ಶುಭ್​ಮನ್​ ಗಿಲ್​ಗೆ 5000 ರೂ. ಬಹುಮಾನ ನೀಡಿದ ಅಭಿಷೇಕ್ ಶರ್ಮಾ ತಂದೆ

Updated on: Sep 07, 2026 | 4:36 PM

ಶುಭ್​ಮನ್ ಗಿಲ್ ಶೇರ್-ಎ-ಪಂಜಾಬ್ ಟಿ20 ಲೀಗ್ ಪದಾರ್ಪಣೆಯಲ್ಲಿ ಫಜಿಲ್ಕಾ ಫಾಲ್ಕನ್ಸ್ ಪರ ಮಿಂಚಿದರು. ಲುಧಿಯಾನ ಲಯನ್ಸ್ ವಿರುದ್ಧ ಕೇವಲ 21 ಎಸೆತಗಳಲ್ಲಿ 40 ರನ್ ಸಿಡಿಸಿ ತಂಡದ 1 ರನ್ ಗೆಲುವಿಗೆ ನೆರವಾದರು. ಏಳು ಬೌಂಡರಿ, ಒಂದು ಸಿಕ್ಸರ್ ಸಹಿತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತರರಾಷ್ಟ್ರೀಯ ಪಂದ್ಯಗಳ ನಂತರ ರಾಜ್ಯ ಕ್ರಿಕೆಟ್ ಮಂಡಳಿಗೆ ಗಿಲ್ ನೀಡಿದ ಈ ಕೊಡುಗೆ ಶ್ಲಾಘನೀಯ.

1 / 5
ಶೇರ್-ಎ-ಪಂಜಾಬ್ ಟಿ20 ಲೀಗ್‌ನಲ್ಲಿ ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭ್​ಮನ್ ಗಿಲ್ ತಮ್ಮ ಮೊದಲ ಪಂದ್ಯವನ್ನಾಡಿದರು. ಲೀಗ್‌ನ 15 ನೇ ಪಂದ್ಯದಲ್ಲಿ ಫಜಿಲ್ಕಾ ಫಾಲ್ಕನ್ಸ್ ಪರ ಕಣಕ್ಕಿಳಿದಿದ್ದ ಗಿಲ್ ಲುಧಿಯಾನ ಲಯನ್ಸ್ ವಿರುದ್ಧ ಕೇವಲ 21 ಎಸೆತಗಳಲ್ಲಿ 40 ರನ್ ಗಳಿಸಿ ಅಬ್ಬರದ ಇನ್ನಿಂಗ್ಸ್ ಆಡಿದರು (PC-sher-e-punjab X).

ಶೇರ್-ಎ-ಪಂಜಾಬ್ ಟಿ20 ಲೀಗ್‌ನಲ್ಲಿ ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭ್​ಮನ್ ಗಿಲ್ ತಮ್ಮ ಮೊದಲ ಪಂದ್ಯವನ್ನಾಡಿದರು. ಲೀಗ್‌ನ 15 ನೇ ಪಂದ್ಯದಲ್ಲಿ ಫಜಿಲ್ಕಾ ಫಾಲ್ಕನ್ಸ್ ಪರ ಕಣಕ್ಕಿಳಿದಿದ್ದ ಗಿಲ್ ಲುಧಿಯಾನ ಲಯನ್ಸ್ ವಿರುದ್ಧ ಕೇವಲ 21 ಎಸೆತಗಳಲ್ಲಿ 40 ರನ್ ಗಳಿಸಿ ಅಬ್ಬರದ ಇನ್ನಿಂಗ್ಸ್ ಆಡಿದರು (PC-sher-e-punjab X).

2 / 5

190.48 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಶುಭ್​ಮನ್ ಗಿಲ್ ತಮ್ಮ ಇನ್ನಿಂಗ್ಸ್​ನಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಬಾರಿಸಿದರು. ಅಂತಿಮವಾಗಿ ಗಿಲ್ 10 ನೇ ಓವರ್‌ನಲ್ಲಿ ಔಟಾದರಯ. ಗಿಲ್ ಅವರ 40 ರನ್‌ಗಳ ಭರ್ಜರಿ ಬ್ಯಾಟಿಂಗ್‌ನ ಆಧಾರದ ಮೇಲೆ, ಮೊದಲು ಬ್ಯಾಟಿಂಗ್‌ ಮಾಡಿದ ಫಜಿಲ್ಕಾ ಫಾಲ್ಕನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 170 ರನ್ ಕಲೆಹಾಕಿತು(PC-sher-e-punjab X).

3 / 5

171 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಕ್ನೋ ಲಯನ್ಸ್ ತಂಡ ಕೂಡ ಗೆಲುವಿಗಾಗಿ ಸಾಕಷ್ಟು ಹೋರಾಟ ನೀಡಿತು. ಆದಾಗ್ಯೂ ತಂಡ ಒಂದೇ ಒಂದು ರನ್​ಗಳಿಂದ ಸೋಲೊಪ್ಪಿಕೊಂಡಿತು. ಅಂತಿಮವಾಗಿ ಲಕ್ನೋ ಲಯನ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 169 ರನ್‌ಗಳಿಸಲಷ್ಟೇ ಶಕ್ತವಾಗಿ ಪಂದ್ಯವನ್ನು 1 ರನ್‌ನಿಂದ ಸೋತಿತು(PC-sher-e-punjab X).

4 / 5

ಇನ್ನು ಈ ಪಂದ್ಯದಲ್ಲಿ ಶುಭ್​ಮನ್ ಗಿಲ್ ಅತ್ಯಧಿಕ ಬೌಂಡರಿಗಳನ್ನು ಅಂದರೆ 7 ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ ಪಂದ್ಯದಲ್ಲಿ ಅತ್ಯಧಿಕ ಬೌಂಡರಿಗಳನ್ನು ಬಾರಿಸಿದ ಗಿಲ್​ಗೆ 5000 ರೂಗಳ ಬಹುಮಾನ ಸಿಕ್ಕಿತು. ಕೋಟ್ಯಾಂತರ ರೂಗಳ ಒಡೆಯ ಶುಭ್​ಮನ್​ ಗಿಲ್​ಗೆ ಈ 5000 ರೂಗಳ ಬಹುಮಾನವನ್ನು ನೀಡಿದ್ದು ಬೇರ್ಯಾರು ಅಲ್ಲ, ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ತಂದೆ(PC-sher-e-punjab X).

5 / 5

ಗಿಲ್ ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆ ಸರಣಿಯಲ್ಲಿ ಭಾರತ 1-0 ಅಂತರದಿಂದ ಜಯಗಳಿಸಿತು. ಅಂತರರಾಷ್ಟ್ರೀಯ ಪಂದ್ಯಗಳ ನಂತರ, ಗಿಲ್ ತಮ್ಮ ತವರು ರಾಜ್ಯದ ಲೀಗ್‌ನಲ್ಲಿ ಆಡುವ ಮೂಲಕ ರಾಜ್ಯ ಕ್ರಿಕೆಟ್ ಮಂಡಳಿಯ ಬೊಕ್ಕಸ ತುಂಬಿಸಲು ನೆರವಾಗುತ್ತಿದ್ದಾರೆ(PC-sher-e-punjab X).

Loading...
Unable to load recommendations.
Follow Us