Quinton de Kock: ಎಬಿಡಿಯ ದಾಖಲೆ ಮುರಿದ ಕ್ವಿಂಟನ್ ಡಿಕಾಕ್

| Updated By: ಝಾಹಿರ್ ಯೂಸುಫ್

Updated on: Oct 24, 2023 | 5:50 PM

Quinton de Kock: ಬಾಂಗ್ಲಾದೇಶ್ ವಿರುದ್ಧ ಈ ಪಂದ್ಯದಲ್ಲಿ 140 ಎಸೆತಗಳನ್ನು ಎದುರಿಸಿದ ಕ್ವಿಂಟನ್ ಡಿಕಾಕ್ 7 ಭರ್ಜರಿ ಸಿಕ್ಸ್ ಹಾಗೂ 15 ಫೋರ್​ಗಳೊಂದಿಗೆ 174 ರನ್ ಬಾರಿಸಿ ಮಿಂಚಿದ್ದರು.

1 / 6
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್​ನ 23ನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಕ್ವಿಂಟನ್ ಡಿಕಾಕ್ ಹಲವು ದಾಖಲೆ ನಿರ್ಮಿಸಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಡಿಕಾಕ್ 101 ಎಸೆತಗಳಲ್ಲಿ ಶತಕ ಪೂರೈಸಿದರು.

2 / 6
ಈ ಶತಕದೊಂದಿಗೆ ವಿಶ್ವಕಪ್​ ಟೂರ್ನಿಯೊಂದರಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಸೌತ್ ಆಫ್ರಿಕಾ ಬ್ಯಾಟರ್​ನ ದಾಖಲೆ ಕ್ವಿಂಟನ್ ಡಿಕಾಕ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಎಬಿ ಡಿವಿಲಿಯರ್ಸ್​ ಹೆಸರಿನಲ್ಲಿತ್ತು.

3 / 6
2011 ರ ವಿಶ್ವಕಪ್​ನಲ್ಲಿ ಎಬಿ ಡಿವಿಲಿಯರ್ಸ್​ 2 ಭರ್ಜರಿ ಶತಕ ಸಿಡಿಸುವ ಮೂಲಕ ಸಿಂಗಲ್ ವರ್ಲ್ಡ್​ಕಪ್ ಎಡಿಷನ್​ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ಸೌತ್ ಆಫ್ರಿಕಾ ಬ್ಯಾಟರ್ ಎನಿಸಿಕೊಂಡಿದ್ದರು.

4 / 6
ಇದೀಗ ಈ ಬಾರಿಯ ವಿಶ್ವಕಪ್​ನಲ್ಲಿ ಕ್ವಿಂಟನ್ ಡಿಕಾಕ್ ಮೂರು ಶತಕಗಳನ್ನು ಬಾರಿಸಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಶತಕಕ್ಕೂ ಮುನ್ನ ಡಿಕಾಕ್ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೆಂಚುರಿ ಸಿಡಿಸಿ ಮಿಂಚಿದ್ದರು.

5 / 6
ಈ ಮೂರು ಶತಕಗಳೊಂದಿಗೆ ಒಂದೇ ವಿಶ್ವಕಪ್​ನಲ್ಲಿ 3 ಸೆಂಚುರಿ ಬಾರಿಸಿದ ಸೌತ್ ಆಫ್ರಿಕಾದ ಮೊದಲ ಬ್ಯಾಟರ್ ಎನಿಸಿಕೊಂಡರು. ಅಲ್ಲದೆ ಶ್ರೀಲಂಕಾದ ಕುಮಾರ ಸಂಗಾಕ್ಕರ ಬಳಿಕ ಒಂದೇ ವಿಶ್ವಕಪ್​ನಲ್ಲಿ 3 ಶತಕ ಬಾರಿಸಿದ 2ನೇ ವಿಕೆಟ್​ ಕೀಪರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

6 / 6
ಬಾಂಗ್ಲಾದೇಶ್ ವಿರುದ್ಧ ಈ ಪಂದ್ಯದಲ್ಲಿ 140 ಎಸೆತಗಳನ್ನು ಎದುರಿಸಿದ ಕ್ವಿಂಟನ್ ಡಿಕಾಕ್ 7 ಭರ್ಜರಿ ಸಿಕ್ಸ್ ಹಾಗೂ 15 ಫೋರ್​ಗಳೊಂದಿಗೆ 174 ರನ್ ಬಾರಿಸಿ ಮಿಂಚಿದ್ದರು.