ಕ್ರಿಕೆಟ್ ಕಾಶಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ಸ್ಟೀವ್ ಸ್ಮಿತ್

Updated on: Jun 12, 2025 | 8:08 AM

Steve Smith Records: ಇಂಗ್ಲೆಂಡ್​ನ ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಸ್ಟೀವ್ ಸ್ಮಿತ್ ಅವರ ಅರ್ಧಶತಕದ ನೆರವಿನೊಂದಿಗೆ ಮೊದಲ ಇನಿಂಗ್ಸ್​ನಲ್ಲಿ 212 ರನ್ ಕಲೆಹಾಕಿದೆ.

1 / 6
ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final) ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯಾ ದಾಂಡಿಗ ಸ್ಟೀವ್ ಸ್ಮಿತ್ (Steve Smith) ಹೆಸರಿಗೆ ಹೊಸ ದಾಖಲೆಯೊಂದು ಸೇರ್ಪಡೆಯಾಗಿದೆ. ಅದು ಕೂಡ ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿದೇಶಿ ಬ್ಯಾಟರ್ ಎನಿಸಿಕೊಳ್ಳುವ ಮೂಲಕ ಎಂಬುದು ವಿಶೇಷ.

2 / 6
ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಈ ವೇಳೆ 112 ಎಸೆತಗಳನ್ನು ಎದುರಿಸಿದ ಸ್ಮಿತ್ 10 ಫೋರ್​ಗಳೊಂದಿಗೆ 66 ರನ್​ ಬಾರಿಸಿದ್ದಾರೆ.

3 / 6
ಈ 66 ರನ್​ಗಳೊಂದಿಗೆ ಲಾರ್ಡ್ಸ್​ ಮೈದಾನದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿದೇಶಿ ಬ್ಯಾಟರ್ ಎಂಬ ದಾಖಲೆ ಸ್ಟೀವ್ ಸ್ಮಿತ್ ಪಾಲಾಗಿದೆ. ಇದಕ್ಕೂ ಈ ದಾಖಲೆ ಆಸ್ಟ್ರೇಲಿಯಾದ ವಾರೆನ್ ಬಾರ್ಡ್​​ಸ್ಲೇ ಅವರ ಹೆಸರಿನಲ್ಲಿತ್ತು. ಲಾರ್ಡ್ಸ್​ ಮೈದಾನದಲ್ಲಿ ಆಡಿದ 7 ಇನಿಂಗ್ಸ್​ಗಳಿಂದ ಬಾರ್ಡ್​ಸ್ಲೇ ಒಟ್ಟು 575 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು.

4 / 6
ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಸ್ವೀವ್ ಸ್ಮಿತ್ ಯಶಸ್ವಿಯಾಗಿದ್ದಾರೆ. ಲಾರ್ಡ್ಸ್​ ಮೈದಾನದಲ್ಲಿ ಈವರೆಗೆ 10 ಟೆಸ್ಟ್ ಇನಿಂಗ್ಸ್ ಆಡಿರುವ ಸ್ಮಿತ್ ಒಟ್ಟು 591 ರನ್​ ಕಲೆಹಾಕಿದ್ದಾರೆ. ಈ ಮೂಲಕ ಕ್ರಿಕೆಟ್ ಕಾಶಿಯಲ್ಲಿ ಅತೀ ಹೆಚ್ಚು ಟೆಸ್ಟ್ ರನ್​ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

5 / 6
ಅಲ್ಲದೆ ಈ ಪಂದ್ಯದಲ್ಲಿ ಬಾರಿಸಿದ ಅರ್ಧಶತಕದೊಂದಿಗೆ ಇಂಗ್ಲೆಂಡ್​ನಲ್ಲಿ ಟೆಸ್ಟ್​ನಲ್ಲಿ ಅತ್ಯಧಿಕ 50+ ಸ್ಕೋರ್​ಗಳಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ರೆಕಾರ್ಡ್​ ವೆಸ್ಟ್ ಇಂಡೀಸ್ ವಿವಿಯನ್ ರಿಚರ್ಡ್ಸ್ ಹೆಸರಿನಲ್ಲಿತ್ತು. ವಿಂಡೀಸ್ ಲೆಜೆಂಡ್ 34 ಇನಿಂಗ್ಸ್​ಗಳಲ್ಲಿ 17 ಬಾರಿ 50 ಕ್ಕಿಂತ ಅಧಿಕ ರನ್ ಕಲೆಹಾಕಿದ್ದರು.

6 / 6
ಇದೀಗ 66 ರನ್​ ಬಾರಿಸುವುದರೊಂದಿಗೆ ಸ್ಟೀವ್ ಸ್ಮಿತ್ ಇಂಗ್ಲೆಂಡ್​ನಲ್ಲಿ ಅತ್ಯಧಿಕ 50+ ಸ್ಕೋರ್​ಗಳಿಸಿದ ವಿದೇಶಿ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್​ನಲ್ಲಿ ಈವರೆಗೆ 43 ಟೆಸ್ಟ್​ ಇನಿಂಗ್ಸ್ ಆಡಿರುವ ಸ್ಮಿತ್ ಒಟ್ಟು 18 ಬಾರಿ 50 ಕ್ಕಿಂತ ಅಧಿಕ ಸ್ಕೋರ್​ಗಳಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್​ನಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್​ಗಳಿಸಿದ ವಿದೇಶಿ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.