AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಬಾರ್ಬಡೋಸ್​ಗೆ ತಲುಪಿದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್: ವಿರಾಟ್ ಕೊಹ್ಲಿ ಮಾತ್ರ ಇನ್ನೂ ಬಂದಿಲ್ಲ

ವಿರಾಟ್ ಕೊಹ್ಲಿ ಇನ್ನಷ್ಟೆ ತಂಡ ಸೇರಿಕೊಳ್ಳಬೇಕಿದೆ. ಕೊಹ್ಲಿ ಸದ್ಯ ಲಂಡನ್​ನಲ್ಲಿ ಕುಟುಂಬದ ಜೊತೆ ಪ್ರವಾಸದಲ್ಲಿದ್ದಾರೆ. ಇವರು ಯಾವಾಗ ಕೆರಿಬಿಯನ್ ನಾಡಿಗೆ ತಲುಪುತ್ತಾರೆ ಎಂಬುದು ತಿಳಿದುಬಂದಿಲ್ಲ.

Vinay Bhat
|

Updated on: Jul 03, 2023 | 8:56 AM

Share
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತ ಕ್ರಿಕೆಟ್ ತಂಡದ ಒಂದು ಬ್ಯಾಚ್ ಕೆರಿಬಿಯನ್ ನಾಡಿಗೆ ತಲುಪಿದೆ. ಕೋಚ್ ರಾಹುಲ್ ದ್ರಾವಿಡ್, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಆರ್. ಅಶ್ವಿನ್ ಸೇರಿದಂತೆ ಕೆಲ ಪ್ಲೇಯರ್ಸ್ ಟೆಸ್ಟ್ ಪಂದ್ಯಕ್ಕಾಗಿ ಬಾರ್ಬಡೋಸ್​ಗೆ ತಲುಪಿದ್ದಾರೆ.

1 / 8
ಇದೀಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಬಾರ್ಬಡೋಸ್​ಗೆ ಬಂದಿಳಿದಿದ್ದಾರೆ. ರೋಹಿತ್ ಹಾಗೂ ಜೈಸ್ವಾಲ್ ವಿಂಡೀಸ್ ನಾಡಿಗೆ ತಲುಪಿದ ತಕ್ಷಣ ಜೊತೆಯಾಗಿ ಸೆಲ್ಫೀ ತೆಗೆದಿರುವ ಫೋಟೋ ವೈರಲ್ ಆಗುತ್ತಿದೆ.

2 / 8
ವಿರಾಟ್ ಕೊಹ್ಲಿ ಇನ್ನಷ್ಟೆ ತಂಡ ಸೇರಿಕೊಳ್ಳಬೇಕಿದೆ. ಕೊಹ್ಲಿ ಸದ್ಯ ಲಂಡನ್​ನಲ್ಲಿ ಕುಟುಂಬದ ಜೊತೆ ಪ್ರವಾಸದಲ್ಲಿದ್ದಾರೆ. ಇವರು ಯಾವಾಗ ಕೆರಿಬಿಯನ್ ನಾಡಿಗೆ ತಲುಪುತ್ತಾರೆ ಎಂಬುದು ತಿಳಿದುಬಂದಿಲ್ಲ.

ವಿರಾಟ್ ಕೊಹ್ಲಿ ಇನ್ನಷ್ಟೆ ತಂಡ ಸೇರಿಕೊಳ್ಳಬೇಕಿದೆ. ಕೊಹ್ಲಿ ಸದ್ಯ ಲಂಡನ್​ನಲ್ಲಿ ಕುಟುಂಬದ ಜೊತೆ ಪ್ರವಾಸದಲ್ಲಿದ್ದಾರೆ. ಇವರು ಯಾವಾಗ ಕೆರಿಬಿಯನ್ ನಾಡಿಗೆ ತಲುಪುತ್ತಾರೆ ಎಂಬುದು ತಿಳಿದುಬಂದಿಲ್ಲ.

3 / 8
ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿರುವ ಪ್ರಕಾರ ಕೊಹ್ಲಿ ಈ ವಾರದಲ್ಲಿ ವೆಸ್ಟ್ ಇಂಡೀಸ್ ತಲುಪಲಿದ್ದಾರಂತೆ.

4 / 8
ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಸೋಲುಂಡ ಬಳಿಕ ವಿಶ್ರಾಂತಿಗೆ ಮರಳಿದ್ದ ಭಾರತೀಯ ಆಟಗಾರರು ಇದೀಗ ಕ್ರಿಕೆಟ್ ಮೈದಾನಕ್ಕೆ ಮರಳುತ್ತಿದ್ದಾರೆ. ಜುಲೈ 12 ರಿಂದ ಕೆರಿಬಿಯನ್ನರ ನಾಡಲ್ಲಿ ಭಾರತ ತಂಡ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿ ಆಡಲಿದೆ.

5 / 8
ವೆಸ್ಟ್ ಇಂಡೀಸ್ ಹವಾಮಾನಕ್ಕೆ ಒಗ್ಗಿಕೊಳ್ಳಲು ಭಾರತ ತಂಡ ಒಂದು ವಾರ ಮುಂಚಿತವಾಗಿ ವೆಸ್ಟ್ ಇಂಡೀಸ್‌ ನಾಡಿಗೆ ತೆರಳಿದೆ. ಬಾರ್ಬಡೋಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಮೊದಲ ಟೆಸ್ಟ್​ಗು ಮುನ್ನ ಜುಲೈ 5 ಮತ್ತು 6 ರಂದು ಎರಡು ದಿನಗಳ ಅಭ್ಯಾಸ ಪಂದ್ಯ ಕೂಡ ಆಡಲಿದೆ.

6 / 8
ಭಾರತ- ವಿಂಡೀಸ್ ನಡುವೆ ಡೊಮಿನಿಕಾದ ವಿಂಡ್ಸರ್ ಪಾರ್ಕ್​ನಲ್ಲಿ ಜುಲೈ 12 ರಿಂದ 16 ವರೆಗೆ ಮೊದಲ ಟೆಸ್ಟ್ ನಡೆಯಲಿದೆ. ಬಳಿಕ ಜುಲೈ 20ರಿಂದ 24ರ ವರೆಗೆ ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್ ಓವಲ್​ನಲ್ಲಿ ದ್ವಿತೀಯ ಟೆಸ್ಟ್ ಆಯೋಜಿಸಲಾಗಿದೆ. ಭಾರತೀಯ ಕಾಲ ಮಾನದ ಪ್ರಕಾರ ಈ ಟೆಸ್ಟ್ ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ.

7 / 8
ವಿಂಡೀಸ್ ವಿರುದ್ಧದ ಟೆಸ್ಟ್​ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಶಾರ್ದೂಲ್ ಠಾಕೂರ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯಶಸ್ವಿ ಜೈಸ್ವಾಲ್.

8 / 8