R Ashwin: ಅಶ್ವಿನ್ ದಿಢೀರ್ ಅಲಭ್ಯ: ಬದಲಿ ಆಟಗಾರ ಯಾರು?, ಆತ ಬೌಲಿಂಗ್ ಮಾಡಬಹುದಾ?
India vs England 3rd Test: ಕುಟುಂಬದ ತುರ್ತು ಪರಿಸ್ಥಿತಿಯಿಂದಾಗಿ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಇವರ ಅನುಪಸ್ಥಿತಿ ಭಾರತಕ್ಕೆ ದೊಡ್ಡ ಹಿನ್ನಡೆ ಆಗುವುದು ಖಚಿತ. ಏತನ್ಮಧ್ಯೆ, ಅಶ್ವಿನ್ ಬದಲಿಗೆ ಬದಲಿ ಆಟಗಾರನನ್ನು ಆಡುವ ಹನ್ನೊಂದರಲ್ಲಿ ಸೇರಿಸಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.
1 / 7
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯುತ್ತಿದೆ. ಇಂದು ಟೆಸ್ಟ್ ಪಂದ್ಯದ ಮೂರನೇ ದಿನ. ಆದರೆ ಮೂರನೇ ದಿನದಾಟದ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿದೆ. ರವಿಚಂದ್ರನ್ ಅಶ್ವಿನ್ ಇದ್ದಕ್ಕಿದ್ದಂತೆ ಪಂದ್ಯದಿಂದ ಹಿಂದೆ ಸರಿದಿದ್ದಾರೆ.
2 / 7
ಕುಟುಂಬದ ತುರ್ತು ಪರಿಸ್ಥಿತಿಯಿಂದಾಗಿ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮನೆಗೆ ಮರಳಬೇಕಾಯಿತು. ಆರ್ ಅಶ್ವಿನ್ ನಿನ್ನೆ ಒಂದು ವಿಕೆಟ್‌ನೊಂದಿಗೆ 500 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೊಂದು ದೊಡ್ಡ ಮೈಲಿಗಲ್ಲಾಗಿದೆ.
3 / 7
ರವಿಚಂದ್ರನ್ ಅಶ್ವಿನ್ ಅವರ ಅನುಪಸ್ಥಿತಿಯು ಇಂದು ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಹಿನ್ನಡೆ ಆಗುವುದು ಖಚಿತ. ಏತನ್ಮಧ್ಯೆ, ಅಶ್ವಿನ್ ಬದಲಿಗೆ ಟೀಮ್ ಇಂಡಿಯಾ ಬದಲಿ ಆಟಗಾರನನ್ನು ಆಡುವ ಹನ್ನೊಂದರಲ್ಲಿ ಸೇರಿಸಬಹುದೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
4 / 7
ಐಸಿಸಿ ನಿಯಮದ ಪ್ರಕಾರ, ಅಶ್ವಿನ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಉಳಿದ ನಾಲ್ವರು ಬೌಲರ್‌ಗಳನ್ನು ಮಾತ್ರ ಅವಲಂಬಿಸಬೇಕಾಗಿದೆ. ಬದಲಿ ಆಟಗಾರರಿಗೆ ಸಂಬಂಧಿಸಿದಂತೆ ಐಸಿಸಿ ನಿಯಮಗಳು ಸ್ಪಷ್ಟವಾಗಿವೆ. ಪಂದ್ಯದ ಸಮಯದಲ್ಲಿ ಫೀಲ್ಡಿಂಗ್ ಮಾಡಲು ಬದಲಿ ಆಟಗಾರನನ್ನು ಬಳಸಬಹುದಷ್ಟೆ.
5 / 7
ನಿಯಮ ಏನು ಹೇಳುತ್ತದೆ ಎಂದರೆ, ಮೈದಾನದಲ್ಲಿ ಗಂಭೀರವಾದ ಗಾಯ ಅಥವಾ ಕೋವಿಡ್ -19 ಸೋಂಕಿನ ಸಂದರ್ಭದಲ್ಲಿ ಬದಲಿ ಆಟಗಾರನನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳಬಹುದು, ಆ ಆಟಗಾರನ ಸ್ಥಾನ ತುಂಬಬಹುದು. ಆದರೆ, ಕೌಟುಂಬಿಕ ಕಾರಣಗಳಿಂದ ಅಶ್ವಿನ್ ಮೈದಾನ ತೊರೆದಿರುವ ಕಾರಣ ಬದಲಿ ಆಟಗಾರ ಫೀಲ್ಡಿಂಗ್ ಮಾತ್ರ ಮಾಡಬಹುದು.
6 / 7
ಅಶ್ವಿನ್ಗೆ ಬದಲಿ ಆಟಗಾರನಾಗಿ ಬಂದ ಆಟಗಾರನಿಗೆ ಬೌಲಿಂಗ್ ಮಾಡಲು ಅವಕಾಶವಿರುವುದಿಲ್ಲ. ಗಾಯ ಅಥವಾ ಕೋವಿಡ್‌ನಿಂದಾಗಿ ಇವರು ಮೈದಾನವನ್ನು ತೊರೆದಿಲ್ಲ. ಭಾರತಕ್ಕೆ ಮೈದಾನದಲ್ಲಿ ಬದಲಿ ಆಟಗಾರ ಫೀಲ್ಡಿಂಗ್ಗೆ ಮಾತ್ರ ಸಿಗಲಿದೆ. ಇದು ರೋಹಿತ್ ಪಡೆಗೆ ದೊಡ್ಡ ಹಿನ್ನಡೆ ಆಗುವುದು ಖಚಿತ. ಬದಲಿ ಆಟಗಾರ ಅಕ್ಷರ್ ಪಟೇಲ್ ಅಥವಾ ವಾಷಿಂಗ್ಟನ್ ಸುಂದರ್ ಆಗುವ ಸಾಧ್ಯತೆ ಇದೆ.
7 / 7
ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದೆ. ಭಾರತ ಇನ್ನೂ 238 ರನ್‌ಗಳ ಮುನ್ನಡೆ ಹೊಂದಿದೆ. ಟೆಸ್ಟ್‌ನಲ್ಲಿ ಹಿಡಿತ ಸಾಧಿಸಲು ಟೀಮ್ ಇಂಡಿಯಾ ಇಂದು ಇಂಗ್ಲೆಂಡ್‌ನ ಇನ್ನಿಂಗ್ಸ್ ಅನ್ನು ಬೇಗನೆ ಮುಗಿಸಬೇಕಾಗಿದೆ.