R Ashwin: ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಅಶ್ವಿನ್

Ravichandran Ashwin: ರವಿಚಂದ್ರನ್ ಅಶ್ವಿನ್ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈವರೆಗೆ 2 ಶತಕಗಳನ್ನು ಬಾರಿಸಿದ್ದಾರೆ. 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 106 ರನ್ ಬಾರಿಸಿದ್ದ ಅಶ್ವಿನ್, ಇದೀಗ ಬಾಂಗ್ಲಾದೇಶ್ ವಿರುದ್ಧ 113 ರನ್​ಗಳನ್ನು ಸಿಡಿಸಿದ್ದಾರೆ. ಈ ಶತಕಗಳೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

|

Updated on: Sep 21, 2024 | 11:23 AM

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಭರ್ಜರಿ ಶತಕ ಸಿಡಿಸಿ ರವಿಚಂದ್ರನ್ ಅಶ್ವಿನ್ (R Ashwin) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಶ್ವಿನ್ 133 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ 113 ರನ್ ಬಾರಿಸಿದ್ದರು.

1 / 6
ಈ ಸೆಂಚುರಿಯೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ 2 ಶತಕ ಹಾಗೂ ಮೂರಕ್ಕಿಂತ ಹೆಚ್ಚು ಬಾರಿ 5 ವಿಕೆಟ್ ಪಡೆದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆಯನ್ನು ರವಿಚಂದ್ರನ್ ಅಶ್ವಿನ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಇಂತಹದೊಂದು ಅಪರೂಪದ ದಾಖಲೆ ಇಂಗ್ಲೆಂಡ್​ನ ಮಾಜಿ ನಾಯಕ ಇಯಾನ್ ಬಾಥಮ್ ಹೆಸರಿನಲ್ಲಿತ್ತು.

2 / 6
ಇಯಾನ್ ಬಾಥಮ್ ಇಂಗ್ಲೆಂಡ್​ನ ಹೆಂಡಿಗ್ಲೆ ಮೈದಾನದಲ್ಲಿ 2 ಟೆಸ್ಟ್​ ಶತಕಗಳನ್ನು ಬಾರಿಸಿದ್ದಾರೆ. ಇದರ ಜೊತೆಗೆ ಮೂರು ಬಾರಿ 5 ವಿಕೆಟ್​ಗಳನ್ನು ಕಬಳಿಸಿದ್ದರು. ಈ ಮೂಲಕ ಒಂದೇ ಮೈದಾನದಲ್ಲಿ 2 ಶತಕ ಹಾಗೂ 3 ಬಾರಿ 5 ವಿಕೆಟ್​ ಪಡೆದ ವಿಶ್ವದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆಯನ್ನು ಬರೆದಿದ್ದರು. ಇದೀಗ ಈ ದಾಖಲೆಯನ್ನು ಅಶ್ವಿನ್ ಅಳಿಸಿ ಹಾಕಿದ್ದಾರೆ.

3 / 6
ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ಅಶ್ವಿನ್ ಈವರೆಗೆ 2 ಟೆಸ್ಟ್​ ಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ 4 ಬಾರಿ ಐದು ವಿಕೆಟ್​ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಒಂದೇ ಮೈದಾನದಲ್ಲಿ ಅತ್ಯಧಿಕ ಶತಕ ಹಾಗೂ ಅತೀ ಹೆಚ್ಚು ಬಾರಿ 5 ವಿಕೆಟ್ ಪಡೆದ ವಿಶ್ವ ದಾಖಲೆಯನ್ನು ರವಿಚಂದ್ರನ್ ಅಶ್ವಿನ್ ತಮ್ಮದಾಗಿಸಿಕೊಂಡಿದ್ದಾರೆ.

4 / 6
ಹಾಗೆಯೇ ಟೆಸ್ಟ್ ಕ್ರಿಕೆಟ್​ನಲ್ಲಿ 8ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಲ ಕ್ರಮಾಂಕದಲ್ಲಿ ಕಣಕ್ಕಿಳಿದು ಅತ್ಯಧಿಕ ಶತಕ ಸಿಡಿಸಿದ ವಿಶ್ವ ದಾಖಲೆ ಸರಿಗಟ್ಟಲು ಅಶ್ವಿನ್​ ಕೇವಲ ಒಂದು ಸೆಂಚುರಿಯ ಅವಶ್ಯಕತೆಯಿದೆ. ಈ ಪಟ್ಟಿಯಲ್ಲಿ ನ್ಯೂಝಿಲೆಂಡ್ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅಗ್ರಸ್ಥಾನದಲ್ಲಿದ್ದಾರೆ.

5 / 6
ವೆಟ್ಟೋರಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಒಟ್ಟು 5 ಶತಕಗಳನ್ನು ಬಾರಿಸಿದ್ದಾರೆ. ಇದೀಗ 8ನೇ ಕ್ರಮಾಂಕದಲ್ಲಿ ಅಶ್ವಿನ್ 4 ಸೆಂಚುರಿಗಳನ್ನು ಸಿಡಿಸಿದ್ದು, ಹೀಗಾಗಿ ಇನ್ನೊಂದು ಶತಕದೊಂದಿಗೆ ವೆಟ್ಟೋರಿಯ ವಿಶ್ವ ದಾಖಲೆಯನ್ನು ಸರಿಗಟ್ಟುವುದನ್ನು ನಿರೀಕ್ಷಿಸಬಹುದು.

6 / 6
Follow us
ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ

ದರ್ಶನ್​ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ

ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್

ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?

ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್

ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ

ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ

ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ

ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್

ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE