Sanju Samson: ಏಷ್ಯಾಕಪ್​ಗಾಗಿ ಬ್ಯಾಟಿಂಗ್ ಕ್ರಮಾಂಕ ಬದಲಿಸಿದ ಸಂಜು ಸ್ಯಾಮ್ಸನ್‌

Updated on: Aug 22, 2025 | 8:56 PM

Sanju Samson's Asia Cup 2025 Role: 2025ರ ಏಷ್ಯಾಕಪ್‌ನಲ್ಲಿ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಯಾವ ಪಾತ್ರ ಎಂಬುದು ಕುತೂಹಲಕಾರಿಯಾಗಿದೆ. ಕಳೆದ ವರ್ಷ ಆರಂಭಿಕನಾಗಿ ಅದ್ಭುತ ಪ್ರದರ್ಶನ ನೀಡಿದ್ದರೂ, ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರ ಆಗಮನದಿಂದ ಅವರ ಸ್ಥಾನ ಅನಿಶ್ಚಿತವಾಗಿದೆ. ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಐದನೇ ಕ್ರಮಾಂಕದಲ್ಲಿ ಆಡುತ್ತಿರುವುದು ಅವರ ಪಾತ್ರ ಬದಲಾವಣೆಗೆ ಸೂಚನೆಯಾಗಿದೆ.

1 / 7
2025 ರ ಏಷ್ಯಾಕಪ್​ಗೆ ಟೀಂ ಇಂಡಿಯಾವನ್ನು ಪ್ರಕಟಿಸುವುದಕ್ಕೂ ಮುನ್ನ ಈ ಟೂರ್ನಿಗೆ ಯಾರೆಲ್ಲ ಅವಕಾಶ ಪಡೆಯುತ್ತಾರೆ ಎಂಬ ಕುತೂಹಲ ಮೂಡಿತ್ತು. ಇದೀಗ ತಂಡವನ್ನು ಪ್ರಕಟಿಸಿದ ಬಳಿಕ ಯಾರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಲಿದೆ ಎಂಬುದು ಪ್ರಶ್ನೆಯಾಗಿದೆ. ಇದೆಲ್ಲದರ ನಡುವೆ ಪ್ರಸ್ತುತ ತಂಡದಲ್ಲಿ ಆರಂಭಿಕನಾಗಿ ಆಡುತ್ತಿರುವ ಸಂಜುಗೆ ಯಾವ ಕ್ರಮಾಂಕ ಸಿಗಬಹುದು ಎಂಬುದು ಮತ್ತೊಂದು ಪ್ರಶ್ನೆಯಾಗಿದೆ.

2 / 7
ವಾಸ್ತವವಾಗಿ ಸಂಜು ಸ್ಯಾಮ್ಸನ್ ಕೆಲವು ಸಮಯದಿಂದ ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ. 2024 ರಲ್ಲಿ ಆರಂಭಿಕರಾಗಿ ಮೂರು ಶತಕಗಳನ್ನು ಸಂಜು ಬಾರಿಸಿದ್ದರು. ಆದಾಗ್ಯೂ, ಅಭಿಷೇಕ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿರುವುದರಿಂದ 2025 ರ ಏಷ್ಯಾಕಪ್​ನಲ್ಲಿ ಆರಂಭಿಕ ಆಟಗಾರನಾಗಿ ಸಂಜುಗೆ ಅವಕಾಶ ಸಿಗುವುದು ಅನುಮಾನವಾಗಿದೆ.

3 / 7
ಸಂಜು ಸ್ಯಾಮ್ಸನ್ ಪ್ರಸ್ತುತ ಕೇರಳ ಕ್ರಿಕೆಟ್ ಲೀಗ್ 2025 ರಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಪರ ಆಡುತ್ತಿದ್ದಾರೆ. ತಂಡವು ತನ್ನ ಮೊದಲ ಪಂದ್ಯವನ್ನು ಅದಾನಿ ತ್ರಿವೇಂದ್ರಮ್ ರಾಯಲ್ಸ್ ವಿರುದ್ಧ ಆಡಿತು, ಇದರಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಐದನೇ ಸ್ಥಾನದಲ್ಲಿ ಹೆಸರಿಸಲಾಯಿತು. ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗದಿದ್ದರೂ, ಅವರ ನಿರ್ಧಾರವನ್ನು ನೋಡಿದರೆ, ಅವರು ತಮ್ಮ ಹೊಸ ಪಾತ್ರಕ್ಕೆ ತಮ್ಮನ್ನು ತಾವು ಹೊಂದಿಸಿಕೊಳ್ಳಲು ಬಯಸುತ್ತಿರುವಂತೆ ತೋರುತ್ತದೆ.

