IND vs ENG 3rd Test: ಒಂದಲ್ಲ, ಎರಡಲ್ಲ ರಾಜ್‌ಕೋಟ್‌ನಲ್ಲಿ ಸೃಷ್ಟಿಯಾಗಲಿದೆ 5 ಶ್ರೇಷ್ಠ ದಾಖಲೆಗಳು
India vs England 3rd Test Record: ಇಂದಿನಿಂದ ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತ- ಇಂಗ್ಲೆಂಡ್ ನಡುವೆ ಮೂರನೇ ಟೆಸ್ಟ್ ಪಂದ್ಯ ಶುರುವಾಗಲಿದೆ. ಹಲವು ಅಪರೂಪದ ಕ್ಷಣಕ್ಕೆ ಈ ಟೆಸ್ಟ್ ಪಂದ್ಯ ಸಾಕ್ಷಿಯಾಗಲಿದೆ. ಮುಖ್ಯವಾಗಿ ಈ ಪಂದ್ಯದಲ್ಲಿ ಐದು ಪ್ರಮುಖ ದಾಖಲೆಗಳು ಕೂಡ ನಿರ್ಮಾಣವಾಗಲಿದೆ.
1 / 6
ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಸದ್ಯ 1-1 ಅಂತರದಲ್ಲಿ ಸಮಬಲಗೊಂಡಿದೆ. ಹೀಗಾಗಿ ಮೂರನೇ ಪಂದ್ಯ ನಿರ್ಣಾಯಕವಾಗಲಿದೆ. ಏಕೆಂದರೆ ಈ ಪಂದ್ಯದಲ್ಲಿ ಸೋತ ತಂಡ ಮತ್ತೆ ತಿರುಗೇಟು ನೀಡಲು ಮುಂದಿನ ಎರಡು ಪಂದ್ಯಗಳಿಗೆ ಹೋರಾಟ ನಡೆಸಬೇಕಾಗುತ್ತದೆ. ಇಂದು ರಾಜ್ಕೋಟ್ ನಲ್ಲಿ ಮೂರನೇ ಟೆಸ್ಟ್ ಶುರುವಾಗಲಿದೆ.
2 / 6
ಇಂದಿನಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಐದು ಪ್ರಮುಖ ದಾಖಲೆಗಳು ಕೂಡ ನಿರ್ಮಾಣವಾಗಲಿದೆ. ಈ ಮೂರನೇ ಟೆಸ್ಟ್ ಪಂದ್ಯ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ 100ನೇ ಟೆಸ್ಟ್ ಪಂದ್ಯವಾಗಿದೆ. ನಾಣ್ಯ ಚಿಮ್ಮಿದ ತಕ್ಷಣ ಬೆನ್ ಸ್ಟೋಕ್ಸ್ 100 ಟೆಸ್ಟ್ ಆಡಿರುವ ಆಟಗಾರರ ಸಾಲಿಗೆ ಸೇರಲಿದ್ದಾರೆ.
3 / 6
100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನು ಆಡಿದ ಅತಿ ಹೆಚ್ಚು ಆಟಗಾರರನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡ ಹೊಂದಿದೆ. ಉಭಯ ತಂಡಗಳ ತಲಾ 15 ಆಟಗಾರರು ಈ ಸಾಧನೆ ಮಾಡಿದ್ದಾರೆ. ಇದೀಗ ಬೆನ್ ಸ್ಟೋಕ್ಸ್ 16ನೇ ಆಟಗಾರನಾಗಲಿದ್ದಾರೆ. ಈ ವಿಷಯದಲ್ಲಿ ಆಸ್ಟ್ರೇಲಿಯಾವನ್ನು ಇಂಗ್ಲೆಂಡ್ ಹಿಂದಿಕ್ಕಲಿದೆ.
4 / 6
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಕೋಚ್ ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟುವ ಅವಕಾಶವಿದೆ. ದ್ರಾವಿಡ್ 25 ಟೆಸ್ಟ್‌ಗಳಲ್ಲಿ 8 ಪಂದ್ಯಗಳನ್ನು ಗೆದ್ದಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ 7 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದಾರೆ. ಹಾಗಾಗಿ ಈ ಪಂದ್ಯ ಗೆದ್ದ ತಕ್ಷಣ ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಲಿದ್ದಾರೆ.
5 / 6
ಆರ್. ಅಶ್ವಿನ್ ಮೂರನೇ ಟೆಸ್ಟ್‌ನಲ್ಲಿ 500 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ ಒಂದು ವಿಕೆಟ್ ಪಡೆಯುವ ಮೂಲಕ ಅವರು ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಮಾಡಿಕೊಳ್ಳಲಿದ್ದಾರೆ. 97 ಪಂದ್ಯಗಳಲ್ಲಿ 500 ವಿಕೆಟ್‌ಗಳ ಗಡಿ ತಲುಪಿದ ಭಾರತದ ಬೌಲರ್ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.
6 / 6
ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಟೆಸ್ಟ್‌ನಲ್ಲಿ 695 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೂರನೇ ಟೆಸ್ಟ್‌ನಲ್ಲಿ ಐದು ವಿಕೆಟ್ ಪಡೆದ ನಂತರ 700 ವಿಕೆಟ್ ಪಡೆದ ಬೌಲರ್ ಆಗಲಿದ್ದಾರೆ. ಇಂತಹ ಸಾಧನೆ ಮಾಡಿದ ಇಂಗ್ಲೆಂಡ್‌ನ ಮೊದಲ ಬೌಲರ್ ಮತ್ತು ವಿಶ್ವದ ಮೂರನೇ ಬೌಲರ್ ಆಗಲಿದ್ದಾರೆ.