AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

89 ರನ್​ಗೆ ಆಲೌಟ್: 10 ವಿಕೆಟ್ ಕಬಳಿಸಿದ ಆಖಿಬ್ ನಬಿ

Auqib Nabi: ಜಮ್ಮು ಕಾಶ್ಮೀರ ವೇಗಿ ಆಖಿಬ್ ನಬಿ ಕಳೆದೊಂದು ವರ್ಷದಿಂದ ದೇಶೀಯ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ದುಲೀಪ್ ಟ್ರೋಫಿಯಲ್ಲಿ ಸತತ ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ರಣಜಿ ಟೂರ್ನಿ ಪಂದ್ಯವೊಂದರಲ್ಲಿ 10 ವಿಕೆಟ್ ಉರುಳಿಸಿ ಸಂಚಲನ ಸೃಷ್ಟಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Oct 28, 2025 | 8:31 AM

Share
ರಣಜಿ ಟೂರ್ನಿ ಗ್ರೂಪ್-ಬಿ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಜಮ್ಮು-ಕಾಶ್ಮೀರ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ವೇಗಿ ಆಖಿಬ್ ನಬಿ (Auqib Nabi). ಈ ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು-ಕಾಶ್ಮೀರ ತಂಡದ ನಾಯಕ ಪರಸ್ ಡೋಗ್ರಾ ಬೌಲಿಂಗ್ ಆಯ್ದುಕೊಂಡಿದ್ದರು.

1 / 5
ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಆಖಿಬ್ ನಬಿ ಹಾಗೂ ಸುನಿಲ್ ಕುಮಾರ್ ರಾಜಸ್ಥಾನ್ ಬ್ಯಾಟರ್​ಗಳನ್ನು ಇನ್ನಿಲ್ಲದಂತೆ ಕಾಡಿದರು. ಪರಿಣಾಮ ಮೊದಲ ಇನಿಂಗ್ಸ್​ನಲ್ಲಿ ರಾಜಸ್ಥಾನ್ ಕೇವಲ 152 ರನ್​ಗಳಿಗೆ ಆಲೌಟ್ ಆಯಿತು. ಜಮ್ಮು ಕಾಶ್ಮೀರ ಪರ ಆಖಿಬ್ ನಬಿ 29 ರನ್ ನೀಡಿ 3 ವಿಕೆಟ್ ಪಡೆದರೆ, ಸುನಿಲ್ ಕುಮಾರ್ 32 ರನ್ ನೀಡಿ 4 ವಿಕೆಟ್ ಉರುಳಿಸಿದರು.

2 / 5
ಆ ಬಳಿಕ ಮೊದಲ ಇನಿಂಗ್ಸ್ ಆಡಿದ ಜಮ್ಮು ಕಾಶ್ಮೀರ ಪರ ಅಬ್ದುಲ್ ಸಮದ್ 76 ರನ್​ ಚಚ್ಚಿದರು. ಇನ್ನು 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಖಿಬ್ ನಬಿ ಭರ್ಜರಿ ಬ್ಯಾಟಿಂಗ್ ಪ್ರದರ್ಶೀಸಿದರು. ಕೇವಲ 65 ಎಸೆತಗಳನ್ನು ಎದುರಿಸಿದ ಆಖಿಬ್ 2 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 55 ರನ್ ಬಾರಿಸಿದರು. ಈ ಮೂಲಕ ಜಮ್ಮು ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ 282 ರನ್ ಕಲೆಹಾಕಿತು.

3 / 5
130 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ ತಂಡಕ್ಕೆ ಆಖಿಬ್ ನಬಿ ಆಘಾತದ ಮೇಲೆ ಆಘಾತ ನೀಡಿದ್ದರು. ತಾನೆಸೆದ ಮೊದಲ 6 ಓವರ್​ಗಳಲ್ಲಿ ಕೇವಲ 5 ರನ್ ನೀಡಿ ಆಖಿಬ್ 5 ವಿಕೆಟ್ ಉರುಳಿಸಿದರು. ಇದಾದ ಬಳಿಕ ಮತ್ತೆರಡು ವಿಕೆಟ್ ಪಡೆದರು. ಈ ಮೂಲಕ 11 ಓವರ್​ಗಳಲ್ಲಿ ಕೇವಲ 24 ರನ್ ನೀಡಿ 7 ವಿಕೆಟ್ ಕಬಳಿಸಿದರು. ಪರಿಣಾಮ ರಾಜಸ್ಥಾನ್ ತಂಡವು ಕೇವಲ 89 ರನ್​​ಗೆ ಆಲೌಟ್ ಆಯಿತು.

4 / 5
ಈ ಮೂಲಕ ಜಮ್ಮು ಕಾಶ್ಮೀರ ತಂಡವು ಇನಿಂಗ್ಸ್ ಹಾಗೂ 41 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇತ್ತ ಎರಡು ಇನಿಂಗ್ಸ್​ಗಳಲ್ಲಿ ಮಾರಕ ದಾಳಿ ಸಂಘಟಿಸಿದ ಬಲಗೈ ವೇಗಿ ಆಖಿಬ್ ನಬಿ  ಒಟ್ಟು 10 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 

5 / 5
ಕ್ರಾಂತಿ ಚರ್ಚೆ ಮಧ್ಯೆ ರಾಜಣ್ಣ ನಿವಾಸದಲ್ಲಿಂದು ಡಿನ್ನರ್, ಸಿಎಂ ಭಾಗಿ

ಗಿಲ್ಲಿ ನಟನ ಮೇಲೆ ಏಕಾಏಕಿ ದಾಳಿಗೆ ಇಳಿದ ಅಶ್ವಿನಿ, ಧ್ರುವಂತ್

ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ?

ರೋಹಿಣಿ ನಕ್ಷತ್ರದಲ್ಲಿ ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ವಿವರಣೆ ಇಲ್ಲಿದೆ

ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು; ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದ

ಬೇರೊಬ್ಬರೊಂದಿಗೆ ಓಡಿಹೋದ ಹೆಂಡ್ತಿ: ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ ಪತಿ

ಇದು ಕೊನೆ ಎಚ್ಚರಿಕೆ: ಸರ್ಕಾರಕ್ಕೆ ಮತ್ತೊಂದು ಡೆಡ್​​ಲೈನ್ ನೀಡಿದ ರೈತರು

ಬೆಳಗಾವಿ ಕಬ್ಬು ಬೆಳೆಗಾರರ ಕಿಚ್ಚು: ಸ್ಥಳಕ್ಕೆ ಓಡಿ ಬಂದ ಸಚಿವ ಹೇಳಿದ್ದೇನು?

ರಾಹುಲ್, ಲಾಲುಗೆ ಸೀತಾ ಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ; ಅಮಿತ್ ಶಾ

8 ದಿನ ಬಳಿಕ ಧರಣಿ ಸ್ಥಳಕ್ಕೆ ಬಂದ ಸಚಿವರ ವಿರುದ್ಧ ರೊಚ್ಚಿಗೆದ್ದ ರೈತರು