Ranji Trophy 2022: 1 ದ್ವಿಶತಕ, 2 ಶತಕ, 3 ಅರ್ಧಶತಕ: ಬರೋಬ್ಬರಿ 880 ರನ್ ಚಚ್ಚಿದ ಜಾರ್ಖಂಡ್
TV9 Web | Updated By: ಝಾಹಿರ್ ಯೂಸುಫ್
Updated on:
Mar 14, 2022 | 10:09 PM
Ranji Trophy 2022: ಈ ಇನಿಂಗ್ಸ್ನ ಮತ್ತೊಂದು ವಿಶೇಷ ಜಾರ್ಖಂಡ್‌ನ ಕೊನೆಯ ಜೋಡಿ 323 ಎಸೆತಗಳಲ್ಲಿ 191 ರನ್‌ಗಳ ಜೊತೆಯಾಟವಾಡಿದ್ದರು. ಇದರಲ್ಲಿ ಶಹಬಾಜ್ ನದೀಮ್ 103 ಮತ್ತು ರಾಹುಲ್ ಶುಕ್ಲಾ 85 ರನ್ ಕೊಡುಗೆ ನೀಡಿದ್ದರು.
1 / 5
ರಣಜಿ ಟ್ರೋಫಿಯ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ನಾಗಾಲ್ಯಾಂಡ್ ವಿರುದ್ಧ ಜಾರ್ಖಂಡ್ ಹೊಸ ದಾಖಲೆ ನಿರ್ಮಿಸಿದೆ. ಮೊದಲು ಬ್ಯಾಟ್ ಮಾಡಿ ಜಾರ್ಖಂಡ್ ಮೊದಲ ಇನಿಂಗ್ಸ್‌ನಲ್ಲಿ 880 ರನ್ ಗಳಿಸಿ ಹೊಸ ಇತಿಹಾಸ ಬರೆದಿದೆ. ಏಕೆಂದರೆ ಇದು ರಣಜಿ ಟ್ರೋಫಿ ಇತಿಹಾಸದಲ್ಲಿ ಜಾರ್ಖಂಡ್ ತಂಡದ ಗರಿಷ್ಠ ಸ್ಕೋರ್ ಆಗಿದೆ.
2 / 5
ವಿಶೇಷ ಎಂದರೆ ಜಾರ್ಖಂಡ್ ತಂಡದ 6 ಬ್ಯಾಟ್ಸ್‌ಮನ್‌ಗಳು 50 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಸಿರುವುದು. ಹೌದು, ಜಾರ್ಖಂಡ್‌ನ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದರೆ, ಒಬ್ಬರು ದ್ವಿಶತಕ ಸಿಡಿಸಿದ್ದಾರೆ. ಇನ್ನು 3 ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಬಾರಿಸಿ ಮಿಂಚಿದ್ದಾರೆ.
3 / 5
ಜಾರ್ಖಂಡ್ ತಂಡದ ವಿಕೆಟ್ ಕೀಪರ್ ಕುಮಾರ್ ಕುಶಾಗ್ರಾ 266 ರನ್ ಗಳಿಸಿದರೆ, ಶಹಬಾಜ್ ನದೀಮ್ 177 ರನ್ ಬಾರಿಸಿದರು. ಹಾಗೆಯೇ ವಿರಾಟ್ ಸಿಂಗ್ 107 ರನ್ ಸಿಡಿಸಿದರು. ಇದಲ್ಲದೆ 11ನೇ ಕ್ರಮಾಂಕದ ಬ್ಯಾಟ್ಸ್‌ಮನ್ ರಾಹುಲ್ ಶುಕ್ಲಾ ಕೂಡ 85 ರನ್‌ಗಳನ್ನು ಬಾರಿಸುವ ಮೂಲಕ ಮಿಂಚಿದರು.
4 / 5
ಈ ಇನಿಂಗ್ಸ್ನ ಮತ್ತೊಂದು ವಿಶೇಷ ಜಾರ್ಖಂಡ್‌ನ ಕೊನೆಯ ಜೋಡಿ 323 ಎಸೆತಗಳಲ್ಲಿ 191 ರನ್‌ಗಳ ಜೊತೆಯಾಟವಾಡಿದ್ದರು. ಇದರಲ್ಲಿ ಶಹಬಾಜ್ ನದೀಮ್ 103 ಮತ್ತು ರಾಹುಲ್ ಶುಕ್ಲಾ 85 ರನ್ ಕೊಡುಗೆ ನೀಡಿದ್ದರು.
5 / 5
ಅಂದಹಾಗೆ ರಣಜಿ ಟ್ರೋಫಿ ಇತಿಹಾಸದಲ್ಲಿ ಜಾರ್ಖಂಡ್ ಗಳಿಸಿರುವುದು ನಾಲ್ಕನೇ ಅತ್ಯಧಿಕ ಸ್ಕೋರ್ ಆಗಿದೆ. 1993-94ರಲ್ಲಿ ಆಂಧ್ರದ ವಿರುದ್ಧ ಹೈದರಾಬಾದ್ 944 ರನ್ ಗಳಿಸಿರುವುದು ಇನ್ನೂ ಗರಿಷ್ಠ ಸ್ಕೋರ್ ಆಗಿ ದಾಖಲೆಯಾಗಿ ಉಳಿದಿದೆ. ಹಾಗೆಯೇ ತಮಿಳುನಾಡು 912/6 ಮತ್ತು ಮಧ್ಯಪ್ರದೇಶ ಕೂಡ 912/8 ಸ್ಕೋರ್ ಮಾಡಿರುವುದು ಮತ್ತೆರಡು ದಾಖಲೆಗಳಾಗಿವೆ. ಇದೀಗ ಜಾರ್ಖಂಡ್ 880 ರನ್ ಬಾರಿಸಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
Published On - 3:52 pm, Mon, 14 March 22