IPL 2025: ಯಾವ ತಂಡಕ್ಕೂ ಬೇಡವಾಗಿದ್ದ ಶಾರ್ದೂಲ್ ಈಗ ಐಪಿಎಲ್​ನ ನಂ.1 ಬೌಲರ್​..!

Updated on: Mar 27, 2025 | 10:42 PM

Shardul Thakur's Purple Cap Performance: ಐಪಿಎಲ್ 2025ರ ಏಳನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೋಲುಂಡಿದೆ. ಲಕ್ನೋ ಪರ ಶಾರ್ದೂಲ್ ಠಾಕೂರ್ ಅವರು ಅದ್ಭುತ ಬೌಲಿಂಗ್ ಮಾಡಿ 4 ವಿಕೆಟ್‌ಗಳನ್ನು ಪಡೆದು ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ. ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಶಾರ್ದೂಲ್, ಲಕ್ನೋ ತಂಡ ಸೇರಿದ ನಂತರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರ ಈ ಅದ್ಭುತ ಬೌಲಿಂಗ್ ಲಕ್ನೋ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದೆ.

1 / 6
ಐಪಿಎಲ್ 2025 ರ ಏಳನೇ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್‌ ತಂಡವನ್ನು 190 ರನ್​ಗಳಿಗೆ ಕಟ್ಟಿಹಾಕುವಲ್ಲಿ ಲಕ್ನೋ ತಂಡ ಯಶಸ್ವಿಯಾಯಿತು. ಲಕ್ನೋ ಪರ ಮಾರಕ ದಾಳಿ ನಡೆಸಿದ ಶಾರ್ದೂಲ್ ಠಾಕೂರ್, ಅತ್ಯಧಿಕ 4 ವಿಕೆಟ್ ಪಡೆದು ಮಿಂಚಿದರು.

ಐಪಿಎಲ್ 2025 ರ ಏಳನೇ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್‌ ತಂಡವನ್ನು 190 ರನ್​ಗಳಿಗೆ ಕಟ್ಟಿಹಾಕುವಲ್ಲಿ ಲಕ್ನೋ ತಂಡ ಯಶಸ್ವಿಯಾಯಿತು. ಲಕ್ನೋ ಪರ ಮಾರಕ ದಾಳಿ ನಡೆಸಿದ ಶಾರ್ದೂಲ್ ಠಾಕೂರ್, ಅತ್ಯಧಿಕ 4 ವಿಕೆಟ್ ಪಡೆದು ಮಿಂಚಿದರು.

2 / 6

ಆತಿಥೇಯ ಹೈದರಾಬಾದ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಶಾರ್ದೂಲ್, ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿರುವ ಹೈದರಾಬಾದ್​ನ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್​ಗಟ್ಟಿದರು. ಈ ಪಂದ್ಯದಲ್ಲಿ ಶಾರ್ದೂಲ್ 4 ಓವರ್‌ಗಳಲ್ಲಿ 34 ರನ್ ನೀಡಿ 4 ವಿಕೆಟ್ ಕಬಳಿಸಿ ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್ ಅಪ್ ಅನ್ನು ನಾಶಪಡಿಸಿದರು.

3 / 6

ಇದೀಗ ಈ ಪಂದ್ಯದಲ್ಲಿ 4 ವಿಕೆಟ್​ ಪಡೆದ ಸಾಧನೆ ಮಾಡಿದ ಶಾರ್ದೂಲ್ ಈ ಆವೃತ್ತಿಯ ನಂಬರ್-1 ಬೌಲರ್ ಆಗಿ ಹೊರಹೊಮ್ಮಿದ್ದು, ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಶಾರ್ದೂಲ್ ಠಾಕೂರ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು 2 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಪಡೆದಿದ್ದಾರೆ.

4 / 6

ಶಾರ್ದೂಲ್ ಠಾಕೂರ್ ಇಂದು ಐಪಿಎಲ್ 2025 ರಲ್ಲಿ ಛಾಪು ಮೂಡಿಸಿರಬಹುದು. ಆದರೆ ಇದಕ್ಕೂ ಮೊದಲು ಯಾವುದೇ ತಂಡವು ಅವರನ್ನು ಖರೀದಿಸಿರಲಿಲ್ಲ. ಮೆಗಾ ಹರಾಜಿಗೆ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಪ್ರವೇಶಿಸಿದ್ದ ಶಾರ್ದೂಲ್​ ಮೇಲೆ ಯಾವುದೇ ಫ್ರಾಂಚೈಸಿ ಬಿಡ್ ಮಾಡಲಿಲ್ಲ. ಹೀಗಾಗಿ ಶಾರ್ದೂಲ್ ಮಾರಾಟವಾಗದೆ ಉಳಿಯಬೇಕಾಯಿತು.

5 / 6

ಇದಾದ ನಂತರ, ಲಕ್ನೋ ಸೂಪರ್ ಜೈಂಟ್ಸ್ ತಂಡವು ತಮ್ಮ ಪ್ರಮುಖ ವೇಗಿ ಮೊಹ್ಸಿನ್ ಖಾನ್ ಗಾಯಗೊಂಡಾಗ ಅವರ ಬದಲಿಯಾಗಿ ಶಾರ್ದೂಲ್​ ಠಾಕೂರ್​ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಶಾರ್ದೂಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಓವರ್‌ನಲ್ಲಿ 2 ವಿಕೆಟ್‌ಗಳನ್ನು ಉರುಳಿಸಿದ್ದರು.

6 / 6

ಇದಾದ ನಂತರ, ಹೈದರಾಬಾದ್ ವಿರುದ್ಧದ ಪವರ್‌ಪ್ಲೇನಲ್ಲಿಯೇ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರಂತಹ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಕೊನೆಯಲ್ಲಿ ಅವರು ಮೊಹಮ್ಮದ್ ಶಮಿ ಮತ್ತು ಅಭಿನವ್ ಮನೋಹರ್ ಅವರನ್ನು ಔಟ್ ಮಾಡಿದರು. ಈ ರೀತಿಯಾಗಿ, ಅವರು 4 ಓವರ್‌ಗಳಲ್ಲಿ 34 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರು. ಇದು ಈ ಟೂರ್ನಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

Loading...
Unable to load recommendations.
Follow Us