- Kannada News Photo gallery Cricket photos SA vs NZ 2nd test all rounder rachin ravindra took 3 wickets against south africa
SA vs NZ: ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಕನ್ನಡಿಗನ ಕಮಾಲ್
Rachin Ravindra: ಕಿವೀಸ್ ಪರ ಬೌಲಿಂಗ್ನಲ್ಲಿ ಕಮಾಲ್ ಮಾಡಿದ ಕಿವೀಸ್ ತಂಡದ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಮೊದಲ ದಿನವೇ ಮೂರು ವಿಕೆಟ್‌ಗಳ ಉರುಳಿಸಿದ್ದಾರೆ. ಸ್ಪಿನ್ನರ್ ರವೀಂದ್ರ, ಆಫ್ರಿಕಾದ ಜುಬೇರ್ ಹಮ್ಜಾ (20), ಕೀಗನ್ ಪೀಟರ್ಸನ್ (2) ಮತ್ತು ಡೇವಿಡ್ ಬೆಡಿಂಗ್ಹ್ಯಾಮ್ (39) ಅವರ ಪ್ರಮುಖ ವಿಕೆಟ್ಗಳನ್ನು ಪಡೆದರು.
Updated on: Feb 13, 2024 | 5:12 PM

ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಫ್ರಿಕಾ ತಂಡ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿದೆ.

ಕಿವೀಸ್ ಪರ ಬೌಲಿಂಗ್ನಲ್ಲಿ ಕಮಾಲ್ ಮಾಡಿದ ಕಿವೀಸ್ ತಂಡದ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಮೊದಲ ದಿನವೇ ಮೂರು ವಿಕೆಟ್‌ಗಳ ಉರುಳಿಸಿದ್ದಾರೆ. ಸ್ಪಿನ್ನರ್ ರವೀಂದ್ರ, ಆಫ್ರಿಕಾದ ಜುಬೇರ್ ಹಮ್ಜಾ (20), ಕೀಗನ್ ಪೀಟರ್ಸನ್ (2) ಮತ್ತು ಡೇವಿಡ್ ಬೆಡಿಂಗ್ಹ್ಯಾಮ್ (39) ಅವರ ಪ್ರಮುಖ ವಿಕೆಟ್ಗಳನ್ನು ಪಡೆದರು.

ಮೊದಲ ಇನ್ನಿಂಗ್ಸ್ನಲ್ಲಿ ಇದುವರೆಗೆ 21 ಓವರ್ ಬೌಲ್ ಮಾಡಿರುವ ರವೀಂದ್ರ ಕೇವಲ 33 ರನ್‌ಗಳನ್ನು ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಕಬಳಿಸಿದ್ದಾರೆ.

ಇನ್ನು ಉಭಯ ತಂಡಗಳ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕದ ಇನ್ನಿಂಗ್ಸ್ ಆಡಿದ್ದ ರವೀಂದ್ರ ನ್ಯೂಜಿಲೆಂಡ್ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡಿದ್ದರು. ರವೀಂದ್ರ ತಮ್ಮ ಇನ್ನಿಂಗ್ಸ್ನಲ್ಲಿ 366 ಎಸೆತಗಳನ್ನು ಎದುರಿಸಿ 26 ಬೌಂಡರಿ, 3 ಸಿಕ್ಸರ್ ಸಹಿತ 240 ರನ್ ಸಿಡಿಸಿದ್ದರು.

ಇವರೊಂದಿಗೆ ಮೊದಲ ಪಂದ್ಯದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಕೂಡ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು.

ಇನ್ನು ಎರಡನೇ ಪಂದ್ಯದ ಬಗ್ಗೆ ಹೇಳುವುದಾದರೆ.. ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಫ್ರಿಕಾ ತಂಡದ ಪರ 37 ನೇ ವಯಸ್ಸಿನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿರುವ ರುವಾನ್ ಡಿ ಸ್ವಾರ್ಡ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಹಾಗೆಯೇ ಆಲ್‌ರೌಂಡರ್ ಶಾನ್ ವಾನ್ ಬರ್ಗ್ ಅವರೊಂದಿಗೆ ಏಳನೇ ವಿಕೆಟ್‌ಗೆ 70 ರನ್‌ಗಳ ಮುರಿಯದ ಜೊತೆಯಾಟವನ್ನು ಮಾಡಿದ್ದಾರೆ.




