Team India: ನಿವೃತ್ತಿಗೆ ಮುಂದಾದ ಟೀಮ್ ಇಂಡಿಯಾದ ಈ ಮೂರು ಸ್ಟಾರ್ ಆಟಗಾರರು: ಯಾರು ನೋಡಿ
TV9kannada Web Team | Edited By: Vinay Bhat
Updated on: Jul 16, 2022 | 10:14 AM
ಟೀಮ್ ಇಂಡಿಯಾದ ಹಳೆಯ ಹುಲಿಗಳು ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಚುಟುಕು ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ನೀಡುವ ಸಾಧ್ಯತೆ ಇದೆ. ಅವರು ಯಾರೆಲ್ಲ ಎಂಬುದನ್ನು ನೋಡೋಣ.
Jul 16, 2022 | 10:14 AM
ಭಾರತ ಕ್ರಿಕೆಟ್ ತಂಡದಲ್ಲಿ ಇಂದು ಲೆಕ್ಕಕ್ಕೆ ಸಿಗದಷ್ಟು ಅನೇಕ ಪ್ರತಿಭೆಗಳು ಹುಟ್ಟಿಕೊಂಡಿವೆ. ಟೀಮ್ ಇಂಡಿಯಾವನ್ನು ಎರಡು ತಂಡಗಳಾಗಿ ವಿಂಗಡಿಸಬಹುದೆಂದು ಈಗಾಗಲೇ ಅನೇಕರು ಹೇಳಿದ್ದಾರೆ. ಇತ್ತೀಚೆಗಷ್ಟೆ ಬಿಸಿಸಿಐ ಕೂಡ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಇದ್ದಾಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಈ ಪ್ರಯೋಗ ನಡೆಸಿತ್ತು. ಇದರಲ್ಲಿ ಯಶಸ್ವಿ ಕೂಡ ಆಯಿತು.
1 / 6
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ಆವೇಶ್ ಖಾನ್, ಉಮ್ರಾನ್ ಮಲಿಕ್, ಆರ್ಶ್ ದೀಪ್ ಸಿಂಗ್, ರವಿ ಬಿಷ್ಟೋಯಿ ಹೀಗೆ ಅನೇಕ ಯುವ ಆಟಗಾರರು ಭಾರತಕ್ಕೆ ಆಗಮಿಸುತ್ತಿದ್ದು ಹಿರಿಯ ಆಟಗಾರರಿಗೆ ಜಾಗವಿಲ್ಲದಂತಾಗಿದೆ.
2 / 6
ಇದೇ ಕಾರಣಕ್ಕೆ ಟೀಮ್ ಇಂಡಿಯಾದ ಹಳೆಯ ಹುಲಿಗಳು ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಚುಟುಕು ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ನೀಡುವ ಸಾಧ್ಯತೆ ಇದೆ. ಅವರು ಯಾರೆಲ್ಲ ಎಂಬುದನ್ನು ನೋಡೋಣ.
3 / 6
ಮೊಹಮ್ಮದ್ ಶಮಿ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯದೆ ತುಂಬಾ ಸಮಯ ಕಳೆದಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಇವರು ಕೊನೆಯದಾಗಿ ಚುಟುಕು ಕ್ರಿಕೆಟ್ ನಲ್ಲಿ ಭಾರತ ಪರ ಕಣಕ್ಕಿಳಿದಿದ್ದರು. ಅನೇಕ ಯುವ ವೇಗಿಗಳು ತಂಡಕ್ಕೆ ಸೇರಿಕೊಂಡಿರುವುದರಿಂದ ಶಮಿ ಜಾಗಕ್ಕೆ ಕುತ್ತು ಬಂದಿದೆ. ಹೀಗಾಗಿ ಇವರು ಟಿ20 ವಿಶ್ವಕಪ್ ಬಳಿಕ ನಿವೃತ್ತಿ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಶಮಿ ಭಾರತ ಪರ 17 ಟಿ20 ಪಂದ್ಯಗಳನ್ನು ಆಡಿದ್ದು 18 ವಿಕೆಟ್ ಪಡೆದಿದ್ದಾರೆ.
4 / 6
ಟೀಮ್ ಇಂಡಿಯಾದಲ್ಲಿ ಸದ್ಯ ಓಪನರ್ ಗಳ ಪಟ್ಟಕ್ಕೆ ಕಠಿಣ ಪೈಪೋಟಿ ಏರ್ಪಟ್ಟಿದೆ. ರೋಹಿತ್, ಧವನ್, ಕೆಎಲ್, ಕಿಶನ್, ರುತುರಾಜ್ ಹೀಗೆ ಅನೇಕ ಆಯ್ಕೆಗಳಿವೆ. ಇವರ ನಡುವೆ ಶಿಖರ್ ಧವನ್ ನಿಧಾನವಾಗಿ ಸ್ಥಾನ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಟಿ20 ತಂಡದಿಂದ ಹೊರಬಿದ್ದಿರುವ ಧವನ್ ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಇವರುಕೂಡ ಆದಷ್ಟು ಬೇಗ ಟಿ20 ಕ್ರಿಕೆಟ್ ಗೆ ವಿದಾಯ ಹೇಳುವ ಸಾಧ್ಯತೆ ಇದೆ.
5 / 6
ಟೆಸ್ಟ್ ಪಂದ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಕೂಡ ಟಿ20 ಕ್ರಿಕೆಟ್ ನಿಂದ ಹಿಂದೆ ಸರಿಯಲಿದ್ದಾರೆ. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಬಿಸಿಸಿಐ ಇವರನ್ನು ಆಯ್ಕೆ ಮಾಡಿದ್ದು ಇಲ್ಲಿ ವಿಕೆಟ್ ಕೀಳಲು ವಿಫಲರಾದರೆ ವೈಟ್ ಬಾಲ್ ಕ್ರಿಕೆಟ್ ಗೆ ಮತ್ತೆ ಇವರು ಆಯ್ಕೆ ಆಗುವುದು ಅನುಮಾನ.