ಕಿಂಗ್ ಕೊಹ್ಲಿಯ ದಾಖಲೆಯನ್ನು ಧೂಳೀಪಟ ಮಾಡಿದ ಶುಭ್​ಮನ್ ಗಿಲ್

Updated on: Jul 12, 2025 | 9:55 AM

India vs England: ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 382 ರನ್​ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಢಿಯಾ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 145 ರನ್​ ಕಲೆಹಾಕಿದೆ.

1 / 5
ದಾಖಲೆಗಳು ಇರುವುದೇ ಮುರಿಯೋದಕ್ಕೆ... ಸಚಿನ್ ತೆಂಡೂಲ್ಕರ್ ಬರೆದಿದ್ದ ಅನೇಕ ವಿಶ್ವ ದಾಖಲೆಗಳನ್ನು ವಿರಾಟ್ ಕೊಹ್ಲಿ ಮುರಿದಿದ್ದರು. ಇದೀಗ ವಿರಾಟ್ ಕೊಹ್ಲಿಯ ಹೆಸರಿನಲ್ಲಿರುವ ದಾಖಲೆಗಳನ್ನು ಶುಭ್​ಮನ್ ಗಿಲ್ (Shubman Gill)  ಮುರಿಯುತ್ತಿದ್ದಾರೆ. ಅದು ಕೂಡ ದೂರದ ಇಂಗ್ಲೆಂಡ್​ನಲ್ಲಿ ಎಂಬುದು ವಿಶೇಷ. ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಗಿಲ್ ಹೊಸ ದಾಖಲೆ ಬರೆದಿದ್ದಾರೆ.

2 / 5
ಈ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್​ಮನ್ ಗಿಲ್ 44 ಎಸೆತಗಳನ್ನು ಎದುರಿಸಿ 16 ರನ್​ ಕಲೆಹಾಕಿದ್ದರು. ಈ ಹದಿನಾರು ರನ್​ಗಳೊಂದಿಗೆ ಶುಭ್​ಮನ್ ಆಂಗ್ಲರನಾಡಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ನಾಯಕ​ ಎನಿಸಿಕೊಂಡಿದ್ದಾರೆ.

3 / 5
ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. 2018 ರಲ್ಲಿ ನಡೆದ ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದ ಕಿಂಗ್ ಕೊಹ್ಲಿ 5 ಪಂದ್ಯಗಳ ಮೂಲಕ 593 ರನ್​ ಕಲೆಹಾಕಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಶುಭ್​ಮನ್ ಗಿಲ್ ಕೇವಲ 3 ಪಂದ್ಯಗಳ ಮೂಲಕ ಅಳಿಸಿ ಹಾಕಿದ್ದಾರೆ.

4 / 5
ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿರುವ ಶುಭ್​ಮನ್ ಗಿಲ್ ಈವರೆಗೆ 3 ಪಂದ್ಯಗಳಲ್ಲಿ 5 ಇನಿಂಗ್ಸ್​ ಆಡಿದ್ದಾರೆ. ಈ ವೇಳೆ 2 ಶತಕ ಹಾಗೂ ಒಂದು ದ್ವಿಶತಕದೊಂದಿಗೆ ಒಟ್ಟು 601 ರನ್​ಗಳಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್​ನಲ್ಲಿ ಟೆಸ್ಟ್ ಸರಣಿವೊಂದರಲ್ಲಿ ಅತ್ಯಧಿಕ ರನ್​ಗಳಿಸಿದ ಭಾರತೀಯ ಕ್ಯಾಪ್ಟನ್ ಎಂಬ ಹೆಗ್ಗಳಿಕೆಯನ್ನು ಶುಭ್​ಮನ್ ಗಿಲ್ ತಮ್ಮದಾಗಿಸಿಕೊಂಡಿದ್ದಾರೆ.

5 / 5
ಇದಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್​ನಲ್ಲಿ ನಾಯಕನಾಗಿ ಕಣಕ್ಕಿಳಿದ ಮೊದಲೆರಡು ಪಂದ್ಯಗಳಲ್ಲಿ ಅತ್ಯಧಿಕ ರನ್​ಗಳಿಸಿದ ವಿರಾಟ್ ಕೊಹ್ಲಿಯ ದಾಖಲೆಯನ್ನು ಶುಭ್​ಮನ್ ಗಿಲ್ ಮುರಿದಿದ್ದರು. ಕಿಂಗ್ ಕೊಹ್ಲಿ ತನ್ನ ನಾಯಕತ್ವದ ಮೊದಲೆರಡು ಪಂದ್ಯಗಳಲ್ಲಿ 449 ರನ್​ಗಳಿಸಿದರೆ,  ಶುಭ್​ಮನ್ ಗಿಲ್ ನಾಯಕನಾಗಿ ಆಡಿದ ಮೊದಲೆರಡು ಪಂದ್ಯಗಳಿಂದ ಬರೋಬ್ಬರಿ 585 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ ಇಂಗ್ಲೆಂಡ್ ಪಿಚ್​ನಲ್ಲಿ ಟೆಸ್ಟ್ ಸರಣಿವೊಂದರಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಭಾರತೀಯ ನಾಯಕ ಎಂಬ ದಾಖಲೆಯನ್ನು ಗಿಲ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.