ರಿಷಬ್ ಪಂತ್ ಬೇಜವಾಬ್ದಾರಿ ಆಟ: ಬಾಕ್ಸಿಂಗ್ ಡೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಟೀಂ ಇಂಡಿಯಾ ಒತ್ತಡಕ್ಕೆ ಸಿಲುಕಲು ರಿಷಬ್ ಪಂತ್ ಅವರ ಕಳಪೆ ಶಾಟ್ ಸೆಲೆಕ್ಷನ್ ಪ್ರಮುಖ ಕಾರಣ. ಮೊದಲ ಇನಿಂಗ್ಸ್‌ನಲ್ಲಿ 28 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಪಂತ್ ಅತ್ಯಂತ ಕೆಟ್ಟ ಶಾಟ್ ಆಡಿ ಔಟಾದರು. ಎರಡನೇ ಇನ್ನಿಂಗ್ಸ್‌ನಲ್ಲೂ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಉತ್ತಮ ಜೊತೆಯಾಟವನ್ನು ನಿರ್ಮಿಸಿದ ನಂತರ, ಪಂತ್ ಮತ್ತೊಮ್ಮೆ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿ ವಿಕೆಟ್ ಒಪ್ಪಿಸಿದರು. ಎರಡೂ ಇನಿಂಗ್ಸ್‌ಗಳಲ್ಲಿ ಪಂತ್ ಸ್ವಲ್ಪ ಬುದ್ಧಿವಂತಿಕೆ ತೋರಿದ್ದರೆ, ಮೆಲ್ಬೋರ್ನ್‌ನಲ್ಲಿ ಫಲಿತಾಂಶ ಬೇರೆಯದ್ದೇ ಆಗಿರುತ್ತಿತ್ತು.