PSL 2024: ಒಂದೇ ತಂಡದಲ್ಲಿ ಮೂವರು ಸಹೋದರರು..!
TV9 Web | Updated By: ಝಾಹಿರ್ ಯೂಸುಫ್
Updated on:
Feb 13, 2024 | 3:17 PM
PSL 2024: ಪಾಕಿಸ್ತಾನ್ ಸೂಪರ್ ಲೀಗ್ನ 9ನೇ ಆವೃತ್ತಿ ಫೆಬ್ರವರಿ 17 ರಿಂದ ಶುರುವಾಗಲಿದೆ. 6 ತಂಡಗಳ ನಡುವಣ ಈ ಟೂರ್ನಿಯಲ್ಲಿ ಇಸ್ಲಾಮಾಬಾದ್ ಯುನೈಟೆಡ್, ಕರಾಚಿ ಕಿಂಗ್ಸ್, ಲಾಹೋರ್ ಖಲಂದರ್ಸ್, ಮುಲ್ತಾನ್ ಸುಲ್ತಾನ್ಸ್, ಪೇಶಾವರ್ ಝಲ್ಮಿ, ಖ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಗಳು ಕಣಕ್ಕಿಳಿಯಲಿದೆ.
1 / 5
ಪಾಕಿಸ್ತಾನ್ ಸೂಪರ್ ಲೀಗ್ ಸೀಸನ್-9 ರಲ್ಲಿ ನಸೀಮ್ ಶಾ ಸಹೋದರು ಒಂದೇ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇಸ್ಲಾಮಾಬಾದ್ ಯುನೈಟೆಡ್ ಫ್ರಾಂಚೈಸಿಯು ಈ ಮೂವರು ಸಹೋದರರನ್ನು ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಒಂದೇ ಲೀಗ್ನಲ್ಲಿ ಒಂದೇ ತಂಡದ ಪರ ಕಣಕ್ಕಿಳಿಯಲು ಅಣ್ಣ ತಮ್ಮಂದಿರು ತುದಿಗಾಲಲ್ಲಿ ನಿಂತಿದ್ದಾರೆ.
2 / 5
ನಸೀಮ್ ಶಾ ಅವರಂತೆ ಇವರಿಬ್ಬರು ಕಿರಿಯ ಸಹೋದರರು ಕೂಡ ವೇಗದ ಬೌಲರ್ಗಳು ಎಂಬುದು ವಿಶೇಷ. ನಸೀಮ್ ಈಗಾಗಲೇ ಪಾಕಿಸ್ತಾನ್ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮತ್ತೊಂದೆಡೆ ಹುನೈನ್ ಶಾ ಒಂದಷ್ಟು ಲೀಗ್ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.
3 / 5
ಇನ್ನು ಅತ್ಯಂತ ಕಿರಿಯ ಸಹೋದರ ಉಬೈದ್ ಶಾ ಇತ್ತೀಚೆಗೆ ಮುಕ್ತಾಯಗೊಂಡ ಅಂಡರ್-19 ವಿಶ್ವಕಪ್ನಲ್ಲಿ ಪಾಕಿಸ್ತಾನ್ ಪರ ಕಣಕ್ಕಿಳಿದಿದ್ದರು. ಇದೀಗ ಈ ಮೂವರು ಸಹೋದರರು ಇಸ್ಲಾಮಾಬಾದ್ ಯುನೈಟೆಡ್ ಪರ ಜೊತೆಯಾಗಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
4 / 5
ಇಸ್ಲಾಮಾಬಾದ್ ಯುನೈಟೆಡ್ ತಂಡ: ಜೋರ್ಡನ್ ಕಾಕ್ಸ್, ಶಾದಾಬ್ ಖಾನ್, ಟೈಮಲ್ ಮಿಲ್ಸ್, ಆಝಂ ಖಾನ್, ಇಮಾದ್ ವಾಸಿಮ್, ಫಹೀಮ್ ಅಶ್ರಫ್, ಅಲೆಕ್ಸ್ ಹೇಲ್ಸ್, ಕಾಲಿನ್ ಮನ್ರೋ, ಮ್ಯಾಥ್ಯೂ ಫೋರ್ಡ್, ಸಲ್ಮಾನ್ ಅಲಿ ಅಘಾ, ಖಾಸಿಮ್ ಅಕ್ರಮ್, ಶಹಾಬ್ ಖಾನ್, ರುಮ್ಮನ್ ರಯೀಸ್, ಹುನೈನ್ ಶಾ, ಉಬೈದ್ ಶಾ, ನಸೀಮ್ ಶಾ, ಶಾಮಿಲ್ ಹುಸೇನ್ ಮತ್ತು ಟಾಮ್ ಕರನ್.
5 / 5
ಪಾಕಿಸ್ತಾನ್ ಸೂಪರ್ ಲೀಗ್ನ 9ನೇ ಆವೃತ್ತಿ ಫೆಬ್ರವರಿ 17 ರಿಂದ ಶುರುವಾಗಲಿದೆ. 6 ತಂಡಗಳ ನಡುವಣ ಈ ಟೂರ್ನಿಯಲ್ಲಿ ಇಸ್ಲಾಮಾಬಾದ್ ಯುನೈಟೆಡ್, ಕರಾಚಿ ಕಿಂಗ್ಸ್, ಲಾಹೋರ್ ಖಲಂದರ್ಸ್, ಮುಲ್ತಾನ್ ಸುಲ್ತಾನ್ಸ್, ಪೇಶಾವರ್ ಝಲ್ಮಿ, ಖ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಗಳು ಕಣಕ್ಕಿಳಿಯಲಿದೆ.