ಜನವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿ ಗೆದ್ದ ಗಬ್ಬಾ ಟೆಸ್ಟ್ ಹೀರೋ ಶಮರ್ ಜೋಸೆಫ್..!

ICC Player of the Month award: ಐಸಿಸಿ 2024 ರ ಜನವರಿ ತಿಂಗಳ ಆಟಗಾರ ಪ್ರಶಸ್ತಿ ಪ್ರಕಟವಾಗಿದ್ದು, ವೆಸ್ಟ್ ಇಂಡೀಸ್​ ತಂಡದ ಸ್ಟಾರ್ ಯುವ ಬೌಲರ್ ಶಮರ್ ಜೋಸೆಫ್ ಮೊದಲ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪೃಥ್ವಿಶಂಕರ
|

Updated on: Feb 13, 2024 | 8:39 PM

ಐಸಿಸಿ 2024 ರ ಜನವರಿ ತಿಂಗಳ ಆಟಗಾರ ಪ್ರಶಸ್ತಿ ಪ್ರಕಟವಾಗಿದ್ದು, ವೆಸ್ಟ್ ಇಂಡೀಸ್​ ತಂಡದ ಸ್ಟಾರ್ ಯುವ ಬೌಲರ್ ಶಮರ್ ಜೋಸೆಫ್ ಮೊದಲ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1 / 7
ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಗಬ್ಬಾ ಟೆಸ್ಟ್​ನಲ್ಲಿ 7 ವಿಕೆಟ್ ಪಡೆದು ವೆಸ್ಟ್ ಇಂಡೀಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಶಮರ್ ಜೋಸೆಫ್ ಪ್ರದರ್ಶನ ಪ್ರಮುಖ ಕಾರಣವಾಗಿತ್ತು.

2 / 7
ಇದೀಗ ಜನವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿ ಪಡೆದಿರುವ ಶಮರ್ ಜೋಸೆಫ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್‌ನ ಪುರುಷ ಕ್ರಿಕೆಟಿಗನೊಬ್ಬ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಜೋಸೆಫ್​ಗೂ ಮೊದಲು ವೆಸ್ಟ್ ಇಂಡೀಸ್‌ನ ಯಾವುದೇ ಪುರುಷ ಕ್ರಿಕೆಟಿಗರು ಈ ಪ್ರಶಸ್ತಿಯನ್ನು ಗೆದ್ದಿರಲಿಲ್ಲ.

3 / 7
ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಶಮರ್ ಜೋಸೆಫ್ ತಮ್ಮ ಮೊದಲ ಎಸೆತದಲ್ಲಿ ಸ್ಟೀವ್ ಸ್ಮಿತ್ ಅವರ ವಿಕೆಟ್ ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು.

4 / 7
ಅಲ್ಲದೆ ವೆಸ್ಟ್ ಇಂಡೀಸ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 8 ರನ್‌ಗಳಿಂದ ಸೋಲಿಸಲು ಶಮರ್ ಜೋಸೆಫ್ ಬೌಲಿಂಗ್ ಪ್ರಮುಖ ಕಾರಣವಾಗಿತ್ತು. ಈ ಪಂದ್ಯದಲ್ಲಿ ಜೋಸೆಫ್ ಒಟ್ಟು 8 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ್ದರು.

5 / 7
ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ ಶಮರ್ ಜೋಸೆಫ್ ಎರಡನೇ ಟೆಸ್ಟ್ ಪಂದ್ಯದ 'ಪ್ಲೇಯರ್ ಆಫ್ ದಿ ಮ್ಯಾಚ್' ಮತ್ತು 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಗಳನ್ನು ಪಡೆದರು.

6 / 7
ಇನ್ನು ಜನವರಿ ತಿಂಗಳ ಆಟಗಾರ ಪ್ರಶಸ್ತಿ ರೇಸ್​ನಲ್ಲಿ ಶಮರ್ ಜೋಸೆಫ್ ಹೊರತಾಗಿ ಇಂಗ್ಲೆಂಡ್‌ನ ಒಲಿ ಪೋಪ್ ಮತ್ತು ಆಸ್ಟ್ರೇಲಿಯಾದ ಜೋಸ್ ಹ್ಯಾಜಲ್‌ವುಡ್ ಇದ್ದರು. ಆದರೆ ಈ ಇಬ್ಬರನ್ನು ಹಿಂದಿಕ್ಕಿರುವ ಜೋಸೆಫ್ ಜನವರಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.

7 / 7
Follow us