Suryakumar Yadav: ಡಕ್ ಗೋಲ್ಡನ್ ಡಕ್…ಅನಗತ್ಯ ದಾಖಲೆ ಬರೆದ ಸೂರ್ಯ..!

Edited By:

Updated on: Mar 22, 2023 | 11:08 PM

Suryakumar Yadav: ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ಔಟಾಗಿದ್ದರು.

1 / 6
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಸೂರ್ಯಕುಮಾರ್ ಯಾದವ್ ಗೋಲ್ಡರ್​ ಡಕ್​ಗೆ ಔಟಾಗಿದ್ದಾರೆ. ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯ ಅಷ್ಟನ್ ಅಗರ್​ ಅವರ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು.

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಸೂರ್ಯಕುಮಾರ್ ಯಾದವ್ ಗೋಲ್ಡರ್​ ಡಕ್​ಗೆ ಔಟಾಗಿದ್ದಾರೆ. ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯ ಅಷ್ಟನ್ ಅಗರ್​ ಅವರ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು.

2 / 6

ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಸತತ ಮೂರು ಬಾರಿ ಗೋಲ್ಡನ್ ಡಕ್​ಗೆ ಔಟಾದ ಮೊದಲ ಬ್ಯಾಟರ್ ಎಂಬ ಬೇಡದ ದಾಖಲೆಯೊಂದು ಸೂರ್ಯಕುಮಾರ್ ಯಾದವ್ ಪಾಲಾಗಿದೆ. ಇದಕ್ಕೂ ಮುನ್ನ ಅವರು ಆಸ್ಟ್ರೇಲಿಯಾ ವಿರುದ್ಧ ಮೊದಲೆರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು.

3 / 6

ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ಔಟಾಗಿದ್ದರು. ಇನ್ನು ವಿಶಾಖಪಟ್ಟಣದಲ್ಲೂ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು. ವಿಶೇಷ ಎಂದರೆ ಹೀಗೆ ಮೊದಲೆರಡು ಬಾರಿ ಸೂರ್ಯನನ್ನು ಶೂನ್ಯಕ್ಕೆ ಔಟ್ ಮಾಡಿದ್ದು ಮಿಚೆಲ್ ಸ್ಟಾರ್ಕ್​.

4 / 6

ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಸ್ಪಿನ್ನರ್ ಅಷ್ಟನ್ ಅಗರ್ ಎಸೆದ ಮೊದಲ ಎಸೆತದಲ್ಲೇ ಸೂರ್ಯಕುಮಾರ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್​ನ ಸತತವಾಗಿ ಮೂರು ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ಔಟಾದ ಮೊದಲ ಬ್ಯಾಟರ್ ಎಂಬ ಕಳಪೆ ದಾಖಲೆಯೊಂದು ಸೂರ್ಯಕುಮಾರ್ ಯಾದವ್ ಪಾಲಾಗಿದೆ.

5 / 6

ಒಂದೆಡೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರೂ ಸೂರ್ಯಕುಮಾರ್​ಗೆ ಸತತ ಅವಕಾಶ ನೀಡಲಾಗುತ್ತಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಏಕದಿನ ಕ್ರಿಕೆಟ್​ನಲ್ಲಿ 21 ಇನಿಂಗ್ಸ್ ಆಡಿದರೂ ಸೂರ್ಯಕುಮಾರ್ ಯಾದವ್ 25.47 ಸರಾಸರಿಯಲ್ಲಿ ಕೇವಲ 433 ರನ್​ ಕಲೆಹಾಕಿದ್ದಾರೆ.

6 / 6

ಮತ್ತೊಂದೆಡೆ 10 ಏಕದಿನ ಇನಿಂಗ್ಸ್​ನಲ್ಲಿ 66 ಸರಸಾರಿಯಲ್ಲಿ 330 ರನ್ ಪೇರಿಸಿರುವ ಸಂಜು ಸ್ಯಾಮ್ಸನ್ ಅವರನ್ನು ಟೀಮ್ ಇಂಡಿಯಾದ ಆಯ್ಕೆಗೆ ಪರಿಗಣಿಸುತ್ತಿಲ್ಲ ಎಂಬುದೇ ಅಚ್ಚರಿ.

Loading...
Unable to load recommendations.
Follow Us