Sanju Samson: ಸತತ ವೈಫಲ್ಯಗಳಿಂದ ಬಳಲುತ್ತಿರುವ ಸಂಜು ಸ್ಯಾಮ್ಸನ್​ಗೆ ತಂಡದಿಂದ ಗೇಟ್​ಪಾಸ್..!

|

Updated on: Oct 10, 2024 | 9:31 PM

Sanju Samson: ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಕೇರಳ ತಂಡವನ್ನು ಪ್ರಕಟ ಮಾಡಲಾಗಿದೆ. ಇದರಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ತಂಡಕ್ಕೆ ಆಯ್ಕೆಯಾಗಿಲ್ಲ. ಅಕ್ಟೋಬರ್ 11 ರಂದು ಕೇರಳ ತಂಡ ಪಂಜಾಬ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಮೊದಲೆರಡು ಪಂದ್ಯಗಳಿಗೆ ಕೇರಳ ತಂಡದ ನಾಯಕರಾಗಿ ಸಚಿನ್ ಬೇಬಿ ಆಯ್ಕೆಯಾಗಿದ್ದಾರೆ.

1 / 5
ಪ್ರಸ್ತುತ ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ . ಈ ಸರಣಿಗೆ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಸಂಜು ಸ್ಯಾಮ್ಸನ್ ಕೂಡ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸಂಜು ಪ್ರದರ್ಶನ ಉತ್ತಮವಾಗಿಲ್ಲ. ಎರಡನೇ ಪಂದ್ಯದಲ್ಲಿ ಬೇಗ ಔಟಾದ ಸಂಜು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದರು.

2 / 5
ಮೊದಲ ಟಿ20 ಪಂದ್ಯದಲ್ಲಿ 19 ಎಸೆತಗಳಲ್ಲಿ 6 ಬೌಂಡರಿ ಸಹಿತ 29 ರನ್ ಕಲೆಹಾಕಿದ್ದ ಸಂಜು ಸ್ಲೋ ಬಾಲ್​ಗೆ ಬಲಿಯಾಗಿದ್ದರು. ಇದೀಗ ಎರಡನೇ ಟಿ20 ಪಂದ್ಯದಲ್ಲೂ 7 ಎಸೆತಗಳಲ್ಲಿ 2 ಬೌಂಡರಿ ಸಹಿತ 10 ರನ್ ಕಲೆಹಾಕಿದ್ದ ಸಂಜು, ಮತ್ತೊಮ್ಮೆ ಸ್ಲೋ ಬಾಲ್​ಗೆ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಸಂಜು ತಮ್ಮ ಕಳಪೆ ಪ್ರದರ್ಶನದಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.

3 / 5
ಇದರ ಫಲವಾಗಿ ಸಂಜು ಅವರನ್ನು ದೇಶೀ ಟೂರ್ನಿ ರಣಜಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಂದ ತಂಡದಿಂದ ಕೈಬಿಡಲಾಗಿದೆ. ಈ ಆವೃತ್ತಿಯ ರಣಜಿ ಟ್ರೋಫಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಟೂರ್ನಿಗಾಗಿ ಎಲ್ಲಾ ತಂಡಗಳನ್ನು ಪ್ರಕಟಿಸಲಾಗುತ್ತಿದೆ, ಅದರಂತೆ ಕೇರಳ ತಂಡವನ್ನು ಸಹ ಪ್ರಕಟಿಸಲಾಗಿದೆ.

4 / 5
ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಕೇರಳ ತಂಡವನ್ನು ಪ್ರಕಟ ಮಾಡಲಾಗಿದೆ. ಇದರಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ತಂಡಕ್ಕೆ ಆಯ್ಕೆಯಾಗಿಲ್ಲ. ಅಕ್ಟೋಬರ್ 11 ರಂದು ಕೇರಳ ತಂಡ ಪಂಜಾಬ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಮೊದಲೆರಡು ಪಂದ್ಯಗಳಿಗೆ ಕೇರಳ ತಂಡದ ನಾಯಕರಾಗಿ ಸಚಿನ್ ಬೇಬಿ ಆಯ್ಕೆಯಾಗಿದ್ದಾರೆ.

5 / 5
ಕೇರಳ ತಂಡ: ಸಚಿನ್ ಬೇಬಿ (ನಾಯಕ), ರೋಹನ್ ಎಸ್ ಕುನ್ನುಮಲ್, ಕೃಷ್ಣ ಪ್ರಸಾದ್, ಬಾಬಾ ಅಪರಾಜಿತ್, ಅಕ್ಷಯ್ ಚಂದ್ರನ್, ಮೊಹಮ್ಮದ್ ಅಜರುದ್ದೀನ್, ಸಲ್ಮಾನ್ ನಿಜಾರ್, ವತ್ಸಲ್ ಗೋವಿಂದ್, ವಿಷ್ಣು ವಿನೋದ್, ಜಲಜ್ ಸಕ್ಸೇನಾ, ಎ ಆನಂದ್ ಸರ್ವಾತೆ, ಬಾಸಿಲ್ ಥಂಪಿ, ನಿಧೀಶ್ ಎಂಡಿ, ಆಸಿಫ್ ಕೆಎಂ, ಫಾಜಿಲ್ ಫನೂಸ್.