T20 World Cup 2022: ಟಿ20 ವಿಶ್ವಕಪ್​ನಲ್ಲಿ ಹೊಸ ನಿಯಮ: ಈ ಬಾರಿ ಪಂದ್ಯ ಮತ್ತಷ್ಟು ರೋಚಕ

| Updated By: ಝಾಹಿರ್ ಯೂಸುಫ್

Updated on: Oct 12, 2022 | 10:09 PM

T20 World Cup 2022: ಈ ಬಾರಿ ಐದು ನಿಯಮಗಳು ಜಾರಿಗೆ ಬರಲಿದ್ದು, ಹೀಗಾಗಿ ಯಾವುದೇ ಸಂದರ್ಭದಲ್ಲೂ ಪಂದ್ಯದ ಚಿತ್ರಣವನ್ನು ಬದಲಾಗಬಹುದು. ಆ 5 ನಿಯಮಗಳು ಯಾವುವು ಎಂದು ನೋಡುವುದಾದರೆ...

1 / 8
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಕ್ಟೋಬರ್ 1 ರಂದು ಜಾರಿಗೊಳಿಸಿರುವ ಹೊಸ ನಿಯಮದಂತೆ ಈ ಬಾರಿಯ ಟಿ20 ವಿಶ್ವಕಪ್ ನಡೆಯಲಿದೆ. ಈ ನಿಯಮಗಳೇ ಟೂರ್ನಿಯ ಆಕರ್ಷಣೆ ಎಂದರೆ ತಪ್ಪಾಗಲಾರದು.

2 / 8
ಏಕೆಂದರೆ ಈ ಬಾರಿ ಐದು ನಿಯಮಗಳು ಜಾರಿಗೆ ಬರಲಿದ್ದು, ಹೀಗಾಗಿ ಯಾವುದೇ ಸಂದರ್ಭದಲ್ಲೂ ಪಂದ್ಯದ ಚಿತ್ರಣವನ್ನು ಬದಲಾಗಬಹುದು. ಆ 5 ನಿಯಮಗಳು ಯಾವುವು ಎಂದು ನೋಡುವುದಾದರೆ...

3 / 8
1- 90 ಸೆಕೆಂಡ್ ಅವಕಾಶ: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಬ್ಯಾಟ್ಸ್​ಮನ್​ಗಳಿಗೆ ರೆಡಿಯಾಗಲು ಕೇವಲ 90 ಸೆಕೆಂಡ್​ಗಳ ಸಮಯವಕಾಶ ಮಾತ್ರ ಇರಲಿದೆ. ಅಂದರೆ 90 ಸೆಕೆಂಡ್​ಗಳಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧರಾಗಿರಬೇಕಾಗುತ್ತದೆ. ಒಂದು ವೇಳೆ ಕ್ರೀಸ್​ಗೆ ಬರಲು ತಡವಾದರೆ ಅಥವಾ 90 ಸೆಕೆಂಡ್ಸ್ ಒಳಗೆ ಚೆಂಡನ್ನು ಎದುರಿಸಲು ಸಿದ್ಧರಾಗಿರದಿದ್ದರೆ ಅವರನ್ನು ಔಟ್ ಎಂದು ಪರಿಗಣಿಸಬಹುದು.

4 / 8
2- ಫೀಲ್ಡರ್​ ಚಲನಾ ನಿಮಯ: ಬೌಲರ್ ರನ್-ಅಪ್ ಸಮಯದಲ್ಲಿ ಯಾವುದೇ ಫೀಲ್ಡರ್​ ಉದ್ದೇಶಪೂರ್ವಕವಾಗಿ ತನ್ನ ಸ್ಥಳದಿಂದ ಚಲಿಸಿದರೆ, ಅಂಪೈರ್ ಆ ತಂಡಕ್ಕೆ ಐದು ರನ್​ ದಂಡವನ್ನು ವಿಧಿಸಲಿದ್ದಾರೆ. ಅಂದರೆ ಬೌಲರ್ ರನ್​ ಅಪ್ ವೇಳೆ ಫೀಲ್ಡರ್ ಉದ್ದೇಶಪೂರ್ವಕವಾಗಿ ಅತ್ತಿತ್ತ ಚಲಿಸಿದರೆ ಎದುರಾಳಿ ತಂಡಕ್ಕೆ 5 ರನ್​ಗಳು ಸಿಗಲಿದೆ.

