Virat Kohli: ವಿರಾಟ್ ಕೊಹ್ಲಿ ರಾಜೀನಾಮೆ ಅಂಗೀಕರಿಸದ RCB: ಮತ್ತೆ ನಾಯಕರಾಗ್ತಾರಾ?
IPL 2022 RCB Captain: ಈ ಬಾರಿಯ ಐಪಿಎಲ್ನಲ್ಲಿ RCB ಬಿ ಗುಂಪಿನಲ್ಲಿದೆ. ಈ ಗುಂಪಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳಿವೆ.
IPL 2022 ಪ್ರಾರಂಭವಾಗುವ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಹೊಸ ನಾಯಕನನ್ನು ಘೋಷಿಸಲಿದೆ. ಮಾರ್ಚ್ 12 ರಂದು RCB ತನ್ನ ಹೊಸ ನಾಯಕ ಯಾರೆಂದು ತಿಳಿಸಲಿದೆ. ಆದರೆ, ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಕುರಿತಾದ ಸುದ್ದಿಯೊಂದು ಹೊರಬಿದ್ದಿದೆ.
1 / 5
ಕ್ರಿಕ್ಟ್ರಾಕರ್ ವೆಬ್‌ಸೈಟ್ ಪ್ರಕಾರ, ವಿರಾಟ್ ಕೊಹ್ಲಿ ಅವರ ರಾಜೀನಾಮೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನೂ ಕೂಡ ಅಂಗೀಕರಿಸಿಲ್ಲ. ಐಪಿಎಲ್ 2021 ರ ನಂತರ ವಿರಾಟ್ ಕೊಹ್ಲಿ ತಂಡದ ನಾಯಕತ್ವವನ್ನು ತೊರೆಯುವುದಾಗಿ ಘೋಷಿಸಿದ್ದರು. ಆದರೆ ಆರ್‌ಸಿಬಿ ಆಡಳಿತ ಮಂಡಳಿ ಇನ್ನೂ ಕೂಡ ರಾಜೀನಾಮೆಯನ್ನು ಒಪ್ಪಿಕೊಂಡಿಲ್ಲ ಎಂದು ವರದಿಯಾಗಿದೆ.
2 / 5
ವಿರಾಟ್ ಕೊಹ್ಲಿ 2008 ರಿಂದ ಆರ್‌ಸಿಬಿ ತಂಡ ಭಾಗವಾಗಿದ್ದಾರೆ. 2013 ರಲ್ಲಿ ಅವರು ತಂಡದ ನಾಯಕತ್ವವನ್ನು ಪಡೆದರು. ಇದಗ್ಯೂ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರಿರಲಿಲ್ಲ. ಬೆಂಗಳೂರು ತಂಡದ ನಾಯಕತ್ವ ತೊರೆದ ನಂತರ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನೂ ಕೂಡ ತೊರೆದಿದ್ದಾರೆ.
3 / 5
ಇದೀಗ ವಿರಾಟ್ ಕೊಹ್ಲಿ ಅವರ ರಾಜೀನಾಮೆ ಅಂಗೀಕರಿಸದಿರುವ ಕಾರಣ, ಅವರು ಮತ್ತೆ ತಂಡದ ನಾಯಕರಾಗಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ಆರ್‌ಸಿಬಿ ತಂಡದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬುದಕ್ಕೆ ಸ್ಪಷ್ಟ ಉತ್ತರ ಮಾರ್ಚ್ 12 ಕ್ಕೆ ಸಿಗಲಿದೆ.
4 / 5
ಇನ್ನು ಈ ಬಾರಿಯ ಐಪಿಎಲ್ನಲ್ಲಿ RCB ಬಿ ಗುಂಪಿನಲ್ಲಿದೆ. ಈ ಗುಂಪಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳಿವೆ. ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಮಾರ್ಚ್ 27 ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯದೊಂದಿಗೆ ಹೊಸ ನಾಯಕ ಕಣಕ್ಕಿಳಿಯಲಿದ್ದಾರೆ.