IPL 2023: ಏಪ್ರಿಲ್ 23 ಮತ್ತು RCB ತಂಡದ 3 ದಾಖಲೆಗಳು: ಇವತ್ತಿನ ಕಥೆಯೇನು?

Edited By:

Updated on: Apr 23, 2023 | 2:48 PM

IPL 2023 RCB vs RR: ಏಪ್ರಿಲ್ 23 ರಂದೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಹೀಗಾಗಿಯೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಯಾವ ದಾಖಲೆ ಬರೆಯಲಿದೆ ಎಂಬುದೇ ಈಗ ಕುತೂಹಲ.

1 / 10
IPL 2023: ಐಪಿಎಲ್​ ಇತಿಹಾಸದ ಅತ್ಯಂತ ಗರಿಷ್ಠ ಸ್ಕೋರ್ ಯಾವುದು ಎಂದು ಕೇಳಿದ್ರೆ ಥಟ್ಟನೆ ಬರುವ ಉತ್ತರ 263. ಕಳೆದ 10 ಸೀಸನ್​ ಐಪಿಎಲ್​ನಿಂದ ಯಾರಿಂದಲೂ ಮುರಿಯಲು ಸಾಧ್ಯವಾಗದ ಇಂತಹದೊಂದು ದಾಖಲೆ ನಿರ್ಮಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB).

IPL 2023: ಐಪಿಎಲ್​ ಇತಿಹಾಸದ ಅತ್ಯಂತ ಗರಿಷ್ಠ ಸ್ಕೋರ್ ಯಾವುದು ಎಂದು ಕೇಳಿದ್ರೆ ಥಟ್ಟನೆ ಬರುವ ಉತ್ತರ 263. ಕಳೆದ 10 ಸೀಸನ್​ ಐಪಿಎಲ್​ನಿಂದ ಯಾರಿಂದಲೂ ಮುರಿಯಲು ಸಾಧ್ಯವಾಗದ ಇಂತಹದೊಂದು ದಾಖಲೆ ನಿರ್ಮಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB).

2 / 10

2013 ರ ಏಪ್ರಿಲ್ 23 ರಂದು ಆರ್​ಸಿಬಿ ಹಾಗೂ ಪುಣೆ ವಾರಿಯರ್ಸ್ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಪುಣೆ ನಾಯಕ ಆರೋನ್ ಫಿಂಚ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ನಾಯಕನ ನಿರ್ಧಾರ ತಪ್ಪು ಎನ್ನುವಂತೆ ಆರ್​ಸಿಬಿ ತಂಡಕ್ಕೆ ಕ್ರಿಸ್ ಗೇಲ್ ಹಾಗೂ ತಿಲಕರತ್ನೆ ದಿಲ್ಶಾನ್ ಭರ್ಜರಿ ಆರಂಭ ಒದಗಿಸಿದ್ದರು.

3 / 10

ಮೊದಲ ವಿಕೆಟ್​ಗೆ 167 ರನ್​ಗಳ ಜೊತೆಯಾಟವಾಡಿದ ಈ ಜೋಡಿ ಅಬ್ಬರಿಸಿದ್ದರು. ಈ ವೇಳೆ ದಿಲ್ಶಾನ್ ಕಲೆಹಾಕಿದ್ದು ಕೇವಲ 33 ರನ್​ ಮಾತ್ರ. ಅಂದರೆ ಅದಾಗಲೇ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು.

4 / 10

ಶತಕದ ಬಳಿಕ ಮತ್ತಷ್ಟು ಅಬ್ಬರಿಸಿದ ಗೇಲ್ 17 ಭರ್ಜರಿ ಸಿಕ್ಸ್ ಹಾಗೂ 13 ಫೋರ್​ನೊಂದಿಗೆ ಕೇವಲ 66 ಎಸೆತಗಳಲ್ಲಿ ಅಜೇಯ 175 ರನ್​ ಸಿಡಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಇದರೊಂದಿಗೆ ಆರ್​ಸಿಬಿ ತಂಡದ ಸ್ಕೋರ್ 5 ವಿಕೆಟ್ ನಷ್ಟಕ್ಕೆ 263 ಕ್ಕೆ ಬಂದು ನಿಂತಿತು. ಇದು ಐಪಿಎಲ್ ಇತಿಹಾಸದ ಮೂಡಿಬಂದ ಗರಿಷ್ಠ ಸ್ಕೋರ್ ಆಗಿದೆ.