5 / 8
3- ಬ್ಯಾಟ್ಸ್​ಮನ್​ ಪಿಚ್​ನಲ್ಲಿಯೇ ಇರಬೇಕು: ಐಸಿಸಿಯ ಹೊಸ ನಿಯಮದ ಪ್ರಕಾರ ಬ್ಯಾಟ್ಸ್‌ಮನ್‌ ಪಿಚ್‌ನ ಒಳಗೆ ಇರುವಾಗಲೇ ಶಾಟ್‌ ಬಾರಿಸಬೇಕು. ಅಂದರೆ ಬ್ಯಾಟಿಂಗ್ ಮಾಡುವಾಗ ದೇಹವು ಪಿಚ್‌ನಿಂದ ಹೊರಗೆ ಹೋದರೆ, ಅದನ್ನು ರನ್ ಎಂದು ಪರಿಗಣಿಸಲಾಗುವುದಿಲ್ಲ. ಆ ಚೆಂಡನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. ಅಂದರೆ ಇನ್ಮುಂದೆ ಪಿಚ್​ನಿಂದ ಹೊರಹೋಗಿ ಶಾಟ್ ಬಾರಿಸುವಂತಿಲ್ಲ.

6 / 8
4- ಸ್ಲೋ ಓವರ್​ ರೇಟ್ ನಿಯಮ: ಒಂದು ತಂಡವು ನಿಗದಿತ ಸಮಯದಲ್ಲಿ ಓವರ್ ಮುಗಿಸಬೇಕು. ಒಂದು ವೇಳೆ ತಡವಾದರೆ ಉಳಿದ ಓವರ್​ಗಳ ವೇಳೆ ಫೀಲ್ಡಿಂಗ್ ತಂಡವು ಬೌಂಡರಿ ಲೈನ್​ನಿಂದ ಒಬ್ಬ ​ಆಟಗಾರನನ್ನು 30 ಯಾರ್ಡ್​ ಸರ್ಕಲ್​ನಲ್ಲಿ ನಿಲ್ಲಿಸಬೇಕಾಗುತ್ತದೆ. ನಿಗದಿತ ಸಮಯದೊಳಗೆ ಓವರ್​ ಮುಗಿಯದಿದ್ದರೆ, ಕೊನೆಯ ಓವರ್​ಗಳ ವೇಳೆ ಒಬ್ಬ ಬೌಂಡರಿ ಲೈನ್​ನಿಂದ ಒಬ್ಬ ಫೀಲ್ಡರ್​ನ ಕಡಿತಗೊಳಿಸಿ ಮುಂದೆ ನಿಲ್ಲಿಸಬೇಕಾಗುತ್ತದೆ.

7 / 8
5- ಮಂಕಡ್ ರನೌಟ್ ಅವಕಾಶ: ಐಸಿಸಿಯ ನೂತನ ನಿಯಮದ ಪ್ರಕಾರ, ಇನ್ಮುಂದೆ ಮಂಕಡ್ ರನೌಟ್ ಮಾಡಬಹುದು. ಅಂದರೆ ಬೌಲರ್​ ಚೆಂಡೆಸೆಯುವ ಮುನ್ನ ಇನ್ಮುಂದೆ ಬ್ಯಾಟ್ಸ್​ಮನ್ ಕ್ರೀಸ್​ ಬಿಟ್ಟರೆ ರನೌಟ್ ಮಾಡುವ ಅವಕಾಶ ಇರಲಿದೆ. ಇಲ್ಲಿ ಬ್ಯಾಟ್ಸ್​ಮನ್​ಗಳಿಗೆ ಯಾವುದೇ ವಾರ್ನಿಂಗ್ ನೀಡಬೇಕಾದ ಅವಶ್ಯಕತೆಯಿಲ್ಲ.

8 / 8
ಈ ಐದು ನಿಯಮಗಳು ಪಂದ್ಯದ ಯಾವುದೇ ಸಂದರ್ಭಗಳಲ್ಲೂ ಬಳಕೆಗೆ ಬರಬಹುದು. ಅದರಲ್ಲೂ ಭರ್ಜರಿ ಪೈಪೋಟಿ ಸಂದರ್ಭಗಳಲ್ಲಿ ಈ ನಿಮಯಗಳೇ ಪಂದ್ಯದ ಚಿತ್ರಣವನ್ನು ಬದಲಿಸಿಬಹುದು. ಹೀಗಾಗಿ ಈ ಬಾರಿ ಟಿ20 ವಿಶ್ವಕಪ್ ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ.