- TV9 Kannada Photo gallery Cricket photos Virat Kohli and Rohit Sharma Record: Third Indian Duo to Cross 8K Runs, Retirement Looms
ಬೇರ್ಪಡುವ ಮುನ್ನ ಮತ್ತೊಂದು ಇತಿಹಾಸ ಸೃಷ್ಟಿಸಿದ ರೋ-ಕೊ ಜೋಡಿ..!
Virat Kohli and Rohit Sharma Record: ರೋಹಿತ್ ಶರ್ಮಾ ಶೀಘ್ರದಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ. ಇದರಿಂದ ವಿರಾಟ್ ಕೊಹ್ಲಿ ಜೊತೆ ಅವರ ಪಾಲುದಾರಿಕೆಯ ಇನಿಂಗ್ಸ್‌ಗಳು ಅಂತ್ಯಗೊಳ್ಳಲಿವೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್-ಕೊಹ್ಲಿ ಜೋಡಿ 8028 ರನ್ ಪೂರೈಸಿ ಹೊಸ ದಾಖಲೆ ಬರೆದಿದೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8000 ರನ್ ಗಡಿ ದಾಟಿದ ಮೂರನೇ ಭಾರತೀಯ ಜೋಡಿಯಾಗಿದೆ.
Updated on: Jul 17, 2026 | 4:26 PM

ಕ್ರಿಕೆಟ್ ಲೋಕದ ಇಬ್ಬರು ಶ್ರೇಷ್ಠ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿ ಇನ್ಮುಂದೆ ಒಟ್ಟಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳು ತೀರ ಕಡಿಮೆ. ಸಧ್ಯದ ಮಾಹಿತಿ ಪ್ರಕಾರ, ರೋಹಿತ್ ಶರ್ಮಾ ಲಾರ್ಡ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ (PC-PTI).

ರೋಹಿತ್ ಹಾಗೂ ಕೊಹ್ಲಿ ಈ ಮೊದಲೆ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹೀಗಾಗಿ ಅವರಿಬ್ಬರನ್ನು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಒಟ್ಟಿಗೆ ನೋಡಲು ಸಾಧ್ಯವಾಗುತ್ತಿತ್ತು. ಆದರೀಗ ಅದು ಕೂಡ ಅಂತ್ಯಗೊಳ್ಳುವ ಹಂತಕ್ಕೆ ಬಂದಿದೆ. ಈ ವಿದಾಯದ ವದಂತಿಯ ನಡುವೆಯೂ ರೋಹಿತ್ ಹಾಗೂ ಕೊಹ್ಲಿ ಜೋಡಿ ಮತ್ತೊಂದು ಇತಿಹಾಸ ನಿರ್ಮಿಸಿದೆ(PC-PTI)

ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿರಬಹುದು. ಆದರೆ ಈ ಪಂದ್ಯದಲ್ಲಿ ರೋಹಿತ್ ಮತ್ತು ವಿರಾಟ್ ಜೋಡಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ಕೆತ್ತಿದೆ. ಈ ಪಂದ್ಯದಲ್ಲಿ ಅರ್ಧಶತಕದ ಜೊತೆಯಾಟವನ್ನು ಕಟ್ಟಿದ ಇವರಿಬ್ಬರು ದಾಖಲೆಯ ಪುಸ್ತಕಕ್ಕೆ ಮತ್ತೊಂದು ದಾಖಲೆಯನ್ನು ಸೇರಿಸಿದರು(PC-PTI).

ಈ ಪಂದ್ಯದಲ್ಲಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 60 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಸಣ್ಣ ಆದರೆ ಐತಿಹಾಸಿಕ ಪಾಲುದಾರಿಕೆಯು 94 ವರ್ಷಗಳ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಎರಡು ಜೋಡಿಗಳು ಮಾತ್ರ ಸಾಧಿಸಿದ ಮೈಲಿಗಲ್ಲನ್ನು ಸಾಧಿಸಲು ಈ ಜೋಡಿಗೆ ಸಹಾಯ ಮಾಡಿತು. ರೋಹಿತ್ ಮತ್ತು ವಿರಾಟ್ ಜೊತೆಯಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 8028 ರನ್‌ಗಳನ್ನುಕಲೆಹಾಕಿದ್ದಾರೆ. ಈ ಮೂಲಕ ಈ ಮೈಲಿಗಲ್ಲನ್ನು ದಾಟಿದ ಮೂರನೇ ಭಾರತೀಯ ಜೋಡಿ ಎನಿಸಿಕೊಂಡಿದ್ದಾರೆ(PC-PTI).

ಭಾರತ ತನ್ನ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು 1932 ರಲ್ಲಿ ಆಡಿತು. ಅಂದಿನಿಂದ, ಕಳೆದ 94 ವರ್ಷಗಳಲ್ಲಿ ಭಾರತೀಯ ಜೋಡಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8,000 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಸೇರಿಸಿದ್ದು ಇದು ಮೂರನೇ ಬಾರಿಯಾಗಿದೆ. ಇವರಿಬ್ಬರಿಗೂ ಮುನ್ನ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ 12,400 ರನ್‌ಗಳನ್ನು ಕಲೆಹಾಕಿದ್ದರು. ಎರಡನೇ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಒಟ್ಟಾಗಿ 11,037 ರನ್‌ಗಳನ್ನು ಬಾರಿಸಿದ್ದರು(PC-PTI).

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಒಟ್ಟು 171 ಇನ್ನಿಂಗ್ಸ್‌ಗಳಲ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡಿದ್ದಾರೆ. ಈ ಸಮಯದಲ್ಲಿ, ಅವರು 48.95 ರ ಸರಾಸರಿಯಲ್ಲಿ 8,028 ರನ್ ಗಳಿಸಿದ್ದಾರೆ. ಹಾಗೆಯೇ 26 ಶತಕಗಳ ಪಾಲುದಾರಿಕೆ ಮತ್ತು 27 ಅರ್ಧಶತಕಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದಾರೆ(PC-PTI).




