T20 World Cup 2022: 1990 ರ ಸ್ಟೈಲ್​ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ನ್ಯೂಜಿಲೆಂಡ್

Edited By:

Updated on: Sep 29, 2022 | 3:25 PM

T20 World Cup 2022: ವಿಶ್ವಕಪ್‌ಗೆ ಮುಂಚಿತವಾಗಿ, ನ್ಯೂಜಿಲೆಂಡ್ ತಂಡವು ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಅಕ್ಟೋಬರ್ 7 ರಿಂದ ಟಿ20 ತ್ರಿಕೋನ ಸರಣಿಯನ್ನು ಆಯೋಜಿಸುತ್ತಿದೆ.

1 / 6
T20 World Cup 2022: ಟಿ20 ವಿಶ್ವಕಪ್​ಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಭಾರತ ಸೇರಿದಂತೆ ಕೆಲ ತಂಡಗಳು ಮುಂಬರುವ ಕ್ರಿಕೆಟ್ ಕದನಕ್ಕಾಗಿ ತನ್ನ ನೂತನ ಜೆರ್ಸಿಯನ್ನು ಅನಾವರಗೊಳಿಸಿದೆ. ಇದೀಗ ಕಳೆದ ಬಾರಿಯ ರನ್ನರ್ ಅಪ್ ತಂಡ ನ್ಯೂಜಿಲೆಂಡ್ ಕೂಡ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.

T20 World Cup 2022: ಟಿ20 ವಿಶ್ವಕಪ್​ಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಭಾರತ ಸೇರಿದಂತೆ ಕೆಲ ತಂಡಗಳು ಮುಂಬರುವ ಕ್ರಿಕೆಟ್ ಕದನಕ್ಕಾಗಿ ತನ್ನ ನೂತನ ಜೆರ್ಸಿಯನ್ನು ಅನಾವರಗೊಳಿಸಿದೆ. ಇದೀಗ ಕಳೆದ ಬಾರಿಯ ರನ್ನರ್ ಅಪ್ ತಂಡ ನ್ಯೂಜಿಲೆಂಡ್ ಕೂಡ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.

2 / 6

ಅದರಂತೆ ನ್ಯೂಜಿಲೆಂಡ್ ತಂಡವು ರೆಟ್ರೋ ಸ್ಟೈಲ್​ ಜೆರ್ಸಿಯಲ್ಲಿ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳಲಿದೆ. 1990 ರಲ್ಲಿ ನ್ಯೂಜಿಲೆಂಡ್ ಏಕದಿನ ಕ್ರಿಕೆಟ್​ನಲ್ಲಿ ಧರಿಸುತ್ತಿದ್ದ ಜೆರ್ಸಿಯಿಂದ ಸ್ಪೂರ್ತಿ ಪಡೆದು ಹೊಸ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ.

3 / 6

ಕಿವೀಸ್ ತಂಡವು ಹಂಚಿಕೊಂಡ ಫೋಟೋದಲ್ಲಿ ಸ್ಟಾರ್ ಬ್ಯಾಟರ್ ಡೆವೊನ್ ಕಾನ್ವೇ ಮತ್ತು ಡ್ಯಾರಿಲ್ ಮಿಚೆಲ್ ಹೊಸ ಕಿಟ್ ಧರಿಸಿರುವುದನ್ನು ಕಾಣಬಹುದು. ಹಾಗೆಯೇ ವಿಡಿಯೋದಲ್ಲಿ ಟ್ರೆಂಟ್ ಬೌಲ್ಟ್, ಇಶ್ ಸೋಧಿ, ಮಾರ್ಟಿನ್ ಗಪ್ಟಿಲ್ ಸೇರಿದಂತೆ ಕೆಲ ಆಟಗಾರರು ಕಾಣಿಸಿಕೊಂಡಿದ್ದಾರೆ.

4 / 6

T20 ವಿಶ್ವಕಪ್‌ಗೆ ಮುಂಚಿತವಾಗಿ, ನ್ಯೂಜಿಲೆಂಡ್ ತಂಡವು ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಅಕ್ಟೋಬರ್ 7 ರಿಂದ ಟಿ20 ತ್ರಿಕೋನ ಸರಣಿಯನ್ನು ಆಯೋಜಿಸುತ್ತಿದೆ. ಈ ಸರಣಿಯಲ್ಲಿ ಕೇನ್ ವಿಲಿಯಮ್ಸನ್ ತಂಡವು ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ.

5 / 6

ಇನ್ನು ಈ ಸರಣಿಯ ಫೈನಲ್ ಪಂದ್ಯವು ಅಕ್ಟೋಬರ್ 14 ರಂದು ನಡೆಯಲಿದೆ. ಇದಾದ ಬಳಿಕವಷ್ಟೇ ನ್ಯೂಜಿಲೆಂಡ್ ತಂಡವು ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾಗೆ ತೆರಳಲಿದೆ.

6 / 6

ಈ ಬಾರಿಯ ಟಿ20 ವಿಶ್ವಕಪ್​ನ ಸೂಪರ್ 12 ಸುತ್ತಿನ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ನ್ಯೂಜಿಲೆಂಡ್ ತಂಡವು ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

Loading...
Unable to load recommendations.
Follow Us