Updated on:Dec 17, 2022 | 1:53 PM
ಟೀಂ ಇಂಡಿಯಾ ಕ್ರಿಕೆಟಿಗ ಶಾರ್ದೂಲ್ ಠಾಕೂರ್ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಕಳೆದ ವರ್ಷವಷ್ಟೇ ಮಿಥಾಲಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶಾರ್ದೂಲ್ ಅವರ ಮದುವೆ ದಿನಾಂಕ ಹೊರಬಿದ್ದಿದೆ.
ಹಿಂದೂಸ್ತಾನ್ ಟೈಮ್ಸ್‌ನ ಸುದ್ದಿ ಪ್ರಕಾರ, ಫೆಬ್ರವರಿ 27 ರಂದು ತಾನು ಮತ್ತು ಶಾರ್ದೂಲ್ ಪರಸ್ಪರರ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇವೆ ಎಂದು ಮಿಥಾಲಿ ಹೇಳಿದ್ದಾರೆ. ಇದರೊಂದಿಗೆ ಮಿಥಾಲಿ ಮದುವೆ ತಯಾರಿಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಫೆಬ್ರವರಿ 25ರಿಂದ ಸಮಾರಂಭ ಆರಂಭವಾಗಲಿದೆ ಎಂದು ಬ್ಯಾಂಕಿಂಗ್ ಸ್ಟಾರ್ಟ್‌ಅಪ್‌ನ ಸಂಸ್ಥಾಪಕಿ ಮಿಥಾಲಿ ಹೇಳಿಕೊಂಡಿದ್ದಾರೆ.ಶಾರ್ದೂಲ್ ಅವರ ವೇಳಾಪಟ್ಟಿ ತುಂಬಾ ಬ್ಯುಸಿಯಾಗಿದ್ದು, ಅವರು ಫೆಬ್ರವರಿ 24 ರವರೆಗೆ ಕ್ರಿಕೆಟ್ ಆಡಲಿದ್ದಾರೆ. ನಂತರ ಫೆಬ್ರವರಿ 25 ರಿಂದ ಅವರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ.
ಮುಂಬೈನಲ್ಲಿ ಸಮಾರಂಭ ನಡೆಯಲ್ಲಿದ್ದು, ಸುಮಾರು 200 ರಿಂದ 250 ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಶಾರ್ದೂಲ್ ಅವರ ಭಾವಿ ಮಡದಿ ಹೇಳಿದ್ದಾರೆ.
ಶಾರ್ದೂಲ್ ಮತ್ತು ಮಿತಾಲಿ ಮದುವೆಗೆ ವಿನ್ಯಾಸಕಾರರನ್ನು ಅಂತಿಮಗೊಳಿಸಲಾಗಿದ್ದು, ಮದುವೆಯ ಕೇಕ್ ಅನ್ನು ನಾನೇ ತಯಾರಿಸುತ್ತೇನೆ ಎಂದು ಮಿಥಾಲಿ ಹೇಳಿಕೊಂಡಿದ್ದಾರೆ.
Published On - 1:53 pm, Sat, 17 December 22