Rohit Sharma: ಸೋಲಿನ ಸರದಾರನ ಹೆಸರಿಗೆ ಕೆಟ್ಟ ದಾಖಲೆ
Team India: ಭಾರತ ತಂಡ ಈ ವರ್ಷ 15 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ 14 ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಿದ್ದಾರೆ. ಇನ್ನು ಒಂದು ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ನಾಯಕರಾಗಿ ಕಾಣಿಸಿಕೊಂಡಿದ್ದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ 14 ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 7 ಮ್ಯಾಚ್ಗಳಲ್ಲಿ ಮಾತ್ರ.
1 / 6
ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹ್ಯಾಟ್ರಿಕ್ ಸೋಲು... ಇದಾದ ಬಳಿಕ ಪರ್ತ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾಗೆ ಗೆಲುವು. ಮತ್ತೆ ಬಂದ ನಾಯಕ ರೋಹಿತ್ ಶರ್ಮಾಗೆ ಅಡಿಲೇಡ್ನಲ್ಲಿ ಮತ್ತು ಮೆಲ್ಬೋರ್ನ್ನಲ್ಲಿ ಸೋಲುಗಳ ಸರಮಾಲೆ. ಹೀಗೆ ಕಳೆದ 7 ಪಂದ್ಯಗಳಲ್ಲಿ ಟೀಮ್ ಇಂಡಿಯಾ 5 ರಲ್ಲಿ ಸೋಲನುಭವಿಸಿದೆ.
2 / 6
ಇಲ್ಲಿ ಏಳು ಪಂದ್ಯಗಳಲ್ಲಿ ಭಾರತ ತಂಡವು ಒಂದು ಜಯ ಸಾಧಿಸಿದ್ದು ಜಸ್ಪ್ರೀತ್ ಬುಮ್ರಾ ಅವರ ನಾಯಕತ್ವದಲ್ಲಿ. ಇನ್ನು ಬ್ರಿಸ್ಬೇನ್ ಟೆಸ್ಟ್ ಪಂದ್ಯವು ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡ ಕಾರಣ ಟೀಮ್ ಇಂಡಿಯಾ ಸೋಲು ತಪ್ಪಿಸಿಕೊಂಡಿತು. ಅಂದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ 14 ಪಂದ್ಯಗಳಲ್ಲಿ 6 ರಲ್ಲಿ ಸೋಲನುಭವಿಸಿದೆ.
3 / 6
ಈ ಸೋಲಿನೊಂದಿಗೆ ಭಾರತದ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆಯೊಂದನ್ನು ಕ್ಯಾಪ್ಟನ್ ರೋಹಿತ್ ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ರೋಹಿತ್ ಶರ್ಮಾ ಟೀಮ್ ಇಂಡಿಯಾಗೆ ಒಂದೇ ವರ್ಷದೊಳಗೆ ಅತೀ ಹೆಚ್ಚು ಟೆಸ್ಟ್ ಸೋಲು ತಂದುಕೊಟ್ಟ ನಾಯಕನೆಂಬ ಅಪಕೀರ್ತಿಗೆ ಒಳಗಾಗಿದ್ದಾರೆ.
4 / 6
ಇದಕ್ಕೂ ಮುನ್ನ ಇಂತಹದೊಂದು ಹೀನಾಯ ದಾಖಲೆ ಬರೆದಿದ್ದು ಸಚಿನ್ ತೆಂಡೂಲ್ಕರ್. 1999 ರಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ 5 ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಇದರೊಂದಿಗೆ ಒಂದೇ ವರ್ಷದೊಳಗೆ ಅತೀ ಹೆಚ್ಚು ಸೋಲು ಕಂಡ ಟೀಮ್ ಇಂಡಿಯಾ ನಾಯಕನೆಂಬ ಅಪಕೀರ್ತಿ ಸಚಿನ್ ಪಾಲಾಗಿತ್ತು.
5 / 6
ಇದೀಗ ಕಳಪೆ ನಾಯಕತ್ವದೊಂದಿಗೆ ಬರೋಬ್ಬರಿ 25 ವರ್ಷಗಳ ಬಳಿಕ ಸಚಿನ್ ತೆಂಡೂಲ್ಕರ್ ಅವರ ಅತ್ಯಂತ ಕೆಟ್ಟ ದಾಖಲೆಯನ್ನು ರೋಹಿತ್ ಶರ್ಮಾ ಮುರಿದಿದ್ದಾರೆ. ಈ ವರ್ಷ ಟೀಮ್ ಇಂಡಿಯಾ 15 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ವೇಳೆ 14 ಮ್ಯಾಚ್ಗಳಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಕಾಣಿಸಿಕೊಂಡಿದ್ದರು.
6 / 6
ಈ 14 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದಿರುವುದು 7 ಮ್ಯಾಚ್ಗಳಲ್ಲಿ ಮಾತ್ರ. ಇನ್ನುಳಿದ 6 ಪಂದ್ಯಗಳಲ್ಲಿ ಸೋತರೆ, ಒಂದು ಮ್ಯಾಚ್ ಡ್ರಾನಲ್ಲಿ ಅಂತ್ಯಗೊಂಡಿದೆ. ಹೀಗಾಗಿಯೇ ಇದೀಗ ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿ ಬರಲಾರಂಭಿಸಿದೆ. ಹಾಗಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ಟೀಮ್ ಇಂಢಿಯಾ ನಾಯಕತ್ವದಲ್ಲಿ ಬದಲಾವಣೆ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.