IND vs AUS: ಸಿಡ್ನಿಯಲ್ಲಿ ದಾಖಲೆ ಬರೆಯಲು ರೋಹಿತ್​ಗೆ ಬೇಕಿದೆ ಒಂದೇ ಒಂದು ಸಿಕ್ಸ್

Updated on: Oct 24, 2025 | 9:41 PM

Rohit Sharma Sydney ODI Record: ಅಡಿಲೇಡ್ ಪಂದ್ಯದಲ್ಲಿ ಲಯಕ್ಕೆ ಮರಳಿದ ರೋಹಿತ್ ಶರ್ಮಾ ಸಿಡ್ನಿಯಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಐತಿಹಾಸಿಕ ಸಿಕ್ಸರ್ ದಾಖಲೆ ಬರೆಯುವ ಅವಕಾಶವೂ ಅವರಿಗಿದೆ. ಆದರೆ, ವಿರಾಟ್ ಕೊಹ್ಲಿ ಸಿಡ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಭಾರತಕ್ಕೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಇಲ್ಲವಾದರೆ ಕ್ಲೀನ್ ಸ್ವೀಪ್ ಮುಜುಗರ ಎದುರಿಸಬೇಕಾಗಬಹುದು.

1 / 5
ಅಡಿಲೇಡ್ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿತ್ತಾದರೂ ಮಾಜಿ ನಾಯಕ ರೋಹಿತ್ ಶರ್ಮಾ ಲಯಕ್ಕೆ ಮರಳಿದ್ದು, ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು. ಮೊದಲ ಏಕದಿನ ಪಂದ್ಯದಲ್ಲಿ ಒಂದಂಕಿಗೆ ಸುಸ್ತಾಗಿದ್ದ ರೋಹಿತ್ ಶರ್ಮಾ, ಎರಡನೇ ಏಕದಿನ ಪಂದ್ಯದಲ್ಲಿ 73 ರನ್ ಗಳಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದರು. ಇದೀಗ ಸಿಡ್ನಿಯಲ್ಲಿಯೂ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿವೆ.

2 / 5
ಇದಕ್ಕೆ ಪೂರಕವಾಗಿ ಈ ಮೈದಾನದಲ್ಲಿ ಅವರ ದಾಖಲೆ ಅತ್ಯುತ್ತಮವಾಗಿದ್ದು, ಇದೇ ಪಂದ್ಯದಲ್ಲಿ ರೋಹಿತ್​ಗೆ ವಿಶೇಷ ದಾಖಲೆ ನಿರ್ಮಿಸುವ ಅವಕಾಶವೂ ಸಿಕ್ಕಿದೆ. ಸಿಡ್ನಿಯಲ್ಲಿ ರೋಹಿತ್ ಶರ್ಮಾ ಕೇವಲ ಒಂದು ಸಿಕ್ಸರ್ ಬಾರಿಸಿದರೆ, ಈ ಐತಿಹಾಸಿಕ ಮೈದಾನದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಏಷ್ಯಾದ ಆಟಗಾರನಾಗುತ್ತಾರೆ. ಪ್ರಸ್ತುತ, ಸಿಡ್ನಿ ಮೈದಾನದಲ್ಲಿ ರೋಹಿತ್ ಒಂಬತ್ತು ಸಿಕ್ಸರ್ ಬಾರಿಸಿದ್ದಾರೆ. ಜಯಸೂರ್ಯ ಕೂಡ ಈ ಮೈದಾನದಲ್ಲಿ ಏಕದಿನ ಪಂದ್ಯಗಳಲ್ಲಿ ಅಷ್ಟೇ ಸಂಖ್ಯೆಯ ಸಿಕ್ಸರ್ ಬಾರಿಸಿದ್ದಾರೆ.

3 / 5
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ರೋಹಿತ್ ಶರ್ಮಾ ಅವರ ಏಕದಿನ ಪ್ರದರ್ಶನ ಅತ್ಯುತ್ತಮವಾಗಿದೆ. ಅವರು ಈ ಮೈದಾನದಲ್ಲಿ ಐದು ಏಕದಿನ ಪಂದ್ಯಗಳಲ್ಲಿ 333 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 66.60 ಆಗಿದೆ. ಸಿಡ್ನಿಯಲ್ಲಿ ರೋಹಿತ್ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೈದಾನದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ರೋಹಿತ್. ರೋಹಿತ್ ನಂತರ, ಸಚಿನ್ ಈ ಮೈದಾನದಲ್ಲಿ 52 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 315 ರನ್ ಗಳಿಸಿದ್ದಾರೆ.

4 / 5
ಸಿಡ್ನಿಯಲ್ಲಿ ರೋಹಿತ್ ಶರ್ಮಾ ಗಮನಾರ್ಹ ದಾಖಲೆಯನ್ನು ಹೊಂದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಸಪ್ಪೆ ಪ್ರದರ್ಶನ ನೀಡಿದ್ದಾರೆ. ಆಡಿರುವ ಏಳು ಪಂದ್ಯಗಳಲ್ಲಿ, ಅವರು 24.33 ರ ಸರಾಸರಿಯಲ್ಲಿ ಕೇವಲ 146 ರನ್ ಗಳಿಸಿದ್ದಾರೆ. ಅಲ್ಲದೆ ಈ ಮೈದಾನದಲ್ಲಿ  ಕೊಹ್ಲಿ ಬ್ಯಾಟ್​ನಿಂದ ಕೇವಲ ಒಂದು ಅರ್ಧಶತಕ ಮಾತ್ರ ಮೂಡಿಬಂದಿದೆ. ಸಮಸ್ಯೆಯೆಂದರೆ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ತಮ್ಮ ಖಾತೆಯನ್ನೇ ತೆರೆದಿಲ್ಲ. ಹೀಗಾಗಿ ಸಿಡ್ನಿಯಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ.

5 / 5
ಸಿಡ್ನಿ ಏಕದಿನ ಪಂದ್ಯದ ಗೆಲುವು ಭಾರತಕ್ಕೆ ಅತ್ಯಗತ್ಯವಾಗಿದೆ. ಏಕೆಂದರೆ ಸತತ ಎರಡು ಪಂದ್ಯಗಳನ್ನು ಸೋತ ನಂತರ ಭಾರತ ಈಗಾಗಲೇ ಸರಣಿಯನ್ನು ಕಳೆದುಕೊಂಡಿದೆ. ಸಿಡ್ನಿಯಲ್ಲಿ ಸೋತರೆ ಭಾರತ ಕ್ಲೀನ್ ಸ್ವೀಪ್ ಮುಜುಗರಕ್ಕೊಳಗಾಗಲಿದೆ. ಅಲ್ಲದೆ ಆಸ್ಟ್ರೇಲಿಯಾ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಇದುವರೆಗೂ ಕ್ಲೀನ್ ಸ್ವೀಪ್ ಮಾಡಿಲ್ಲ, ಆದರೆ ಈಗ ಕಾಂಗರೂ ಪಡೆಗೆ ಆ ಅವಕಾಶವಿದೆ.