- Kannada News Photo gallery Cricket photos Ranji Trophy Kedar Jadhav slams 283 runs for Maharashtra against Assam hits 12 sixes 21 fours in ranji trophy
Ranji Trophy: 12 ಸಿಕ್ಸ್, 21 ಬೌಂಡರಿ ಸಹಿತ 283 ರನ್ ಚಚ್ಚಿದ ಕೇದಾರ್ ಜಾಧವ್..!
Ranji Trophy: ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 283 ಎಸೆತಗಳನ್ನು ಎದುರಿಸಿದ ಜಾಧವ್, 100 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 12 ಸಿಕ್ಸರ್ ಮತ್ತು 21 ಬೌಂಡರಿ ಸಹಿತ 283 ರನ್ ಚಚ್ಚಿದ್ದಾರೆ.
Updated on:Jan 05, 2023 | 4:17 PM

ಕೇದಾರ್ ಜಾಧವ್.. ಈ ಹೆಸರು ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲೋ ಕಳೆದುಹೋಗಿದೆ. ಜನರು ಈ ಆಟಗಾರನನ್ನು ಮರೆತಿದ್ದಾರೆ. ಟೀಂ ಇಂಡಿಯಾ ಹಾಗೂ ಐಪಿಎಲ್ ತಂಡಗಳು ಕೂಡ ಜಾದವ್ ಮೇಲೆ ನಂಬಿಕೆ ಕಳೆದುಕೊಂಡಿವೆ. ಆದರೆ ಕೇದಾರ್ ಜಾಧವ್ ಮತೊಮ್ಮೆ ತನ್ನ ಆಟದ ಮೂಲಕ ಸುದ್ದಿಯಾಗುತ್ತಿದ್ದಾರೆ.

ಪ್ರಸ್ತುತ ರಣಜಿ ಟ್ರೋಫಿ ಆಡುತ್ತಿರುವ ಕೇದಾರ್ ಜಾಧವ್ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಅಬ್ಬರದ 283 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ.

ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 283 ಎಸೆತಗಳನ್ನು ಎದುರಿಸಿದ ಜಾಧವ್, 100 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 12 ಸಿಕ್ಸರ್ ಮತ್ತು 21 ಬೌಂಡರಿ ಸಹಿತ 283 ರನ್ ಚಚ್ಚಿದ್ದಾರೆ.

ಮೂರು ವರ್ಷಗಳ ವಿರಾಮದ ನಂತರ ಪ್ರಥಮ ದರ್ಜೆ ಪಂದ್ಯವನ್ನು ಆಡುತ್ತಿರುವ ಕೇದಾರ್ ಜಾಧವ್ ಈ ಹಿಂದೆಯೂ ದೇಶೀ ಟೂರ್ಣಿಯಲ್ಲಿ ಟ್ರಿಪಲ್ ಶತಕ ಬಾರಿಸಿದ್ದ ದಾಖಲೆ ಮಾಡಿದ್ದರು ಮಾಡಿದರು.

ಈ ಪಂದ್ಯದಲ್ಲಿ 207 ಎಸೆತಗಳಲ್ಲಿ ದ್ವಿಶತಕ ಪೂರೈಸಿದ ಕೇದಾರ್ ನಂತರ 258 ಎಸೆತಗಳಲ್ಲಿ 250 ರನ್ ಪೂರೈಸಿದರು. ಈ ಪಂದ್ಯದಲ್ಲಿ ಕೇದಾರ್ ಟ್ರಿಪಲ್ ಸೆಂಚುರಿ ಬಾರಿಸಿದ್ದರೆ, ಇದು ಅವರ ಪ್ರಥಮ ದರ್ಜೆ ವೃತ್ತಿಜೀವನದ ಎರಡನೇ ಟ್ರಿಪಲ್ ಸೆಂಚುರಿ ಆಗುತ್ತಿತ್ತು .

ಕಳೆದ 3 ವರ್ಷಗಳಿಂದ ಟೀಮ್ ಇಂಡಿಯಾದಿಂದ ಹೊರಗಿದಿರುವ ಜಾಧವ್ ಫೆಬ್ರವರಿ 2020 ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ರು. ಕಳಪೆ ಫಾರ್ಮ್ ಕಾರಣ, ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಯಿತು. ನಂತರ ಐಪಿಎಲ್‌ನಲ್ಲೂ ಈ ಆಟಗಾರನ ಬ್ಯಾಟ್ ಕೆಲಸ ಮಾಡಲಿಲ್ಲ. ಅಲ್ಲದೆ 2022 ರಲ್ಲಿ ಜಾಧವ್‌ಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. 2023ರ ಐಪಿಎಲ್ ಹರಾಜಿನಲ್ಲಿಯೂ ಯಾವುದೇ ತಂಡ ಜಾಧವ್ ಅವರನ್ನು ಖರೀದಿಸಿರಲಿಲ್ಲ.
Published On - 4:15 pm, Thu, 5 January 23




