IPL 2023: ರಶೀದ್ ಖಾನ್ ಬಿರುಗಾಳಿ ಬ್ಯಾಟಿಂಗ್​ಗೆ ಹಳೆಯ ದಾಖಲೆಗಳು ಧೂಳೀಪಟ

| Updated By: ಝಾಹಿರ್ ಯೂಸುಫ್

Updated on: May 13, 2023 | 5:29 PM

IPL 2023 Kannada: ಈ ಪಂದ್ಯದಲ್ಲಿ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ್ದ ರಶೀದ್ ಖಾನ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

1 / 8
IPL 2023: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 57ನೇ ಪಂದ್ಯದಲ್ಲಿ ರನ್​ ಸುರಿಮಳೆಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಪರ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

2 / 8
ಗುಜರಾತ್ ಟೈಟಾನ್ಸ್ ಬೌಲರ್​ಗಳ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಅಬ್ಬರಿಸಿದ್ದ ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ನೊಂದಿಗೆ ಅಜೇಯ 103 ರನ್ ಬಾರಿಸಿದ್ದರು. ಈ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 5 ವಿಕೆಟ್ ನಷ್ಟಕ್ಕೆ 218 ರನ್ ಕಲೆಹಾಕಿತ್ತು.

3 / 8
ಈ ಬೃಹತ್ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಪರ ರಶೀದ್ ಖಾನ್ ಏಕಾಂಗಿ ಹೋರಾಟ ನಡೆಸಿದ್ದರು. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ರಶೀದ್ 10 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ನೊಂದಿಗೆ ಕೇವಲ 32 ಎಸೆತಗಳಲ್ಲಿ ಅಜೇಯ 79 ರನ್ ಬಾರಿಸಿದ್ದರು. ಇದಾಗ್ಯೂ ಗುಜರಾತ್ ಟೈಟಾನ್ಸ್ ತಂಡವು 27 ರನ್​ಗಳಿಂದ ಸೋಲನುಭವಿಸಿತು.

4 / 8
ಆದರೆ ಈ ಪಂದ್ಯದಲ್ಲಿ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ್ದ ರಶೀದ್ ಖಾನ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

5 / 8
ಐಪಿಎಲ್​ ಇತಿಹಾಸದಲ್ಲೇ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತೀ ಹೆಚ್ಚು ರನ್​ಗಳಿಸಿದ ದಾಖಲೆ ರಶೀದ್ ಖಾನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಪ್ಯಾಟ್ ಕಮಿನ್ಸ್ ಹೆಸರಿನಲ್ಲಿತ್ತು. 2021 ರಲ್ಲಿ ಕಮಿನ್ಸ್ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 66 ರನ್ ಬಾರಿಸಿದ್ದರು. ಇದೀಗ ರಶೀದ್ ಖಾನ್ ಅಜೇಯ 79 ರನ್ ಬಾರಿಸುವ ಮೂಲಕ ಈ ದಾಖಲೆ ಮುರಿದಿದ್ದಾರೆ.

6 / 8
ಗುಜರಾತ್ ಟೈಟಾನ್ಸ್ ಪರ ಇನಿಂಗ್ಸ್​ವೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಕೂಡ ರಶೀದ್ ಖಾನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧ 7 ಸಿಕ್ಸ್ ಬಾರಿಸಿದ ಶುಭ್​ಮನ್ ಗಿಲ್ ಹೆಸರಿನಲ್ಲಿತ್ತು. ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧ 10 ಸಿಕ್ಸ್​ ಸಿಡಿಸಿದ ರಶೀದ್ ಖಾನ್ ಹೊಸ ದಾಖಲೆ ನಿರ್ಮಿಸಿದ್ದಾರೆ.

7 / 8
ಹಾಗೆಯೇ ಐಪಿಎಲ್​ ಪಂದ್ಯವೊಂದರ ಚೇಸಿಂಗ್​ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ 2ನೇ ಬ್ಯಾಟರ್ ಎಂಬ ದಾಖಲೆ ಕೂಡ ರಶೀದ್ ಖಾನ್ ಪಾಲಾಗಿದೆ. ಈ ಪಟ್ಟಿಯಲ್ಲಿ 2008 ರಲ್ಲಿ ಸಿಎಸ್​ಕೆ ವಿರುದ್ಧ 11 ಸಿಕ್ಸ್ ಬಾರಿಸಿದ ಸನತ್ ಜಯಸೂರ್ಯ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧ 10 ಸಿಕ್ಸ್ ಸಿಡಿಸಿ ರಶೀದ್ ಖಾನ್ 2ನೇ ಸ್ಥಾನಕ್ಕೇರಿದ್ದಾರೆ. ರಶೀದ್ ಖಾನ್ ಅಲ್ಲದೆ, ಆ್ಯಡಂ ಗಿಲ್​ಕ್ರಿಸ್ಟ್ ಹಾಗೂ ಕೀಪರ್ ಪೊಲಾರ್ಡ್​ ಕೂಡ ಚೇಸಿಂಗ್ ವೇಳೆ 10 ಸಿಕ್ಸ್ ಬಾರಿಸಿದ್ದರು.

8 / 8
ಇನ್ನು ಐಪಿಎಲ್​ನಲ್ಲಿ 9ನೇ ವಿಕೆಟ್​ಗೆ ಅತ್ಯಧಿಕ ಮೊತ್ತ ಕಲೆಹಾಕಿದ ಜೋಡಿಯಾಗಿ ರಶೀದ್ ಖಾನ್ ಹಾಗೂ ಅಲ್ಝಾರಿ ಜೋಸೆಫ್ ಹೊರಹೊಮ್ಮಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಈ ಜೋಡಿಯು 9ನೇ ವಿಕೆಟ್​ಗೆ 88 ರನ್​ಗಳ ಜೊತೆಯಾಟವಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.