KL Rahul: ಕೆಎಲ್ ರಾಹುಲ್ ತಂಡಕ್ಕಾಗಿ ತಮ್ಮ ವಿಕೆಟ್ ತ್ಯಾಗ ಮಾಡಿದ್ದಾರೆ ಎಂದ ಸುನೀಲ್ ಗವಾಸ್ಕರ್

Edited By:

Updated on: Sep 27, 2022 | 9:48 AM

Sunil Gavaskar: ಕೆಎಲ್ ರಾಹುಲ್ ಇಂಜುರಿಯಿಂದ ಗುಣಮುಖರಾಗಿ ಟೀಮ್ ಇಂಡಿಯಾ ಸೇರಿಕೊಂಡ ಬಳಿಕ ಫಾರ್ಮ್ ​ಗೆ ಮರಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಕೆಲ ಪಂದ್ಯಗಳಲ್ಲಿ ಆಡಿದರೆ ಇನ್ನೂ ಕೆಲ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಟಿ20 ವಿಶ್ವಕಪ್​ ಗೂ ಮುನ್ನ ರಾಹುಲ್ ಕಡೆಯಿಂದ ಒಂದೊಳ್ಳೆಯ ಇನ್ನಿಂಗ್ಸ್ ಬೇಕಿದೆ.

1 / 8
ಕೆಎಲ್ ರಾಹುಲ್ ಇಂಜುರಿಯಿಂದ ಗುಣಮುಖರಾಗಿ ಟೀಮ್ ಇಂಡಿಯಾ ಸೇರಿಕೊಂಡ ಬಳಿಕ ಫಾರ್ಮ್ ​ಗೆ ಮರಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಕೆಲ ಪಂದ್ಯಗಳಲ್ಲಿ ಆಡಿದರೆ ಇನ್ನೂ ಕೆಲ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಟಿ20 ವಿಶ್ವಕಪ್​ ಗೂ ಮುನ್ನ ರಾಹುಲ್ ಕಡೆಯಿಂದ ಒಂದೊಳ್ಳೆಯ ಇನ್ನಿಂಗ್ಸ್ ಬೇಕಿದೆ.

ಕೆಎಲ್ ರಾಹುಲ್ ಇಂಜುರಿಯಿಂದ ಗುಣಮುಖರಾಗಿ ಟೀಮ್ ಇಂಡಿಯಾ ಸೇರಿಕೊಂಡ ಬಳಿಕ ಫಾರ್ಮ್ ​ಗೆ ಮರಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಕೆಲ ಪಂದ್ಯಗಳಲ್ಲಿ ಆಡಿದರೆ ಇನ್ನೂ ಕೆಲ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಟಿ20 ವಿಶ್ವಕಪ್​ ಗೂ ಮುನ್ನ ರಾಹುಲ್ ಕಡೆಯಿಂದ ಒಂದೊಳ್ಳೆಯ ಇನ್ನಿಂಗ್ಸ್ ಬೇಕಿದೆ.

2 / 8

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಇದನ್ನು ನಿರೀಕ್ಷಿಸಲಾಗಿದೆ. ಆದರೆ, ಟೀಮ್ ಇಂಡಿಯಾ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರು ರಾಹುಲ್ ಪರವಾಗಿ ಬ್ಯಾಟ್ ಬೀಸಿದ್ದಾರೆ.

3 / 8

ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ನಿರ್ಣಾಯಕ ಕದನದಲ್ಲಿ 1 ರನ್​ ಗೆ ಔಟಾಗಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಸುನೀಲ್ ಗವಾಸ್ಕರ್ ಅವರು ರಾಹುಲ್ ವಿಚಾರವಾಗಿ ಯಾವುದೇ ಭಯ ಪಡಬೇಕಾದ ಅನಿವಾರ್ಯತೆ ಇಲ್ಲ ಎಂದು ಹೇಳಿದ್ದಾರೆ.

