
ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನ 29ನೇ ಪಂದ್ಯದಲ್ಲಿ ವಿಲ್ ಜಾಕ್ಸ್ (Will Jacks) ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಕೊಮಿಲ್ಲಾ ವಿಕ್ಟೋರಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಚಟ್ಟೋಗ್ರಾಮ್ ಚಾಲೆಂಜರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಕೊಮಿಲ್ಲಾ ವಿಕ್ಟೋರಿಯನ್ಸ್ ಪರ ಇನಿಂಗ್ಸ್ ಆರಂಭಿಸಿದ ಲಿಟ್ಟನ್ ದಾಸ್ ಹಾಗೂ ವಿಲ್ ಜಾಕ್ಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್ಗೆ 86 ರನ್ ಕಲೆಹಾಕಿದ ಬಳಿಕ ಲಿಟ್ಟನ್ ದಾಸ್ (60) ವಿಕೆಟ್ ಒಪ್ಪಿಸಿದರು. ದಾಸ್ ಔಟಾದ ಬೆನ್ನಲ್ಲೇ ಜಾಕ್ಸ್ ಅಬ್ಬರ ಶುರು ಮಾಡಿದರು.

ಚಟ್ಟೋಗ್ರಾಮ್ ಚಾಲೆಂಜರ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ವಿಲ್ ಜಾಕ್ಸ್ ಸಿಕ್ಸ್ ಫೋರ್ಗಳ ಸುರಿಮಳೆಗೈದರು. ಪರಿಣಾಮ ಜಾಕ್ಸ್ ಬ್ಯಾಟ್ನಿಂದ ಕೇವಲ 50 ಎಸೆತಗಳಲ್ಲಿ ಭರ್ಜರಿ ಶತಕ ಮೂಡಿಬಂತು.

ಸ್ಪೋಟಕ ಸೆಂಚುರಿ ಬಳಿಕ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಜಾಕ್ಸ್ 53 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 108 ರನ್ ಬಾರಿಸಿದರು. ಮತ್ತೊಂದೆಡೆ ಮೊಯೀನ್ ಅಲಿ 24 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ ಅಜೇಯ 53 ರನ್ ಚಚ್ಚಿದರು. ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕೊಮಿಲ್ಲಾ ವಿಕ್ಟೋರಿಯನ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 239 ರನ್ ಕಲೆಹಾಕಿತು.

ಈ ಬೃಹತ್ ಗುರಿಯನ್ನು ಬೆನ್ನತ್ತಿದ ಚಟ್ಟೋಗ್ರಾಮ್ ಚಾಲೆಂಜರ್ಸ್ ತಂಡದ ತಂಝೀದ್ ಹಸನ್ 41 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 16.3 ಓವರ್ಗಳಲ್ಲಿ 166 ರನ್ಗಳಿಸಿ ಚಟ್ಟೋಗ್ರಾಮ್ ಚಾಲೆಂಜರ್ಸ್ ಆಲೌಟ್ ಆಯಿತು. ಈ ಮೂಲಕ ಕೊಮಿಲ್ಲಾ ವಿಕ್ಟೋರಿಯನ್ಸ್ 73 ರನ್ಗಳ ಭರ್ಜರಿ ಜಯ ಸಾಧಿಸಿತು.

ವಿಶೇಷ ಎಂದರೆ ಕೊಮಿಲ್ಲಾ ವಿಕ್ಟೋರಿಯನ್ಸ್ ಪರ ಸ್ಪೋಟಕ ಶತಕ ಸಿಡಿಸಿ ಮಿಂಚಿರುವ ಇಂಗ್ಲೆಂಡ್ ಆಟಗಾರ ವಿಲ್ ಜಾಕ್ಸ್ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ. IPL 2023 ರಲ್ಲಿ ಜಾಕ್ಸ್ ಅವರನ್ನು ಆರ್ಸಿಬಿ 3.2 ಕೋಟಿ ರೂ.ಗೆ ಖರೀದಿಸಿತು. ಆದರೆ ಗಾಯದ ಕಾರಣ ಕಳೆದ ಸೀಸನ್ನಿಂದ ಹೊರಗುಳಿದಿದ್ದರು. ಇದಾಗ್ಯೂ ಈ ಬಾರಿಯ ಹರಾಜಿಗೂ ಮುನ್ನ ಜಾಕ್ಸ್ ಅವರನ್ನು ಆರ್ಸಿಬಿ ಉಳಿಸಿಕೊಂಡಿತ್ತು. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ ವಿಲ್ ಜಾಕ್ಸ್ ಚೊಚ್ಚಲ ಪಂದ್ಯವಾಡುವ ನಿರೀಕ್ಷೆಯಲ್ಲಿದ್ದಾರೆ.