Sanju Samson: ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯಲಿದ್ದಾರೆ ಸಂಜು ಸ್ಯಾಮ್ಸನ್

Updated on: Aug 07, 2025 | 7:27 PM

Sanju Samson: ಐಪಿಎಲ್ ಟ್ರೇಡಿಂಗ್ ವಿಂಡೋ ತೆರೆದಿರುವ ಹಿನ್ನೆಲೆಯಲ್ಲಿ, ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ತಂಡ ಬಿಡುವ ಸಾಧ್ಯತೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಲವು ವರದಿಗಳ ಪ್ರಕಾರ ಸಂಜು ತಮ್ಮ ತಂಡದ ನಿರ್ವಹಣೆಯೊಂದಿಗೆ ಭಿನ್ನಾಭಿಪ್ರಾಯಗಳಿಂದಾಗಿ ತಂಡ ಬಿಡಲು ನಿರ್ಧರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಇತರ ತಂಡಗಳು ಸಂಜು ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿರುವುದಾಗಿ ವರದಿಯಾಗಿದೆ. ಆದರೆ ಇದಕ್ಕೆ ಇನ್ನೂ ಅಧಿಕೃತ ದೃಢೀಕರಣ ಸಿಕ್ಕಿಲ್ಲ.

1 / 7
ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೊಸ ಸೀಸನ್ ಆರಂಭವಾಗಲು ಇನ್ನೂ ಸಾಕಷ್ಟು ದಿನಗಳು ಬಾಕಿ ಉಳಿದಿವೆ. ಮಿನಿ ಹರಾಜು ಕೂಡ ಡಿಸೆಂಬರ್ ಅಥವಾ ಜನವರಿಯಲ್ಲಿ ನಡೆಯಬಹುದು. ಆದಾಗ್ಯೂ ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ವಿಂಡೋ ತೆರೆದಿದ್ದು, ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿವೆ.

2 / 7
ಇದಕ್ಕೆ ಪೂರಕವಾಗಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವ ಸಂಜು ಸ್ಯಾಮ್ಸನ್ ಕಳೆದ ಹಲವಾರು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಕೇಳಿಬರುತ್ತಿರುವ ವದಂತಿಗಳು ಮತ್ತು ಊಹಾಪೋಹಗಳ ಪ್ರಕಾರ ಸಂಜು ಮುಂದಿನ ಆವೃತ್ತಿಯಲ್ಲಿ ಬೇರೆ ತಂಡದ ಪರ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ.

3 / 7
ಐಪಿಎಲ್ 2025 ರ ಸೀಸನ್ ಮುಗಿದ ಬಳಿಕವೇ ಸಂಜು ಸ್ಯಾಮ್ಸನ್ ಇನ್ನು ಮುಂದೆ ಈ ಫ್ರಾಂಚೈಸಿಯ ಭಾಗವಾಗುವುದಿಲ್ಲ ಎಂಬ ಸುದ್ದಿ ಹರಿದಾಡಲಾರಂಭಿಸಿತು. ಅಲ್ಲದೆ ಸಂಜುರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್‌ ಪ್ರಾಂಚೈಸಿ ಪ್ರಯತ್ನಿಸುತ್ತಿದೆ. ಅಲ್ಲದೆ ಸಂಜುಗಾಗಿ ಎರಡು ಫ್ರಾಂಚೈಸಿಗಳ ನಡುವೆ ಟ್ರೇಡಿಂಗ್ ನಡೆಯುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿರಲಿಲ್ಲ.

4 / 7
ಆದರೆ ಈಗ ಕ್ರಿಕ್‌ಬಜ್‌, ಸಂಜು ಸ್ಯಾಮ್ಸನ್ ಅವರ ಆಪ್ತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತೊರೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ತಾವು ತಂಡವನ್ನು ತೊರೆಯುವ ಉದ್ದೇಶವನ್ನು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್‌ಗೆ ಔಪಚಾರಿಕವಾಗಿ ತಿಳಿಸಿದ್ದು, ಟ್ರೇಡಿಂಗ್ ಅಥವಾ ಮಿನಿ ಹರಾಜಿಗಾಗಿ ತನ್ನನ್ನು ತಂಡದಿಂದ ಬಿಡುಗಡೆ ಮಾಡಬೇಕೆಂದು ವಿನಂತಿಸಿದ್ದಾರೆ ಎಂದು ವರದಿ ಹೇಳುತ್ತದೆ.

5 / 7
ಸಧ್ಯಕ್ಕೆ ಕೇಳಿಬಂದಿರುವ ವದಂತಿಯ ಪ್ರಕಾರ ಸಂಜು ಸ್ಯಾಮ್ಸನ್ ಮತ್ತು ಫ್ರಾಂಚೈಸಿಯ ಮ್ಯಾನೇಜ್‌ಮೆಂಟ್ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ. ಇದರಿಂದಾಗಿ ಸಂಜು ಸ್ಯಾಮ್ಸನ್ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪೂರಕವಾಗಿ ಕಳೆದ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಹಾಗೂ ಮ್ಯಾನೇಜ್‌ಮೆಂಟ್ ನಡುವೆ ಯಾವುದು ಸರಿಯಿಲ್ಲ ಎಂಬ ಕೆಲವು ಘಟನೆಗಳು ಕೂಡ ನಡೆದಿದ್ದವು.

6 / 7
ಕಳೆದ 8 ಆವೃತ್ತಿಗಳಲ್ಲಿ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದಾರೆ. 2013 ರಲ್ಲಿ ಈ ತಂಡದ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸಂಜು ಸತತ 3 ಆವೃತ್ತಿಗಳಲ್ಲಿ ತಂಡದ ಪರ ಆಡಿದ್ದರು. ಆ ನಂತರ ಫ್ರಾಂಚೈಸಿಯನ್ನು 2 ವರ್ಷಗಳ ಕಾಲ ನಿಷೇಧಿಸಿದಾಗ, ಸಂಜು 2016 ಮತ್ತು 2017 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಆಡಿದ್ದರು.

7 / 7
ಆ ನಂತರ ರಾಜಸ್ಥಾನ ರಾಯಲ್ಸ್ ತಂಡಕ್ಕೆ ವಿಧಿಸಲಾಗಿದ್ದ ನಿಷೇಧ ತೆರವಾದ ಬಳಿಕ 2018 ರಲ್ಲಿ ಮತ್ತೆ ಸಂಜು ಈ ತಂಡವನ್ನು ಸೇರಿಕೊಂಡರು. ಅಂದಿನಿಂದ ಈ ತಂಡದ ಭಾಗವಾಗಿರುವ ಸಂಜು. 2021 ರಲ್ಲಿ ತಂಡದ ನಾಯಕತ್ವವಹಿಸಿಕೊಂಡರು. ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ 14 ವರ್ಷಗಳ ನಂತರ ಐಪಿಎಲ್ ಫೈನಲ್‌ಗೆ ತಲುಪಿತ್ತು.