4 / 7
2025 ರ ಏಷ್ಯಾಕಪ್ ಬಗ್ಗೆ ಹೇಳುವುದಾದರೆ, ಸಂಜು ಸ್ಯಾಮ್ಸನ್ ಜೊತೆಗೆ, ಜಿತೇಶ್ ಶರ್ಮಾ ಅವರನ್ನು ವಿಕೆಟ್ ಕೀಪರ್ ಆಗಿ ಸೇರಿಸಿಕೊಳ್ಳಲಾಗಿದೆ. ಜಿತೇಶ್ ಶರ್ಮಾ ಯಾವಾಗಲೂ ಐದು ಅಥವಾ ಆರನೇ ಸ್ಥಾನದಲ್ಲಿ ಆಡುವುದನ್ನು ನೋಡಿದ್ದೇವೆ. ಹೀಗಾಗಿ ಸಂಜು ಸ್ಯಾಮ್ಸನ್ ಕೂಡ ಈಗ ಈ ಪಾತ್ರಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

5 / 7
ಸಂಜು ಸ್ಯಾಮ್ಸನ್ ಭಾರತ ಪರ ಇದುವರೆಗೆ 42 ಟಿ20 ಪಂದ್ಯಗಳನ್ನು ಆಡಿದ್ದು, 25 ಸರಾಸರಿಯಲ್ಲಿ 861 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಆರಂಭಿಕ ಆಟಗಾರನಾಗಿ ಅವರು 14 ಪಂದ್ಯಗಳಲ್ಲಿ 39.38 ಸರಾಸರಿಯಲ್ಲಿ 512 ರನ್ ಗಳಿಸಿದ್ದಾರೆ.

6 / 7
ಹಾಗೆಯೇ ಐದನೇ ಕ್ರಮಾಂಕದಲ್ಲಿ 5 ಪಂದ್ಯಗಳನ್ನು ಆಡಿರುವ ಸಂಜು 20.66 ಸರಾಸರಿಯಲ್ಲಿ 62 ರನ್ ಮತ್ತು 131.91 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 62 ರನ್ ಗಳಿಸಿದ್ದಾರೆ. 6 ನೇ ಕ್ರಮಾಂಕದಲ್ಲಿ ಕೇವಲ ಒಂದು ಪಂದ್ಯವನ್ನು ಆಡಿರುವ ಸಂಜು 12 ಸರಾಸರಿಯಲ್ಲಿ 12 ರನ್ ಗಳಿಸಿದ್ದಾರೆ. ಹೀಗಾಗಿ ಆರಂಭಿಕ ಆಟಗಾರನಾಗಿ ಸಂಜು ಅವರ ಪ್ರದರ್ಶನ ಅತ್ಯುತ್ತಮವಾಗಿದೆ ಎನ್ನಬಹುದು.

7 / 7
2025 ರ ಏಷ್ಯಾ ಕಪ್ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 28 ರಂದು ನಡೆಯಲಿದೆ. ಟೀಂ ಇಂಡಿಯಾ ಈ ಟೂರ್ನಮೆಂಟ್‌ನ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಆಡಲಿದ್ದು, ತಂಡವು ಸೆಪ್ಟೆಂಬರ್ 14 ರಂದು ಪಾಕಿಸ್ತಾನ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ. ಭಾರತವು ಸೆಪ್ಟೆಂಬರ್ 19 ರಂದು ಓಮನ್ ವಿರುದ್ಧ ತನ್ನ ಮೂರನೇ ಮತ್ತು ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.