ಭಾರತದಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಚರ್ಚಿಸಲಾದ 2021ಟಾಪ್ ಸಂಭಾಷಣೆಗಳು, ಟ್ರೆಂಡ್ಸ್ ಮತ್ತು ಕ್ಷಣಗಳನ್ನು ಟ್ವಿಟರ್ (Twitter) ಗುರುವಾರ ಬಹಿರಂಗಪಡಿಸಿದೆ. ಈ ವರ್ಷ ಭಾರತದಲ್ಲಿ ಹೆಚ್ಚು ಜನರು ಇಷ್ಟಪಟ್ಟ ಟ್ವೀಟ್‌ಗಳು, ಹೆಚ್ಚಿನ ಮರುಟ್ವೀಟ್‌ಗಳು ಒಳಗೊಂಡಿದೆ. ಪ್ರತಿ ಕ್ಷೇತ್ರದಲ್ಲಿ ಈ ವರ್ಷದ ಅತ್ಯಂತ ಜನಪ್ರಿಯ ಹ್ಯಾಶ್‌ಟ್ಯಾಗ್‌ಗಳ ಬಗ್ಗೆಯೂ ಹೇಳಲಾಗಿದೆ.
ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಏಪ್ರಿಲ್‌ನಲ್ಲಿ ಟ್ವೀಟ್ ಮಾಡಿದ್ದು, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದರು. ಭಾರತಕ್ಕೆ ಆರ್ಥಿಕವಾಗಿ ಸಹಾಯ ಮಾಡುವುದಾಗಿ ಕಮ್ಮಿನ್ಸ್ ಟ್ವೀಟ್ ಮೂಲಕ ತಿಳಿಸಿದ್ದರು. ಕಮ್ಮಿನ್ಸ್ ಅವರ ಈ ಟ್ವೀಟ್ 2021 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ರಿಟ್ವೀಟ್ ಮಾಡಿದ ಟ್ವೀಟ್ ಆಗಿದೆ. ಇಲ್ಲಿಯವರೆಗೆ ಒಟ್ಟು 114,000 ಜನರು ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಈ ವರ್ಷ ತಂದೆಯಾದರು. ಅದಕ್ಕಾಗಿಯೇ ಅವರು ಆಸ್ಟ್ರೇಲಿಯಾ ಪ್ರವಾಸವನ್ನು ಅರ್ಧಕ್ಕೆ ಬಿಟ್ಟು ಬರಬೇಕಾಯ್ತು. ನಂತರ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸಂತಸದ ವಿಚಾರವನ್ನು ಕೊಹ್ಲಿ ಟ್ವೀಟ್ ಮೂಲಕ ತಿಳಿಸಿದ್ದರು. ಈ ಟ್ವೀಟ್‌ಗೆ ಇಡೀ ಭಾರತದಾದ್ಯಂತ ಸಾಕಷ್ಟು ಪ್ರೀತಿ ವ್ಯಕ್ತವಾಗಿತ್ತು. ಈ ಟ್ವೀಟ್ ಈ ವರ್ಷ ಭಾರತದಲ್ಲಿ ಹೆಚ್ಚು ಇಷ್ಟಪಟ್ಟ ಟ್ವೀಟ್ ಆಗಿದೆ. ಈ ಟ್ವೀಟ್‌ಗೆ ಇದುವರೆಗೆ 538,200 ಲೈಕ್‌ಗಳು ಬಂದಿವೆ.
ಇವೆರಡನ್ನು ಹೊರತುಪಡಿಸಿ ವಿರಾಟ್ ಕೊಹ್ಲಿಯ ಮತ್ತೊಂದು ಟ್ವೀಟ್ ಕ್ರೀಡಾ ಲೋಕದಲ್ಲಿ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಮಹೇಂದ್ರ ಸಿಂಗ್ ಧೋನಿ ಅಕ್ಟೋಬರ್‌ನಲ್ಲಿ ನಡೆದ ಐಪಿಎಲ್‌ನಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. ಇದಕ್ಕಾಗಿ ಧೋನಿಯನ್ನು ಹೊಗಳಿ ಕೊಹ್ಲಿ ಟ್ವೀಟ್ ಮಾಡಿದ್ದರು. ಕೊಹ್ಲಿಯ ಈ ಟ್ವೀಟ್ ಕ್ರೀಡಾ ಜಗತ್ತಿನಲ್ಲಿ ಅತಿ ಹೆಚ್ಚು ಲೈಕ್ ಮತ್ತು ರೀಟ್ವೀಟ್ ಮಾಡಿದ ಟ್ವೀಟ್ ಆಗಿದೆ. ಇದು ಇಲ್ಲಿಯವರೆಗೆ 529,000 ಲೈಕ್‌ಗಳನ್ನು ಪಡೆದಿದೆ ಮತ್ತು 91,600 ಜನರು ರಿಟ್ವೀಟ್ ಮಾಡಿದ್ದಾರೆ.
ಮತ್ತೊಂದೆಡೆ, 2021 ರಲ್ಲಿ ಕ್ರೀಡಾ ಜಗತ್ತಿನಲ್ಲಿ ಹೆಚ್ಚು ಪ್ರಸಿದ್ಧವಾದ ಹ್ಯಾಶ್‌ಟ್ಯಾಗ್ ಕುರಿತು ನಾವು ಮಾತನಾಡಿದರೆ, #Teamindia ವರ್ಷವಿಡೀ ಬಹಳ ಜನಪ್ರಿಯವಾಗಿತ್ತು. ಇದಲ್ಲದೇ ಟಿ20 ವಿಶ್ವಕಪ್ ಮತ್ತು ಟೋಕಿಯೊ ಒಲಿಂಪಿಕ್ಸ್‌ನ ಹ್ಯಾಶ್‌ಟ್ಯಾಗ್‌ಗಳು ಕೂಡ ಟ್ವಿಟರ್‌ನಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿದ್ದವು. #Tokyo2020 ಈ ವರ್ಷ ಕ್ರೀಡಾ ಜಗತ್ತಿನಲ್ಲಿ ಅತಿ ಹೆಚ್ಚು ರಿಟ್ವೀಟ್ ಮಾಡಿದ ಹ್ಯಾಶ್‌ಟ್ಯಾಗ್ ಆಗಿದೆ. #ಐಪಿಎಲ್ ಹ್ಯಾಶ್‌ಟ್ಯಾಗ್ ಕೂಡ ಕ್ರೀಡಾ ಲೋಕದಲ್ಲೂ ಸದ್ದು ಮಾಡಿತು.
Published On - 6:09 pm, Thu, 9 December 21