ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸೌತ್ ಆಫ್ರಿಕಾ ತಂಡಕ್ಕೆ ಬಿಗ್ ಶಾಕ್

|

Updated on: Jan 16, 2025 | 7:54 AM

Champions Trophy 2025: ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಫೆಬ್ರವರಿ 19 ರಿಂದ ಶುರುವಾಗಲಿದೆ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸಲಿರುವ ಈ ಟೂರ್ನಿಗೆ ಸೌತ್ ಆಫ್ರಿಕಾ ವೇಗಿ ಅನ್ರಿಕ್ ನೋಕಿಯ ಅಲಭ್ಯರಾಗಲಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ 15 ಸದಸ್ಯರ ಬಳಗಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕಿದೆ.

1 / 5
Champions Trophy 2025: ಚಾಂಪಿಯನ್ಸ್ ಟ್ರೋಫಿ 2025ರ ಆರಂಭಕ್ಕೂ ಮುನ್ನವೇ ಸೌತ್ ಆಫ್ರಿಕಾ ತಂಡಕ್ಕೆ ಆಘಾತ ಎದುರಾಗಿದೆ. ತಂಡ ಪ್ರಮುಖ ವೇಗಿ ಅನ್ರಿಕ್ ನೋಕಿಯ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

2 / 5
ಇದಕ್ಕೆ ಮುಖ್ಯ ಕಾರಣ ಬೆನ್ನು ನೋವಿನ ಸಮಸ್ಯೆ. ಕಳೆದ ಕೆಲ ತಿಂಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರು ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಅಲ್ಲದೆ ಸೌತ್ ಆಫ್ರಿಕಾ ಹೆಸರಿಸಿದ ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಅನ್ರಿಕ್ ನೋಕಿಯ ಸ್ಥಾನ ಪಡೆದಿದ್ದರು.

3 / 5
ಆದರೀಗ ಮುಂದಿನ ತಿಂಗಳಿಂದ ಶುರುವಾಗಲಿರುವ ಟೂರ್ನಿ ವೇಳೆ ಅವರು ಸಂಪೂರ್ಣ ಫಿಟ್ ನೆಸ್ ಸಾಧಿಸುವ ಸಾಧ್ಯತೆಯಿಲ್ಲ ಎಂಬುದು ಕಂಡು ಬಂದಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲೇ ಹೊರಗುಳಿಯಲು ನಿರ್ಧರಿಸಿದ್ದಾರೆ. ಇತ್ತ ನೋಕಿಯ ಅಲಭ್ಯತೆಯು ಸೌತ್ ಆಫ್ರಿಕಾ ಪಾಲಿಗೆ ಹಿನ್ನಡೆಯನ್ನು ಉಂಟು ಮಾಡಲಿದೆ.

4 / 5
ಏಕೆಂದರೆ ಕಳೆದ ಕೆಲ ವರ್ಷಗಳಿಂದ ಕಗಿಸೊ ರಬಾಡ ಜೊತೆಗೂಡಿ ಅನ್ರಿಕ್ ನೋಕಿಯ ಸೌತ್ ಆಫ್ರಿಕಾ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಪ್ರಮುಖ ಟೂರ್ನಿಗೂ ಮುನ್ನ ಅವರು ಅಲಭ್ಯರಾಗಿರುವುದು ಸೌತ್ ಆಫ್ರಿಕಾ ಬೌಲಿಂಗ್ ವಿಭಾಗದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಇದೀಗ ನೋಕಿಯ ಸ್ಥಾನಕ್ಕೆ ಮತ್ತೋರ್ವ ವೇಗಿಯನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಮುಂದಿದೆ.

5 / 5
ಚಾಂಪಿಯನ್ಸ್​ ಟ್ರೋಫಿಗೆ ಸೌತ್ ಆಫ್ರಿಕಾ ತಂಡ: ಸೌತ್ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಲುಂಗಿ ಎನ್​ಗಿಡಿ, ಕಗಿಸೊ ರಬಾಡ, ರಿಯಾನ್ ರಿಕೆಲ್ಟನ್, ತಬ್ರೇಝ್ ಶಂಸಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟ್ರಿಸ್ಟನ್ ಸ್ಟಬ್ಸ್.