- Kannada News Photo gallery Cricket photos Kannada News | Shubman Gill in post match presentation after GT vs MI Qualifier 2 He said this is the my best innings in IPL
Shubman Gill: ಶತಕದ ಸರದಾರ ಶುಭ್ಮನ್ ಗಿಲ್ ಪಂದ್ಯ ಮುಗಿದ ಬಳಿಕ ಆಡಿದ ಮಾತುಗಳೇನು ಗೊತ್ತೇ?
GT vs MI, IPL 2023: ಶುಭ್ಮನ್ ಗಿಲ್ ಕೇವಲ 60 ಎಸೆತಗಳಲ್ಲಿ 7 ಫೋರ್, 10 ಸಿಕ್ಸರ್ನಿಂದ ದಾಖಲೆಯ 129 ರನ್ ಚಚ್ಚಿದರೆ, ಬೌಲಿಂಗ್ನಲ್ಲಿ ಮೋಹಿತ್ ಶರ್ಮಾ 2.2 ಓವರ್ನಲ್ಲಿ 10 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರು.
Updated on:May 27, 2023 | 8:21 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಫೈನಲ್ಗೆ ಪ್ರವೇಶ ಪಡೆದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಜಿಟಿ 62 ರನ್ಗಳಿಂದ ಜಯ ಸಾಧಿಸಿತು.

ಸತತ ಎರಡನೇ ಬಾರಿ ಐಪಿಎಲ್ ಫೈನಲ್ ತಲುಪಿರುವ ಗುಜರಾತ್ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಜಿಟಿ ಗೆಲ್ಲಲು ಪ್ರಮುಖ ಕಾರಣ ಶುಭ್ಮನ್ ಗಿಲ್ ಶತಕ ಮತ್ತು ಬೌಲಿಂಗ್ ಪ್ರದರ್ಶನ.

ಗಿಲ್ ಕೇವಲ 60 ಎಸೆತಗಳಲ್ಲಿ 7 ಫೋರ್, 10 ಸಿಕ್ಸರ್ನಿಂದ ದಾಖಲೆಯ 129 ರನ್ ಚಚ್ಚಿದರೆ, ಬೌಲಿಂಗ್ನಲ್ಲಿ ಮೋಹಿತ್ ಶರ್ಮಾ 2.2 ಓವರ್ನಲ್ಲಿ 10 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರು.

ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಶತಕವೀರ ಶುಭ್ಮನ್ ಗಿಲ್, ಐಪಿಎಲ್ನಲ್ಲಿ ಇದು ನನ್ನ ಶ್ರೇಷ್ಠ ಇನ್ನಿಂಗ್ಸ್ ಎಂದು ಹೇಳಿದ್ದಾರೆ.

ನಾನು ಬಾಲ್ ಟು ಬಾಲ್, ಓವರ್ ಟು ಓವರ್ ಆಡುತ್ತಾ ಸಾಗಿದೆ. ಆ ಒಂದು ಓವರ್ನಲ್ಲಿ ಮೂರು ಸಿಕ್ಸ್ ಸಿಡಿಸಿದ್ದು ನನಗೆ ಒಳ್ಳೆಯ ಟಚ್ ಸಿಕ್ಕಿತು. ಆಗ ನನಗೆ ಅನಿಸಿತು ಇಂದು ನನ್ನ ದಿನವೆಂದು. ಅಲ್ಲದೆ ಈ ಪಿಚ್ನಲ್ಲಿ ಚೆಂಡು ಬ್ಯಾಟ್ಗೆ ಚೆನ್ನಾಗಿ ಬರುತ್ತಿದ್ದರಿಂದ ಸುಲಭವಾಯಿತು ಎಂಬುದು ಶುಭ್ಮನ್ ಗಿಲ್ ಮಾತು.

ಈ ಪಂದ್ಯದಲ್ಲಿ ಆಡಬೇಕಿರುವುದು ಮುಖ್ಯವಾಗಿತ್ತು. ನಾನು ಉತ್ತಮವಾದ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿ ಐಪಿಎಲ್ನಲ್ಲಿ ಕಣಕ್ಕಿಳಿದೆ. ಕೊನೆಯ ಸೀಸನ್ ಕೂಡ ನನಗೆ ಅತ್ಯುತ್ತಮವಾಗಿತ್ತು. ನಾನು ಬ್ಯಾಟ್ ಮಾಡಲು ಶುರು ಮಾಡಿದಾಗ ಇಲ್ಲಿ ಒಳ್ಳೆಯ ಸ್ಕೋರ್ ಮಾಡಬಹುದು ಎಂಬ ನಂಬಿಕೆ ಬಂತು ಎಂದು ಗಿಲ್ ಹೇಳಿದ್ದಾರೆ.

ಕಳೆದ ವೆಸ್ಟ್ ಇಂಡೀಸ್ ಸರಣಿಯಿಂದ ನನ್ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇಂಜುರಿ ಆಗಿದ್ದೆ, ಆದರೂ ನಾನು ನನ್ನ ಕೆಲಸವನ್ನು ಬಿಡಲಿಲ್ಲ. ಟಿ20 ವಿಶ್ವಕಪ್ ಬಳಿಕ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ನಾನು ನನ್ನಲ್ಲಿ ಕೆಲ ಬದಲಾವಣೆ ಮಾಡಿದೆ. ಕೆಲವು ಹೊಡೆತಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ - ಶುಭ್ಮನ್ ಗಿಲ್.

ಒಂದು ಬಾರಿ ಮೈದಾನಕ್ಕೆ ಇಳಿದರೆ ಯಾವುದೇ ನಿರೀಕ್ಷೆ ಇರದೆ ಸಂಪೂರ್ಣವಾಗಿ ತಂಡಕ್ಕೆ ಕೊಡುಗೆ ನೀಡುವ ಬಗ್ಗೆ ಯೋಚಿಸುತ್ತೇನೆ. ನನಗನಿಸುವ ಪ್ರಕಾರ ಐಪಿಎಲ್ನಲ್ಲಿ ಇದು ನನ್ನ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ ಎಂದು ಶುಭ್ಮನ್ ಗಿಲ್ ಹೇಳಿದ್ದಾರೆ.
Published On - 7:33 am, Sat, 27 May 23









