ಕೊಹ್ಲಿ ಹಾಗೂ ಶಾಸ್ತ್ರಿ ನಡುವೆ ಉತ್ತಮ ಹೊಂದಾಣಿಕೆ ಕೂಡ ಇದ್ದು, ಹೀಗಾಗಿಯೇ ಇವರ ಅವಧಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿತು. ಇದಾಗ್ಯೂ ರವಿ ಶಾಸ್ತ್ರಿ-ಕೊಹ್ಲಿ ನೇತೃತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಮಾತ್ರ ಗೆದ್ದಿರಲಿಲ್ಲ. ಇದೀಗ ರವಿಶಾಸ್ತ್ರಿ ಅಧಿಕಾರಾವಧಿ ಮುಗಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕನ ಸ್ಥಾನದಿಂದಲೂ ಕೆಳಗಿಸಿರುವುದು ವಿಶೇಷ.