Rohit Sharma: ತಂಡದಿಂದ ಕೈಬಿಟ್ಟಾಗ ಕಣ್ಣೀರಿಟ್ಟಿದ್ದ ಹಿಟ್​ಮ್ಯಾನ್: ಇದೀಗ ಟೀಮ್ ಇಂಡಿಯಾ ಕ್ಯಾಪ್ಟನ್

| Updated By: ಝಾಹಿರ್ ಯೂಸುಫ್

Updated on: Dec 09, 2021 | 4:31 PM

Rohit Sharma Captain: ವಿಶ್ವಕಪ್​ ತಂಡದ ಭಾಗವಾಗದಿದ್ದಕ್ಕಾಗಿ ನಿರಾಶೆ ವ್ಯಕ್ತಪಡಿಸಿ ಕುಗ್ಗಿ ಹೋಗಿದ್ದ ಅದೇ ಯಂಗ್ ರೋಹಿತ್ ಶರ್ಮಾ, ಈಗ ಹಿಟ್​ಮ್ಯಾನ್ ಆಗಿ ಬದಲಾಗಿದ್ದಾರೆ.

1 / 8
ಅದು 2007...ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಿದ್ದ ಟೀಮ್ ಇಂಡಿಯಾದಲ್ಲಿ ಯುವಕನೊಬ್ಬ ಕಾಣಿಸಿಕೊಂಡಿದ್ದ. ಆತನ ಬ್ಯಾಟಿಂಗ್ ಬಗ್ಗೆ ರಾಹುಲ್ ದ್ರಾವಿಡ್ ಅವರ ಕಲಾತ್ಮಕತೆ ಹಾಗೂ ಸಚಿನ್ ಅವರ ಶೈಲಿ ಎಂಬ ಟ್ಯಾಗ್​ಲೈನ್ ಪಡೆದುಕೊಂಡಿತು. ಹೀಗಾಗಿಯೇ ಈ ಹುಡುಗ ಟೀಮ್ ಇಂಡಿಯಾದಲ್ಲಿ ಮುಂದೊಂದು ದಿನ ಅಬ್ಬರಿಸಲಿದ್ದಾರೆ ಎಂದೇ ಅನೇಕರು ಭವಿಷ್ಯ ನುಡಿದ್ದರು. ನಿರೀಕ್ಷೆ ಹುಸಿಯಾಗಲಿಲ್ಲ, 2007 ರ ಟಿ20 ವಿಶ್ವಕಪ್​ ಗೆಲ್ಲುವಲ್ಲಿ ಈ ಹುಡುಗನದ್ದು ಕೊಡುಗೆಯಿತ್ತು....ಆ ಹುಡಗನೇ ಇಂದಿನ ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ.

2 / 8
 2007ರ ಟಿ20 ವಿಶ್ವಕಪ್ ಗೆದ್ದ ಬಹುತೇಕ ಆಟಗಾರರು ಟೀಮ್ ಇಂಡಿಯಾದ ಭಾಗವಾದರು. ಅದರಂತೆ ರೋಹಿತ್ ಶರ್ಮಾ ಕೂಡ 2007-2009ರಲ್ಲಿ ತಂಡದ ಖಾಯಂ ಸದಸ್ಯರಂತೆ ಕಾಣಿಸಿಕೊಂಡಿದ್ದರು. ಆದರೆ ಆ ಬಳಿಕ ಹಿಟ್​ಮ್ಯಾನ್ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಆ ಬಳಿಕ ಕಂಬ್ಯಾಕ್ ಕೂಡ ಮಾಡಿದರು.

3 / 8
2010 ರಲ್ಲಿ 14 ಪಂದ್ಯಗಳಿಂದ ರೋಹಿತ್ ಶರ್ಮಾ ಕಲೆಹಾಕಿದ್ದು ಬರೋಬ್ಬರಿ 586 ರನ್ ಕಲೆಹಾಕಿದ್ದರು. ಇದಾಗ್ಯೂ 2011ರ ಏಕದಿನ ವಿಶ್ವಕಪ್​ಗಾಗಿ ಪ್ರಕಟಿಸಲಾದ 16 ಸದಸ್ಯರ ಬಳಗದಲ್ಲಿ ರೋಹಿತ್ ಶರ್ಮಾ ಅವರ ಹೆಸರಿರಲಿಲ್ಲ. ಟೀಮ್ ಇಂಡಿಯಾದ ಭವಿಷ್ಯದ ಆರಂಭಿಕ ಆಟಗಾರ, ಮುಂದಿನ ನಾಯಕ ಎಂದೆಲ್ಲಾ ಬಿಂಬಿತರಾಗಿದ್ದ ರೋಹಿತ್​​ಗೆ ಕೊನೆಯ ಪಕ್ಷ ತಂಡದಲ್ಲೂ ಕೂಡ ಸ್ಥಾನ ನೀಡಲಾಗಿರಲಿಲ್ಲ.

