಾಗೂ 29 ಫೋರ್ ಗಳೊಂದಿಗೆ ಅಜೇಯ 222 ರನ್ ಬಾರಿಸಿದ್ದಾರೆ. ಈ ಡಬಲ್ ಸೆಂಚುರಿ ನೆರವಿನೊಂದಿಗೆ ಮಹಾರಾಷ್ಟ್ರ ತಂಡವು ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 359 ರನ್ ಪೇರಿಸಿ ಡಿಕ್ಲೇರ್ ಘೋಷಿಸಿದೆ.