5 / 10

ಇಂತಹದೊಂದು ಐತಿಹಾಸಿಕ ದಾಖಲೆ ಬರೆದ ಆರ್​ಸಿಬಿ ಕೆಲ ವರ್ಷಗಳ ಬೆನ್ನಲ್ಲೇ ಅತ್ಯಂತ ಕೆಟ್ಟ ದಾಖಲೆಯನ್ನೂ ಕೂಡ ತನ್ನದಾಗಿಸಿಕೊಂಡಿತ್ತು ಎಂಬುದು ವಿಶೇಷ. ಅಂದರೆ 2017 ರಲ್ಲಿ ಆರ್​ಸಿಬಿ ತಂಡವು ಕೆಕೆಆರ್ ನೀಡಿದ 131 ರನ್​ಗಳ ಗುರಿಯನ್ನು ಬೆನ್ನತ್ತಿ ಕೇವಲ 49 ರನ್​ಗಳಿಗೆ ಆಲೌಟ್ ಆಯಿತು.

6 / 10

ಈ ವೇಳೆ ಆರ್​ಸಿಬಿ ಪರ ಮೂಡಿಬಂದ ಗರಿಷ್ಠ ವೈಯುಕ್ತಿಕ ಸ್ಕೋರ್ 9. ಇದನ್ನು ಬಾರಿಸಿದ್ದು ಕೇದರ್ ಜಾಧವ್. ಅಂದು ಕೇವಲ 49 ರನ್​ಗೆ ಆಲೌಟ್ ಆಗುವ ಮೂಲಕ ಐಪಿಎಲ್​ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಸರ್ವಪತನ ಕಂಡ ತಂಡ ಎಂಬ ಕೆಟ್ಟ ದಾಖಲೆಯನ್ನು ಆರ್​ಸಿಬಿ ತನ್ನದಾಗಿಸಿಕೊಂಡಿತು.

7 / 10

ಅಂದರೆ ಐಪಿಎಲ್​ನ ಗರಿಷ್ಠ ಸ್ಕೋರ್ ಹಾಗೂ ಕನಿಷ್ಠ ಸ್ಕೋರ್ ದಾಖಲೆ ಆರ್​ಸಿಬಿ ಹೆಸರಿನಲ್ಲಿದೆ. ವಿಶೇಷ ಎಂದರೆ ಈ ಎರಡೂ ದಾಖಲೆಗಳು ಮೂಡಿಬಂದಿರುವುದು ಏಪ್ರಿಲ್ 23 ರಂದು. 2013 ರ ಏಪ್ರಿಲ್ 23 ರಂದು 263 ರನ್ ಬಾರಿಸಿ ದಾಖಲೆ ಬರೆದರೆ, 2017 ರ ಏಪ್ರಿಲ್ 23 ರಂದು 49 ರನ್​ಗೆ ಆಲೌಟ್​ ಆಗಿ ಅತ್ಯಂತ ಹೀನಾಯ ದಾಖಲೆ ನಿರ್ಮಿಸಿತು.

8 / 10

ಅಷ್ಟೇ ಅಲ್ಲದೆ, ಕಳೆದ ಸೀಸನ್​ನಲ್ಲಿ ಏಪ್ರಿಲ್ 23 ರಂದು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದ ಪಂದ್ಯದಲ್ಲೂ ಆರ್​ಸಿಬಿ ಹೀನಾಯ ಪ್ರದರ್ಶನ ನೀಡಿತ್ತು. ಮುಂಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 16.1 ಓವರ್​ಗಳಲ್ಲಿ ಕೇವಲ 68 ರನ್​ಗಳಿಗೆ ಆಲೌಟ್ ಆಗಿತ್ತು. ಇನ್ನು 8 ಓವರ್​ಗಳಲ್ಲಿ ಈ ಸುಲಭ ಗುರಿಯನ್ನು ಬೆನ್ನತ್ತಿ ಎಸ್​ಆರ್​ಹೆಚ್ ತಂಡ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

9 / 10

ಅಂದರೆ ಏಪ್ರಿಲ್ 23 ಆರ್​ಸಿಬಿ ದಾಖಲೆಯ ಮೊತ್ತ ಕಲೆಹಾಕಿ ಭರ್ಜರಿ ದಾಖಲೆ ನಿರ್ಮಿಸಿದ್ದರೆ, ಎರಡು ಬಾರಿ ಎರಡಂಕಿ ಮೊತ್ತಕ್ಕೆ ಆಲೌಟ್ ಆಗಿದೆ. ಇದೀಗ ಏಪ್ರಿಲ್ 23 ರಂದೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಹೀಗಾಗಿಯೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಯಾವ ದಾಖಲೆ ಬರೆಯಲಿದೆ ಎಂಬುದೇ ಈಗ ಕುತೂಹಲ.

10 / 10

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವೈಶಾಕ್ ವಿಜಯ್‌ಕುಮಾರ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಮೈಕೆಲ್ ಬ್ರೇಸ್‌ವೆಲ್, ಫಿನ್ ಅಲೆನ್, ಸೋನು ಯಾದವ್, ಅನೂಜ್ ರಾವತ್, ಮನೋಜ್ ಭಾಂಡಗೆ, ಆಕಾಶ್ ದೀಪ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ

Published On - 2:46 pm, Sun, 23 April 23

TV9 Web

TV9 Kannada

Read More
Loading...
Unable to load recommendations.
Follow Us