- Kannada News Photo gallery Cricket photos Kannada News | Robin Uthappa has been blessed with a baby girl daughter Trinity Thea Uthappa
Robin Uthappa: ರಾಬಿನ್ ಉತ್ತಪ್ಪ-ಶೀತಲ್ ದಂಪತಿಗೆ ಮುದ್ದಾದ ಹೆಣ್ಣು ಮಗು ಜನನ: ಹೆಸರು ಟ್ರಿನಿಟಿ ಥಿಯಾ
ಟೀಮ್ ಇಂಡಿಯಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್ ರಾಬಿನ್ ಉತ್ತಪ್ಪ ಪತ್ನಿ ಶೀತಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ರಾಬಿನ್ ಉತ್ತಪ್ಪ ಇನ್ ಸ್ಟಾಗ್ರಾಮ್ ನಲ್ಲಿ ಮಗುವಿನ ಫೋಟೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.
Updated on:Jul 15, 2022 | 11:16 AM

ಟೀಮ್ ಇಂಡಿಯಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್ ರಾಬಿನ್ ಉತ್ತಪ್ಪ ಪತ್ನಿ ಶೀತಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ರಾಬಿನ್ ಉತ್ತಪ್ಪ ಇನ್ ಸ್ಟಾಗ್ರಾಮ್ ನಲ್ಲಿ ಮಗುವಿನ ಫೋಟೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.

ಪತ್ನಿ, ಹಾಗೂ ಮುದ್ದಾದ ನವಜಾತ ಹೆಣ್ಣು ಮಗುವಿನ ಫೋಟೋ ಇನ್ ಸ್ಟಾಗ್ರಾಮ್ ನಲ್ಲಿ ಉತ್ತಪ್ಪ ಹಂಚಿಕೊಂಡಿದ್ದಾರೆ. ಇದಕ್ಕೆ ಕೆಎಲ್ ರಾಹುಲ್, ಪಿಯೂಷ್ ಚಾವ್ಲಾ, ಇರ್ಫಾನ್ ಪಠಾಣ್ ಸೇರಿದಂತೆ ಅಭಿನಂದನೆ ಸಲ್ಲಿಸಿದ್ದಾರೆ.

'ಹೃದಯ ತುಂಬಿ ಬಂದಿದೆ. ನಾವಿಂದು ನಮ್ಮ ಕುಟುಂಬಕ್ಕೆ ಹೊಸ ದೇವತೆಯನ್ನ ಪರಿಚಯಿಸುತ್ತಿದ್ದೇವೆ. ಹೊಸ ಮಗುವಿಗೆ 'ಟ್ರಿನಿಟಿ ಥಿಯಾ ಉತ್ತಪ್ಪ' ಎಂದು ನಾಮಕರಣ ಮಾಡಲಾಗಿದೆ. ಜಗತ್ತಿಗೆ ಬರಲು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

ರಾಬಿನ್ ಉತ್ತಪ್ಪ ಹಾಗೂ ಅವರ ಪತ್ನಿ ಶೀತಲ್ ಅವರಿಗೆ ಈಗಾಗಲೇ ಒಂದು ಗಂಡು ಮಗುವಿದೆ. ಶೀತಲ್ 2017ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದರು.

2006ರಲ್ಲಿ ಭಾರತದ ಪರ ಪದಾರ್ಪಣೆ ಮಾಡಿರುವ ರಾಬಿನ್ ಉತ್ತಪ್ಪ, 2007ರಲ್ಲಿ ಟೀಮ್ ಇಂಡಿಯಾ ಗೆದ್ದ ಟಿ-20 ವಿಶ್ವಕಪ್ ತಂಡದ ಭಾಗಿಯಾಗಿದ್ದರು. ಭಾರತ ಪರ 46 ಏಕದಿನ ಹಾಗೂ 13 ಟಿ-20 ಪಂದ್ಯಗಳನ್ನಾಡಿದ್ದಾರೆ.

ಐಪಿಎಲ್ ನಲ್ಲಿ 205 ಪಂದ್ಯಗಳನ್ನಾಡಿರುವ ರಾಬಿನ್ ಉತ್ತಪ್ಪ 4,952ರನ್ಗಳಿಕೆ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಐಪಿಎಲ್ನಲ್ಲಿ ಸಿಎಸ್ ಕೆ ತಂಡದ ಪರ ಬ್ಯಾಟ್ ಬೀಸುತ್ತಿದ್ದಾರೆ.
Published On - 10:28 am, Fri, 15 July 22



















