Road Safety World Series 2022: ಇಂದಿನಿಂದ ಲೆಜೆಂಡ್ಸ್ ಕಾಳಗ; ಸಚಿನ್-ಜಾಂಟಿ ಮುಖಾಮುಖಿ
TV9 Web | Updated By: ಪೃಥ್ವಿಶಂಕರ
Updated on:
Sep 10, 2022 | 2:31 PM
Road Safety World Series 2022: ಇಂದು ಸೆಪ್ಟೆಂಬರ್ 10 ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಪಂದ್ಯಾವಳಿಯ ಮೊದಲ ಪಂದ್ಯವಾಗಿದೆ. ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಈ ವರ್ಷದ ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
1 / 5
ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಹೊಸ ಸೀಸನ್ ಇಂದು ಶನಿವಾರ ಪ್ರಾರಂಭವಾಗುತ್ತದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ಮತ್ತು ಸೌತ್ ಆಫ್ರಿಕಾ ಲೆಜೆಂಡ್ಸ್ ಮುಖಾಮುಖಿಯಾಗಲಿವೆ. ಮತ್ತೊಮ್ಮೆ ಸಚಿನ್-ಜಾಂಟಿ ಕ್ರಿಕೆಟ್ ಅಖಾಡದಲ್ಲಿ ಎದುರುಬದುರಾಗಲಿದ್ದಾರೆ. ಪಂದ್ಯಾವಳಿಯು ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 1 ರವರೆಗೆ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ.
2 / 5
ಇಂದು ಸೆಪ್ಟೆಂಬರ್ 10 ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಪಂದ್ಯಾವಳಿಯ ಮೊದಲ ಪಂದ್ಯವಾಗಿದೆ. ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಈ ವರ್ಷದ ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
3 / 5
ಪ್ರೋಟಿಯಾ ಲೆಜೆಂಡ್ ಜಾಂಟಿ ರೋಡ್ಸ್ ದಕ್ಷಿಣ ಆಫ್ರಿಕಾದ ಲೆಜೆಂಡ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ.
4 / 5
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಮೊದಲ ಪಂದ್ಯದಲ್ಲಿ ಯುವರಾಜ್-ಇರ್ಫಾನ್ ಅವರನ್ನು ಎದುರಿಸಲು ದಕ್ಷಿಣ ಆಫ್ರಿಕಾದ ದಂತಕಥೆಗಳಾದ ಮಖಾಯಾ ಎನ್ಟಿನಿ, ಅಲ್ವಿರೋ ಪೀಟರ್ಸನ್ ಸಿದ್ಧರಾಗಿದ್ದಾರೆ.
5 / 5
ಮೊದಲ ಲೆಗ್‌ನ ಎಲ್ಲಾ ಏಳು ಪಂದ್ಯಗಳು ಕಾನ್ಪುರದಲ್ಲಿ ನಡೆಯಲಿವೆ. ಇಂದೋರ್ ಮತ್ತು ಡೆಹ್ರಾಡೂನ್‌ನಲ್ಲಿ ಕ್ರಮವಾಗಿ ಐದು ಮತ್ತು ಆರು ಪಂದ್ಯಗಳು ನಡೆಯಲಿವೆ. ಮತ್ತು ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ರಾಯ್‌ಪುರದಲ್ಲಿ ನಡೆಯಲಿದೆ.
Published On - 2:31 pm, Sat, 10 September 22