AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಗಾಬಾ ಟೆಸ್ಟ್ ಸಮಯದಲ್ಲಿ ಬದಲಾವಣೆ; ನಾಳೆಯಿಂದ ಇನ್ನು ಬೇಗ ಆರಂಭವಾಗಲಿದೆ ಪಂದ್ಯ

IND vs AUS: ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದಲ್ಲಿ ಮಳೆಯಿಂದಾಗಿ ಮೊದಲ ದಿನದ ಆಟಕ್ಕೆ ಅಡ್ಡಿ ಉಂಟಾಯಿತು. ಇದರಿಂದಾಗಿ, ಎರಡನೇ ದಿನದ ಆಟವನ್ನು 30 ನಿಮಿಷಗಳ ಮುಂಚಿತವಾಗಿ ಆರಂಭಿಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ. ಉಳಿದ ದಿನಗಳ ಆಟದ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಮಳೆಯಿಂದಾಗಿ ಓವರ್‌ಗಳ ಸಂಖ್ಯೆ ಕಡಿಮೆಯಾದರೆ, ಆಟವನ್ನು ಹೆಚ್ಚುವರಿ ಸಮಯಕ್ಕೆ ವಿಸ್ತರಿಸಬಹುದು.

ಪೃಥ್ವಿಶಂಕರ
|

Updated on: Dec 14, 2024 | 3:37 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ ಮೊದಲ ದಿನದಾಟದಲ್ಲಿ ಕೇವಲ 13.2 ಓವರ್​ಗಳ ಆಟ ಮಾತ್ರ ನಡೆಯಿತು. ಹೀಗಾಗಿ ಉಳಿದ 4 ದಿನಗಳಲ್ಲಿ  ಮೊದಲ ದಿನದ ನಷ್ಟವನ್ನು ಸರಿದೂಗಿಸುವ ಸಲುವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

1 / 5
ಆ ಪ್ರಕಾರ, ಎರಡನೇ ದಿನ ಬೇಗನೆ ಪಂದ್ಯವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದೀಗ ಎರಡನೇ ದಿನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಅರ್ಧ ಗಂಟೆ ಮುಂಚಿತವಾಗಿ ಅಂದರೆ 5.50ಕ್ಕೆ ಬದಲಾಗಿ 5.20ಕ್ಕೆ ಆರಂಭವಾಗಲಿದೆ.

2 / 5
ಮೊದಲ ದಿನದಾಟದ ಮೊದಲ ಸೆಷನ್​ನಲ್ಲಿ ಮಳೆಯು ಎರಡು ಬಾರಿ ಆಟವನ್ನು ನಿಲ್ಲಿಸಿತು. ಆದರೆ 14 ಓವರ್‌ಗಳ ನಂತರ ಧಾರಕಾರ ಮಳೆ ಸುರಿದ ಕಾರಣ ಆಟವನ್ನು ನಿಲ್ಲಿಸಬೇಕಾಯಿತು. ಹೀಗಾಗಿ ಟೆಸ್ಟ್ ಪಂದ್ಯದ ಉಳಿದ ನಾಲ್ಕು ದಿನಗಳಲ್ಲಿ 98 ಓವರ್‌ಗಳು ಬೌಲ್ ಆಗಲಿದ್ದು, ನಿಗದಿತ ಸಮಯಕ್ಕಿಂತ ಸ್ವಲ್ಪ ಮೊದಲು ಆಟ ಆರಂಭವಾಗಲಿದೆ.

3 / 5
ಉಳಿದ ದಿನಗಳಲ್ಲಿ ಅಂದರೆ ಮುಂದಿನ ನಾಲ್ಕು ದಿನಗಳಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 12:50ಕ್ಕೆ ಆಟದ ಕೊನೆಯ ಸೆಷನ್ ಮುಗಿಯಲಿದೆ. ಆದರೆ ಮಳೆಯಿಂದಾಗಿ ಇಡೀ ದಿನದಲ್ಲಿ 98 ಓವರ್‌ಗಳು ಬೌಲ್ ಆಗದಿದ್ದರೆ, ನಂತರ ಆಟವನ್ನು ಹೆಚ್ಚುವರಿ ಅರ್ಧ ಘಂಟೆಯವರೆಗೆ ವಿಸ್ತರಿಸಬಹುದು.

4 / 5
ಇಷ್ಟೇ ಅಲ್ಲ, ಎರಡನೇ ದಿನದ ಸೆಷನ್​ಗಳ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಆ ಪ್ರಕಾರ ಮೊದಲ ಸೆಷನ್ ಬೆಳಗ್ಗೆ 5:20 ರಿಂದ 7:50 ರವರೆಗೆ ನಡೆಯಲಿದ್ದು, ಎರಡನೇ ಸೆಷನ್ ಬೆಳಗ್ಗೆ 8:30 ರಿಂದ 10.30 ರವರೆಗೆ ನಡೆಯಲಿದೆ. ಇದಲ್ಲದೆ, ಮೂರನೇ ಸೆಷನ್ ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10:50 ರಿಂದ ಮಧ್ಯಾಹ್ನ 12:50 ರವರೆಗೆ ನಿಗದಿಪಡಿಸಲಾಗಿದೆ. ಆದರೆ ದಿನದಂತ್ಯಕ್ಕೆ 98 ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸದಿದ್ದರೆ, ಆಗ ಆಟವನ್ನು ಮಧ್ಯಾಹ್ನ 1:20 ರವರೆಗೆ ಮುಂದುವರೆಸಲಾಗುತ್ತದೆ.

5 / 5
Follow us
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ

ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್

ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ

ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್

ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ

ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ

ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ

ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್

ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು