IPL 2022: ಹೊಸ ತಂಡಗಳ ಹಿಟ್​ ಲೀಸ್ಟ್​ನಲ್ಲಿರುವ 5 ವಿದೇಶಿ ಆಟಗಾರರು ಇವರೇ..!

IPL 2022 Mega Auction: ಮೆಗಾ ಹರಾಜು ಪಟ್ಟಿಯಲ್ಲಿರುವ 5 ಸ್ಟಾರ್ ವಿದೇಶಿ ಆಟಗಾರರಲ್ಲಿ ಇಬ್ಬರು ಹರಾಜಿಗೂ ಮುನ್ನ ಹೊಸ ತಂಡಗಳ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಈಗಾಗಲೇ ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಈ ಆಟಗಾರರನ್ನು ಸೆಳೆಯಲು ಹೊಸ ಫ್ರಾಂಚೈಸಿಗಳು ಇನ್ನಿಲ್ಲದ ಪ್ರಯತ್ನ ಮಾಡಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Dec 09, 2021 | 7:42 PM

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ (IPL 2022 Mega Auction) ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದೆ. ಈ ಬಾರಿ ಹಳೆಯ ಫ್ರಾಂಚೈಸಿಗಳ ಎರಡು ಹೊಸ ಫ್ರಾಂಚೈಸಿ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಆದರೆ ಹಳೆಯ 8 ತಂಡಗಳಿಗೆ ರಿಟೈನ್ ಅವಕಾಶ ನೀಡಿರುವ ಕಾರಣ, ಹೊಸ ತಂಡಗಳಾದ ಲಕ್ನೋ ಹಾಗೂ ಅಹಮದಾಬಾದ್​ ತಂಡಗಳಿಗೆ ಬಿಸಿಸಿಐ ಸ್ಪೇಷಲ್ ಪಿಕ್ ಆಯ್ಕೆ ನೀಡಿದೆ.

1 / 9
ಅಂದರೆ 8 ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಆಟಗಾರರನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಈ ಎರಡು ಹೊಸ ತಂಡಗಳಿಗೆ ಇರಲಿದೆ. ಅದರಂತೆ ಇದೀಗ ರಿಲೀಸ್ ಆಗಿರುವ ಯಾವುದೇ ಆಟಗಾರರನ್ನು ಬೇಕಿದ್ದರೂ ಹೊಸ ಫ್ರಾಂಚೈಸಿಗಳು ಸಂಪರ್ಕಿಸಬಹುದು. ಆ ಮೂಲಕ ಮೆಗಾ ಹರಾಜಿಗಿಂತ ಮೊದಲೇ ಒಪ್ಪಂದ ಮಾಡಿಕೊಳ್ಳಬಹುದು. ಆದರೆ ಇಲ್ಲೂ ಕೂಡ ಕೆಲ ನಿಯಮಗಳು ಅನ್ವಯವಾಗಲಿದೆ.

2 / 9
ಈ ಬಾರಿಯ ಮೆಗಾ ಹರಾಜು ಮೊತ್ತವನ್ನು 90 ಕೋಟಿ ಎಂದು ನಿಗದಿಪಡಿಸಲಾಗಿದೆ. ಅದರಂತೆ ಹೊಸ ಫ್ರಾಂಚೈಸಿಗಳು 33 ಕೋಟಿಯೊಳಗೆ ಮೂವರು ಆಟಗಾರರನ್ನು ಆಯ್ಕೆ ಮಾಡಬಹುದು. ಈ ಮೂಲಕ ಇಬ್ಬರು ಭಾರತೀಯ ಆಟಗಾರರು+ ಒಬ್ಬ ವಿದೇಶಿ ಆಟಗಾರನನ್ನು ಮೆಗಾ ಹರಾಜು ಪಟ್ಟಿಯಿಂದ ಹೊಸ ಫ್ರಾಂಚೈಸಿಗಳು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಫ್ರಾಂಚೈಸಿ ಮೊದಲ ಆಟಗಾರನಿಗೆ 15 ಕೋಟಿ, 2ನೇ ಆಟಗಾರನಿಗೆ 11 ಕೋಟಿ ಹಾಗೂ 3ನೇ ಆಟಗಾರನಿಗೆ 7 ಕೋಟಿ ವ್ಯಯಿಸಬೇಕಾಗುತ್ತದೆ. ಈ ಮೊತ್ತ ನೀಡಿ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಬಹುದು.

3 / 9
ಅದರಂತೆ ಮೆಗಾ ಹರಾಜು ಪಟ್ಟಿಯಲ್ಲಿರುವ 5 ಸ್ಟಾರ್ ವಿದೇಶಿ ಆಟಗಾರರಲ್ಲಿ ಇಬ್ಬರು ಹರಾಜಿಗೂ ಮುನ್ನ ಹೊಸ ತಂಡಗಳ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಈಗಾಗಲೇ ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಈ ಆಟಗಾರರನ್ನು ಸೆಳೆಯಲು ಹೊಸ ಫ್ರಾಂಚೈಸಿಗಳು ಇನ್ನಿಲ್ಲದ ಪ್ರಯತ್ನ ಮಾಡಲಿದೆ. ಹಾಗಿದ್ರೆ ಮೆಗಾ ಹರಾಜು ಪಟ್ಟಿಯಲ್ಲಿರುವ 5 ಸ್ಟಾರ್ ಆಟಗಾರರು ಯಾರೆಂದು ನೋಡೋಣ...

4 / 9
ಡೇವಿಡ್ ವಾರ್ನರ್: ಎಸ್​ಆರ್​ಹೆಚ್​ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಅವರ ಖರೀದಿಗಾಗಿ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿ ಮುಂದಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು. ಏಕೆಂದರೆ ಎರಡೂ ತಂಡಗಳಿಗೆ ನಾಯಕ ಹಾಗೂ ಆರಂಭಿಕನ ಅವಶ್ಯಕತೆಯಿದೆ. ಇತ್ತ ಆಸ್ಟ್ರೇಲಿಯಾದ ತಂಡ ಆಟಗಾರ ವಾರ್ನರ್ ಖರೀದಿಯಿಂದ ಈ ಎರಡೂ ಆಯ್ಕೆಯನ್ನು ಪಡೆಯಬಹುದು.

5 / 9
 ಬೆನ್ ಸ್ಟೋಕ್ಸ್​: ಇಂಗ್ಲೆಂಡ್ ತಂಡದ ಆಲ್​ರೌಂಡರ್ ಬೆನ್​ ಸ್ಟೋಕ್ಸ್​ ಅವರನ್ನು ರಾಜಸ್ಥಾನ್ ರಾಯಲ್ಸ್​ ಬಿಡುಗಡೆ ಮಾಡಿದೆ. ಇದಾಗ್ಯೂ ಅಂತಾರಾಷ್ಟ್ರೀಯ ಕ್ರಿಕೆಟ್​ನ ಬೆಸ್ಟ್ ಆಲ್​ರೌಂಡರ್​ಗಳಲ್ಲಿ ಸ್ಟೋಕ್ಸ್ ಕೂಡ ಒಬ್ಬರು. ಹೀಗಾಗಿ ಹೊಸ ಫ್ರಾಂಚೈಸಿಗಳ ಆಯ್ಕೆಯ ಪಟ್ಟಿಯಲ್ಲಿ ಬೆನ್​ ಸ್ಟೋಕ್ಸ್ ಹೆಸರು ಕೂಡ ಮುಂಚೂಣಿಯಲ್ಲಿದೆ.

6 / 9
ಕಗಿಸೊ ರಬಾಡ: ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಐಪಿಎಲ್​ನ ಅತ್ಯಂತ ಯಶಸ್ವಿ ಬೌಲರುಗಳಲ್ಲಿ ಒಬ್ಬರು. ಆದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ರಬಾಡ ಅವರನ್ನು ರಿಲೀಸ್ ಮಾಡಿದೆ. ಹೊಸ ಫ್ರಾಂಚೈಸಿಗಳು ಇಬ್ಬರು ಬ್ಯಾಟರ್​ಗಳನ್ನು ಆಯ್ಕೆ ಮಾಡಿ, ಮತ್ತೋರ್ವ ವೇಗಿಯ ಆಯ್ಕೆಗೆ ಮುಂದಾದರೆ ಕಗಿಸೊ ರಬಾಡ ಹೊಸ ತಂಡದ ಪಾಲಾಗಬಹುದು.

7 / 9
ಫಾಫ್ ಡುಪ್ಲೆಸಿಸ್​: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್​ ಕೂಡ ಹರಾಜು ಪಟ್ಟಿಯಲ್ಲಿದ್ದಾರೆ. ಕಳೆದ ಬಾರಿ ಸಿಎಸ್​ಕೆ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಡುಪ್ಲೆಸಿಸ್​ ಅವರ ಖರೀದಿಗಾಗಿ ಈ ಬಾರಿ ಭರ್ಜರಿ ಪೈಪೋಟಿ ಕಂಡು ಬರಲಿದೆ. ಅದಕ್ಕೂ ಮುನ್ನ ಹೊಸ ಫ್ರಾಂಚೈಸಿಗಳು ಡುಪ್ಲೆಸಿಸ್ ಅವರನ್ನು ಆಯ್ಕೆ ಮಾಡಿದರೂ ಅಚ್ಚರಿಪಡಬೇಕಿಲ್ಲ.

8 / 9
ರಶೀದ್ ಖಾನ್: ಐಪಿಎಲ್​ನ ಸ್ಪಿನ್ ಮಾಂತ್ರಿಕ ಎಂದೇ ಗುರುತಿಸಿಕೊಂಡಿರುವ ಅಫ್ಘಾನಿಸ್ತಾನ್ ತಂಡದ ರಶೀದ್ ಖಾನ್ ಕೂಡ ಈ ಬಾರಿ ಮೆಗಾ ಹರಾಜಿನಲ್ಲಿರುವುದು ವಿಶೇಷ. ಎಸ್​ಆರ್​ಹೆಚ್​ ತಂಡದಿಂದ ಹೊರಬಂದಿರುವ ರಶೀದ್ ಖಾನ್ ಅವರ ಆಯ್ಕೆಗೆ ಹೊಸ ಫ್ರಾಂಚೈಸಿಗಳ ನಡುವೆಯೇ ಪೈಪೋಟಿ ಕಂಡು ಬರಲಿದೆ. ಹೀಗಾಗಿ ಹೊಸ ಎರಡು ತಂಡಗಳಲ್ಲಿ ಯಾವುದಾದರು ಒಂದು ಟೀಮ್ ರಶೀದ್ ಖಾನ್ ಅವರನ್ನು ಆಯ್ಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

9 / 9
Follow us
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್