T20 Blast 2023: ಬೆಲ್ ಭರ್ಜರಿ ಶತಕಕ್ಕೆ ನಲುಗಿದ ಎದುರಾಳಿ ತಂಡ

| Updated By: ಝಾಹಿರ್ ಯೂಸುಫ್

Updated on: Jun 25, 2023 | 3:59 PM

T20 Blast 2023: ಮೊದಲು ಬ್ಯಾಟ್ ಮಾಡಿದ ಕೆಂಟ್ ತಂಡಕ್ಕೆ ಆರಂಭಿಕರಾದ ಡಿ ಬೆಲ್-ಡ್ರಮಂಡ್ ಹಾಗೂ ಮುಯೆಯೆ ಸ್ಪೋಟಕ ಆರಂಭ ಒದಗಿಸಿದ್ದರು.

1 / 5
T20 Blast 2023: ಇಂಗ್ಲೆಂಡ್​ನ ಕ್ಯಾಂಟರ್ಬರಿಯಲ್ಲಿ ನಡೆದ ಟಿ20 ಬ್ಲಾಸ್ಟ್​ ಟೂರ್ನಿಯಲ್ಲಿ ಕೆಂಟ್ ತಂಡದ ಆರಂಭಿಕ ಆಟಗಾರ ಡಿ ಬೆಲ್-ಡ್ರಮಂಡ್ ಭರ್ಜರಿ ಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಿಡ್ಲ್​ಸೆಕ್ಸ್​ ತಂಡವು ಬೌಲಿಂಗ್ ಆಯ್ದುಕೊಂಡಿತು.

2 / 5
ಅದರಂತೆ ಮೊದಲು ಬ್ಯಾಟ್ ಮಾಡಿದ ಕೆಂಟ್ ತಂಡಕ್ಕೆ ಆರಂಭಿಕರಾದ ಡಿ ಬೆಲ್-ಡ್ರಮಂಡ್ ಹಾಗೂ ಮುಯೆಯೆ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಈ ಜೋಡಿ 11.1 ಓವರ್​ಗಳಲ್ಲಿ 127 ರನ್​ ಕಲೆಹಾಕಿದರು.

3 / 5
ಈ ಹಂತದಲ್ಲಿ 30 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 50 ರನ್​ ಬಾರಿಸಿದ ಮುಯೆಯೆ ಔಟಾದರು. ಇದಾಗ್ಯೂ ಮತ್ತೊಂದೆಡೆ ಆರ್ಭಟ ಮುಂದುವರೆಸಿದ ಡಿ ಬೆಲ್-ಡ್ರಮಂಡ್ 4 ಭರ್ಜರಿ ಸಿಕ್ಸ್ ಹಾಗೂ 12 ಫೋರ್ ಚಚ್ಚಿದರು. ಅಲ್ಲದೆ ಕೇವಲ 50 ಎಸೆತಗಳಲ್ಲಿ ಶತಕ ಪೂರೈಸಿದರು.

4 / 5
ಭರ್ಜರಿ ಸೆಂಚುರಿ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಡಿ ಬೆಲ್-ಡ್ರಮಂಡ್ 58 ಎಸೆತಗಳಲ್ಲಿ 111 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಡ್ರಮಂಡ್ ಅವರ ಈ ಶತಕದ ನೆರವಿನಿಂದ ಕೆಂಟ್ ತಂಡವು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 228 ರನ್​ ಕಲೆಹಾಕಿತು.

5 / 5
229 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಮಿಡ್ಲ್​ಸೆಕ್ಸ್ ಪರ ಯಾವುದೇ ಬ್ಯಾಟರ್​ಗೂ ಅರ್ಧಶತಕ ಬಾರಿಸಲು ಸಾಧ್ಯವಾಗಿಲ್ಲ. ಪರಿಣಾಮ 19 ಓವರ್​ಗಳಲ್ಲಿ 173 ರನ್​ಗಳಿಸಿ ಸರ್ವಪತನ ಕಂಡಿತು. ಇದರೊಂದಿಗೆ ಕೆಂಟ್ ತಂಡವು 55 ರನ್​ಗಳ ಭರ್ಜರಿಯ ಗೆಲುವನ್ನು ತನ್ನದಾಗಿಸಿಕೊಂಡಿತು.