AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೀಝ ಹೆಂಡ್ರಿಕ್ಸ್ ಸಿಡಿಲಬ್ಬರಕ್ಕೆ ಪಾಕ್ ಬೌಲರ್​​ಗಳು ಧೂಳೀಪಟ

South Africa vs Pakistan: ಪಾಕಿಸ್ತಾನ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಸೌತ್ ಆಫ್ರಿಕಾ 2-0 ಅಂತರದಿಂದ ವಶಪಡಿಸಿಕೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ 11 ರನ್​​ಗಳ ರೋಚಕ ಜಯ ಸಾಧಿಸಿತ್ತು. ಇದೀಗ ಎರಡನೇ ಪಂದ್ಯದಲ್ಲಿ 7 ವಿಕೆಟ್​​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಒಂದು ಪಂದ್ಯ ಬಾಕಿ ಇರುವಂತೆಯೇ ಆತಿಥೇಯರು ಸರಣಿಯನ್ನು ವಶಪಡಿಸಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 14, 2024 | 1:10 PM

ಸೆಂಚುರಿಯನ್​​ನ ಸೂಪರ್​ಸ್ಪೋರ್ಟ್ ಪಾರ್ಕ್​ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಆರಂಭಿಕ ಆಟಗಾರ ರೀಝ ಹೆಂಡ್ರಿಕ್ಸ್.

1 / 5
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡದ ಪರ ಓಪನರ್ ಸೈಮ್ ಅಯ್ಯೂಬ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್​​ನಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಸೈಮ್ 57 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 11 ಫೋರ್​​ಗಳೊಂದಿಗೆ ಅಜೇಯ 98 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಪಾಕಿಸ್ತಾನ್ ತಂಡವು 20 ಓವರ್​​ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು.

2 / 5
207 ರನ್​ಗಳ ಕಠಿಣ ಗುರಿ ಪಡೆದ ಸೌತ್ ಆಫ್ರಿಕಾ ತಂಡಕ್ಕೆ ರೀಝ ಹೆಂಡ್ರಿಕ್ಸ್ ಸ್ಪೋಟಕ ಆರಂಭ ಒದಗಿಸಿದ್ದರು. ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ರೀಝ ಪಾಕ್ ಬೌಲರ್​​ಗಳ ಬೆಂಡೆತ್ತಿದರು. ಪರಿಣಾಮ 29 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು.

3 / 5
ಹಾಫ್ ಸೆಂಚುರಿಯೊಂದಿಗೆ ಸಿಡಿಲಬ್ಬರ ಮುಂದುವರೆಸಿದ ರೀಝ ಹೆಂಡ್ರಿಕ್ಸ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​​ಗಳ ಸುರಿಮಳೆಗೈದರು. ಈ ಮೂಲಕ ಕೇವಲ 54 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಸೆಂಚುರಿ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರೀಝ ಹೆಂಡ್ರಿಕ್ಸ್ 63 ಎಸೆತಗಳಲ್ಲಿ 7 ಫೋರ್ ಹಾಗೂ 10 ಸಿಕ್ಸ್​ಗಳೊಂದಿಗೆ 117 ರನ್ ಚಚ್ಚಿದರು.

4 / 5
ಮತ್ತೊಂದೆಡೆ ರೀಝ ಹೆಂಡ್ರಿಕ್ಸ್​ಗೆ ಉತ್ತಮ ಸಾಥ್ ನೀಡಿದ ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ 38 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 3 ಫೋರ್​​ಗಳೊಂದಿಗೆ ಅಜೇಯ 66 ರನ್ ಬಾರಿಸಿದರು. ಈ ಮೂಲಕ 19.3 ಓವರ್​​ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿ ಸೌತ್ ಆಫ್ರಿಕಾ ತಂಡಕ್ಕೆ 7 ವಿಕೆಟ್​​ಗಳ ಜಯ ತಂದುಕೊಟ್ಟರು.

5 / 5
Follow us
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು

ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ

ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು

ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!

ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!

ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ

ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ

ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?

ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ

ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?