ಈ ಒಂದು ಆಯ್ಕೆಯ ವಿಚಾರದಿಂದ ರೋಹಿತ್ ಶರ್ಮಾ ತುಂಬಾ ಕುಗ್ಗಿದ್ದರು. ಏಕೆಂದರೆ ತಂಡದಲ್ಲಿದ್ದ ಆತನಿಗೆ ಇದು ತುಂಬಾ ಆಘಾತಕಾರಿ ಸುದ್ದಿಯಾಗಿತ್ತು. ನಾನು ಅವನನ್ನು (ರೋಹಿತ್) ನನ್ನ ಮನೆಗೆ ಕರೆದು ಅವನನ್ನು ಸಮಾಧಾನ ಮಾಡಿದೆ. ಇದು ಕೇವಲ ಕ್ರಿಕೆಟ್, ನೀವು ಕ್ರಿಕೆಟ್‌ನಿಂದ ಖ್ಯಾತಿ, ಹಣ ಎಲ್ಲವನ್ನೂ ಪಡೆದುಕೊಂಡಿದ್ದೀರಿ. ಆದರೆ ಈಗ ನೀನು ನಿನ್ನ ಕ್ರಿಕೆಟ್ ಅನ್ನು ನೋಡಿಕೊಳ್ಳುತ್ತಿಲ್ಲ. ಆದ್ದರಿಂದ ನೀನು ಅಭ್ಯಾಸವನ್ನು ಪ್ರಾರಂಭಿಸು. ವಿರಾಟ್ ಕೊಹ್ಲಿ ನಿಮ್ಮ ನಂತರ ಬಂದರು, ಅವರು (2011) ವಿಶ್ವಕಪ್ ತಂಡದಲ್ಲಿದ್ದಾರೆ. ವ್ಯತ್ಯಾಸ ನೋಡಿ ತಿಳಿದುಕೊಳ್ಳಿ. ಈಗ ನೀವು ನಿಮ್ಮ ಕ್ರಿಕೆಟ್ ಕಡೆ ಗಮನ ನೀಡಬೇಕೆಂದು ಅಂದು ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ತಿಳಿಸಿದ್ದರು.