- Kannada News Photo gallery Cricket photos Rajkot Cricket stadium name changed before India vs England third test start
IND vs ENG 3rd Test: ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಮುನ್ನ ರಾಜ್‌ಕೋಟ್ ಕ್ರೀಡಾಂಗಣದ ಹೆಸರು ಬದಲು
Saurashtra Cricket Stadium New Name: ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯವನ್ನು ರಾಜ್‌ಕೋಟ್‌ನಲ್ಲಿ ಹೊಸದಾಗಿ ಹೆಸರಿಸಲಾದ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ. ರಾಜ್‌ಕೋಟ್‌ನ ಕ್ರಿಕೆಟ್ ಸ್ಟೇಡಿಯಂಗೆ ಹೊಸ ಹೆಸರೇನು?. ಆದರೆ ಅದಕ್ಕೂ ಮೊದಲು ಆ ಕ್ರೀಡಾಂಗಣದ ಪ್ರಸ್ತುತ ಹೆಸರನ್ನು ತಿಳಿದುಕೊಳ್ಳುವುದು ಮುಖ್ಯ.
Updated on: Feb 06, 2024 | 9:23 AM

ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ ಸದ್ಯ 1-1 ಅಂಕಗಳ ಅಂತರದಿಂದ ಸಮಬಲಗೊಂಡಿದೆ. ಮೂರನೇ ಟೆಸ್ಟ್ ಫೆಬ್ರವರಿ 15 ರಿಂದ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಆದರೆ, ಅದಕ್ಕೂ ಮುನ್ನ ಅಲ್ಲಿನ ಕ್ರೀಡಾಂಗಣದ ಹೆಸರು ಬದಲಾಗಲಿದೆ. ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯವನ್ನು ರಾಜ್‌ಕೋಟ್‌ನಲ್ಲಿ ಹೊಸದಾಗಿ ಹೆಸರಿಸಲಾದ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ.

ರಾಜ್‌ಕೋಟ್‌ನ ಕ್ರಿಕೆಟ್ ಸ್ಟೇಡಿಯಂಗೆ ಹೊಸ ಹೆಸರೇನು?. ಆದರೆ ಅದಕ್ಕೂ ಮೊದಲು ಆ ಕ್ರೀಡಾಂಗಣದ ಪ್ರಸ್ತುತ ಹೆಸರನ್ನು ತಿಳಿದುಕೊಳ್ಳುವುದು ಮುಖ್ಯ. ಸದ್ಯ ರಾಜ್‌ಕೋಟ್‌ನಲ್ಲಿ ಕ್ರೀಡಾಂಗಣಕ್ಕೆ ಯಾವುದೇ ಹೆಸರಿಲ್ಲ. ಇದು ಅದರ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಂದರೆ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‌ನ ಸ್ಟೇಡಿಯಂ ಎಂದು ಮಾತ್ರ ಕರೆಯಲಾಗುತ್ತದೆ.

ಸಿಕ್ಕಿರುವ ಮಾಹಿತಿಯ ಪ್ರಕಾರ, ರಾಜ್‌ಕೋಟ್‌ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂಗೆ ಖ್ಯಾತ ಕ್ರಿಕೆಟ್ ಆಡಳಿತಗಾರ ನಿರಂಜನ್ ಶಾ ಅವರ ಹೆಸರನ್ನು ಇಡಲಾಗುವುದು. ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಆರಂಭಕ್ಕೂ ಒಂದು ದಿನ ಮೊದಲು ಕ್ರಿಕೆಟ್ ಸ್ಟೇಡಿಯಂಗೆ ನಿರಂಜನ್ ಶಾ ಹೆಸರಿಡಲಾಗುವುದು.

ಕ್ರಿಕೆಟ್ ನಿರ್ವಾಹಕರಾಗುವ ಮೊದಲು, ನಿರಂಜನ್ ಶಾ ಸ್ವತಃ ಕ್ರಿಕೆಟಿಗರಾಗಿದ್ದರು. ಅವರು 1965 ಮತ್ತು 1975 ರ ನಡುವೆ ಸೌರಾಷ್ಟ್ರ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದರು. ಪ್ರಸ್ತುತ ನಿರಂಜನ್ ಶಾ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ.

ರಾಜ್‌ಕೋಟ್‌ನ ಸ್ಟೇಡಿಯಂನಲ್ಲಿ ಭಾರತ ತಂಡದ ಟೆಸ್ಟ್ ದಾಖಲೆ ನೋಡುವುದಾದರೆ, ಇಲ್ಲಿ ಭಾರತ ಇದುವರೆಗೆ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 1 ಗೆದ್ದಿದೆ ಮತ್ತು 1 ಡ್ರಾ ಆಗಿದೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಆಡಿದ ಟೆಸ್ಟ್ ಡ್ರಾ ಆಗಿತ್ತು. 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಆಡಿ ಗೆದ್ದಿದೆ.

ಟೆಸ್ಟ್ ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನಲ್ಲಿ ನಡೆದಿದ್ದು, ಇದನ್ನು ಇಂಗ್ಲೆಂಡ್ ಗೆದ್ದಿದೆ. ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ಗೆಲುವು ಸಾಧಿಸಿದೆ. ಮೂರನೇ ಟೆಸ್ಟ್ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ನಾಲ್ಕನೇ ಟೆಸ್ಟ್ ರಾಂಚಿಯಲ್ಲಿ ನಡೆಯಲಿದ್ದು, 5ನೇ ಮತ್ತು ಕೊನೆಯ ಟೆಸ್ಟ್ ಧರ್ಮಶಾಲಾದಲ್ಲಿ ಏರ್ಪಡಿಸಲಾಗಿದೆ.



















