AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

92 ವರ್ಷಗಳ ಟೆಸ್ಟ್​ ಇತಿಹಾಸದಲ್ಲಿ ರಿಷಭ್ ಪಂತ್ ವಿಶೇಷ ಸಾಧನೆ..!

Australia vs India, 3rd Test: ಬ್ರಿಸ್ಬೇನ್​ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದ ದ್ವಿತೀಯ ದಿನದಾಟದ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 405 ರನ್ ಕಲೆಹಾಕಿದೆ. ಇತ್ತ ಇದೇ ಪಂದ್ಯದ ಮೂಲಕ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ವಿಶೇಷ ಸಾಧನೆ ಮಾಡಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 15, 2024 | 2:08 PM

Share
ರಿಷಭ್ ಪಂತ್ ಟೆಸ್ಟ್ ಕೆರಿಯರ್ ಆರಂಭಿಸಿ 6 ವರ್ಷಗಳು ಕಳೆದಿವೆ. ಈ ಆರು ವರ್ಷಗಳಲ್ಲಿ 41 ಪಂದ್ಯಗಳನ್ನಾಡಿರುವ ಪಂತ್ 80 ಇನಿಂಗ್ಸ್​ಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಈ ವೇಳೆ 150 ಮಂದಿಯನ್ನು ಔಟ್ ಮಾಡುವಲ್ಲಿ ರಿಷಭ್ ಯಶಸ್ವಿಯಾಗಿದ್ದಾರೆ.

1 / 6
ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಉಸ್ಮಾನ್ ಖ್ವಾಜಾ (21) ಕ್ಯಾಚ್ ಹಿಡಿಯುವುದರೊಂದಿಗೆ ರಿಷಭ್ ಪಂತ್ 150ನೇ ಬಲಿ ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಮೈಲುಗಲ್ಲು ಮುಟ್ಟಿದ ಭಾರತದ ಮೂರನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.

2 / 6
ಅಂದರೆ 92 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರ ಕೇವಲ ಮೂವರು ವಿಕೆಟ್ ಕೀಪರ್​​ಗಳು ಮಾತ್ರ 150+ ಗಿಂತ ಹೆಚ್ಚು ಆಟಗಾರರನ್ನು ಔಟ್ ಮಾಡಿದ್ದಾರೆ. ಇವರಲ್ಲಿ ಅಗ್ರಸ್ಥಾನದಲ್ಲಿರುವುದು ಸರ್ವಶ್ರೇಷ್ಠ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ.

3 / 6
2005 ರಿಂದ 2014 ನಡುವೆ ಟೀಮ್ ಇಂಡಿಯಾ ಪರ 90 ಟೆಸ್ಟ್ ಪಂದ್ಯಗಳಲ್ಲಿ 166 ಇನಿಂಗ್ಸ್ ಆಡಿರುವ ಮಹೇಂದ್ರ ಸಿಂಗ್ ಧೋನಿ 256	ಕ್ಯಾಚ್ ಹಾಗೂ 38 ಸ್ಟಂಪ್​​ಗಳನ್ನು ಮಾಡಿದ್ದಾರೆ. ಈ ಮೂಲಕ ಒಟ್ಟು 294	 ಬ್ಯಾಟರ್​ಗಳನ್ನು ಔಟ್ ಮಾಡಿ ದಾಖಲೆ ನಿರ್ಮಿಸಿದ್ದಾರೆ.

4 / 6
ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಸೈಯ್ಯದ್ ಕಿರ್ಮಾನಿ. 1976 ರಿಂದ 1986 ರ ನಡುವೆ ಟೀಮ್ ಇಂಡಿಯಾ ಪರ 88 ಟೆಸ್ಟ್ ಪಂದ್ಯಗಳಲ್ಲಿ 151 ಇನಿಂಗ್ಸ್ ಆಡಿರುವ ಕಿರ್ಮಾನಿ 160 ಕ್ಯಾಚ್ ಹಾಗೂ 38 ಸ್ಟಂಪ್​ಗಳೊಂದಿಗೆ ಒಟ್ಟು 198 ಬಲಿ ಪಡೆದಿದ್ದಾರೆ.

5 / 6
ಇದೀಗ ಈ ಸಾಧಕರ ಪಟ್ಟಿಗೆ ರಿಷಭ್ ಪಂತ್ ಕೂಡ ಸೇರ್ಪಡೆಯಾಗಿದ್ದಾರೆ. ಈವರೆಗೆ 41* ಟೆಸ್ಟ್ ಪಂದ್ಯಗಳನ್ನಾಡಿರುವ ರಿಷಭ್ ಪಂತ್ 80 ಇನಿಂಗ್ಸ್​ಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದು, ಈ ವೇಳೆ 137 ಕ್ಯಾಚ್ ಹಾಗೂ 15 ಸ್ಟಂಪ್​ಗಳನ್ನು ಮಾಡಿದ್ದಾರೆ. ಈ ಮೂಲಕ ಒಟ್ಟು 151 ಬ್ಯಾಟರ್​ಗಳನ್ನು ಔಟ್ ಮಾಡಿದ ವಿಶೇಷ ಮೈಲುಗಲ್ಲು ದಾಟಿದ್ದಾರೆ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