4 / 8

ತಂಡವು ಕೆಎಲ್ ರಾಹುಲ್ ರಿಂದ ಏನನ್ನು ನಿರೀಕ್ಷೆ ಮಾಡುತ್ತಿದೆಯೊ ಅದನ್ನೇ ಅವರು ಮಾಡುತ್ತಿದ್ದಾರೆ. ಇದು ಎರಡೂ ಬಾರಿ ಸಾಭೀತಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು ಆದರೆ ಎರಡನೇ ಪಂದ್ಯದಲ್ಲಿ, ಅವರು ಮೊದಲ ಎಸೆತದಲ್ಲಿ ಔಟಾದರು. ಏಕೆಂದರೆ ಅದು 8-ಓವರ್‌ಗಳ ಆಟ, ಅವರು ತಂಡಕ್ಕಾಗಿ ತಮ್ಮ ವಿಕೆಟ್ ತ್ಯಾಗ ಮಾಡಿದರು ಎಂದು ಹೇಳಿದ್ದಾರೆ.

5 / 8

ಅಂತೆಯೇ, 3ನೇ T20I ಪಂದ್ಯದಲ್ಲಿ ಓವರ್‌ಗೆ 9 ರನ್‌ಗಳಿಗಿಂತ ಹೆಚ್ಚು ಹೊಡೆಬೇಕಿತ್ತು. ಇದು ಸುಲಭವಲ್ಲ, ನೀವು ಉತ್ತಮ ಆರಂಭವನ್ನು ಪಡೆಯಲೇ ಬೇಕಾದ ಒತ್ತಡದಲ್ಲಿದ್ದಿರಿ. ಹೀಗಾಗಿ ರಾಹುಲ್ ದೊಡ್ಡ ಶಾಟ್ ಹೊಡೆಯಲು ಹೋಗಿ ತಮ್ಮ ವಿಕೆಟ್ ತ್ಯಾಗ ಮಾಡಿದರು ಎಂಬುದು ಗವಾಸ್ಕರ್ ಅಭಿಪ್ರಾಯ.

6 / 8

ಕೊಹ್ಲಿಯಂತೆ, ರಾಹುಲ್ ಸರಿಯಾದ ಕ್ರಿಕೆಟ್ ಶಾಟ್‌ ಗಳನ್ನು ಆಡಲು ಶುರುಮಾಡಿದರೆ ಅವರನ್ನು ತಡೆಯುವುದು ಅಸಾಧ್ಯ. ಆದರೆ ಈ ಇಬ್ಬರು ಆಟಗಾರರು ಬ್ಯಾಟ್ ಸ್ವಿಂಗ್ ಮಾಡಲು ಪ್ರಯತ್ನಿಸಿದರೆ ಅದು ಅವರ ಸಾಮರ್ಥ್ಯವಲ್ಲ. ಕ್ರಾಸ್-ಬ್ಯಾಟರ್ ಶಾಟ್ ಅನ್ನು ಆಡಲು ಪ್ರಯತ್ನಿಸುವಾಗ ಅವರು ತೊಂದರೆಗೆ ಸಿಲುಕುತ್ತಾರೆ. ಅವರು ಅದನ್ನು ತಪ್ಪಿಸಲು ಪ್ರಯತ್ನಿಸಿದರೆ, ಸತತವಾಗಿ ರನ್ ಗಳಿಸುತ್ತಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

7 / 8

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿರುವ ಭಾರತ ತಂಡ ಆತ್ಮವಿಶ್ವಾಸದಲ್ಲಿದೆ. ಇದೇ ಛಲದಲ್ಲಿ ಮುಂದಿನ ಸರಣಿಗೆ ಸಜ್ಜಾಗುತ್ತಿದೆ. ಅಕ್ಟೋಬರ್ 28 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಕೂಡ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ.

8 / 8

ಸೋಮವಾರ ಸಂಜೆ ತಿರುವನಂತಪುರಂಗೆ ಬಂದ ಭಾರತ ಇಂದು ಅಭ್ಯಾಸಕ್ಕಾಗಿ ಗ್ರೀನ್‌ಫೀಲ್ಡ್ ಮೈದಾನವನ್ನು ತೆರಳಲಿದೆ. ಸಂಜೆ 5ರಿಂದ ರಾತ್ರಿ 8ರವರೆಗೆ ಭಾರತೀಯರಯ ಅಭ್ಯಾಸ ನಡೆಸಿದರೆ ದಕ್ಷಿಣ ಆಫ್ರಿಕಾ ತಂಡವು ಮಧ್ಯಾಹ್ನ 1.00 ರಿಂದ 4.00 ರವರೆಗೆ ಮೈದಾನದಲ್ಲಿ ಬೆವರಿಳಿಸಲಿದೆ.

Published On - 9:48 am, Tue, 27 September 22

Loading...
Unable to load recommendations.
Follow Us