4 / 8
ಅಂದು ಕಣ್ಣೀರಿನೊಂದಿಗೆ ರೋಹಿತ್ ಶರ್ಮಾ ಹೇಳಿದ ಮಾತುಗಳು ಇದೀಗ ವೈರಲ್ ಆಗಿದೆ. ಆ ನೋವಿನ ನುಡಿಗಳು ಹೀಗಿತ್ತು...ವಿಶ್ವಕಪ್​ ತಂಡದ ಭಾಗವಾಗದಿದ್ದಕ್ಕಾಗಿ ನಿಜವಾಗಿಯೂ ನಿರಾಶೆಯಾಗಿದೆ.. ನಾನು ಇಲ್ಲಿಂದ ಮುಂದುವರಿಯಬೇಕಾಗಿದೆ.. ಆದರೆ ಪ್ರಾಮಾಣಿಕವಾಗಿ ಇದು ನನಗೆ ದೊಡ್ಡ ಹಿನ್ನಡೆ...ಎಂದು ನೋವು ತೋಡಿಕೊಂಡಿದ್ದರು.

5 / 8
ಈ ಒಂದು ಆಯ್ಕೆಯ ವಿಚಾರದಿಂದ ರೋಹಿತ್ ಶರ್ಮಾ ತುಂಬಾ ಕುಗ್ಗಿದ್ದರು. ಏಕೆಂದರೆ ತಂಡದಲ್ಲಿದ್ದ ಆತನಿಗೆ ಇದು ತುಂಬಾ ಆಘಾತಕಾರಿ ಸುದ್ದಿಯಾಗಿತ್ತು. ನಾನು ಅವನನ್ನು (ರೋಹಿತ್) ನನ್ನ ಮನೆಗೆ ಕರೆದು ಅವನನ್ನು ಸಮಾಧಾನ ಮಾಡಿದೆ. ಇದು ಕೇವಲ ಕ್ರಿಕೆಟ್, ನೀವು ಕ್ರಿಕೆಟ್‌ನಿಂದ ಖ್ಯಾತಿ, ಹಣ ಎಲ್ಲವನ್ನೂ ಪಡೆದುಕೊಂಡಿದ್ದೀರಿ. ಆದರೆ ಈಗ ನೀನು ನಿನ್ನ ಕ್ರಿಕೆಟ್ ಅನ್ನು ನೋಡಿಕೊಳ್ಳುತ್ತಿಲ್ಲ. ಆದ್ದರಿಂದ ನೀನು ಅಭ್ಯಾಸವನ್ನು ಪ್ರಾರಂಭಿಸು. ವಿರಾಟ್ ಕೊಹ್ಲಿ ನಿಮ್ಮ ನಂತರ ಬಂದರು, ಅವರು (2011) ವಿಶ್ವಕಪ್ ತಂಡದಲ್ಲಿದ್ದಾರೆ. ವ್ಯತ್ಯಾಸ ನೋಡಿ ತಿಳಿದುಕೊಳ್ಳಿ. ಈಗ ನೀವು ನಿಮ್ಮ ಕ್ರಿಕೆಟ್​ ಕಡೆ ಗಮನ ನೀಡಬೇಕೆಂದು ಅಂದು ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ತಿಳಿಸಿದ್ದರು.

6 / 8
ಅದರಂತೆ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ದೇಶೀಯ ಟೂರ್ನಿಯಲ್ಲಿ ಹೊಸ ಹವಾ ಸೃಷ್ಟಿಸಿದರು. ಆ ಬಳಿಕ ಟೀಮ್ ಇಂಡಿಯಾದ ಖಾಯಂ ಸದಸ್ಯರಾದರು. ಇದೀಗ ಕ್ಯಾಪ್ಟನ್ ಪಟ್ಟದೊಂದಿಗೆ ರೋಹಿತ್ ಶರ್ಮಾ ನಿಂತಿದ್ದಾರೆ. ಅಂದರೆ 2011 ರ ವಿಶ್ವಕಪ್​​ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ರೋಹಿತ್ ಶರ್ಮಾ ಮುಂದಿನ 2 ವಿಶ್ವಕಪ್​​ಗಳಲ್ಲಿ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತ.

7 / 8
2022 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಹಿಟ್​ಮ್ಯಾನ್ ನಾಯಕರಾಗಲಿದ್ದಾರೆ. ಹಾಗೆಯೇ 2023 ರ ಏಕದಿನ ವಿಶ್ವಕಪ್​ ಅನ್ನು ಕೂಡ ಗಮನದಲ್ಲಿಟ್ಟುಕೊಂಡು, ಇದೀಗ ರೋಹಿತ್ ಶರ್ಮಾಗೆ ಏಕದಿನ ತಂಡದ ನಾಯಕತ್ವ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

8 / 8
ವಿಶ್ವಕಪ್​ ತಂಡದ ಭಾಗವಾಗದಿದ್ದಕ್ಕಾಗಿ ನಿರಾಶೆ ವ್ಯಕ್ತಪಡಿಸಿ ಕುಗ್ಗಿ ಹೋಗಿದ್ದ ಅದೇ ಯಂಗ್ ರೋಹಿತ್ ಶರ್ಮಾ, ಈಗ ಹಿಟ್​ಮ್ಯಾನ್ ಆಗಿ ಬದಲಾಗಿದ್ದಾರೆ...ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಟಿ20 ಹಾಗೂ ಏಕದಿನ ತಂಡಗಳಲ್ಲಿ ಕ್ಯಾಪ್ಟನ್ ಹಿಟ್​ಮ್ಯಾನ್ ಆಗಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.