T20 World Cup 2022: ಟಿ20 ವಿಶ್ವಕಪ್ನಲ್ಲಿ ಬದಲಿ ಆಟಗಾರರಾಗಿ ತಂಡದಲ್ಲಿ ಸ್ಥಾನ ಪಡೆದ ಕ್ರಿಕೆಟಿಗರ ಸಂಪೂರ್ಣ ಪಟ್ಟಿ
TV9 Web | Updated By: ಪೃಥ್ವಿಶಂಕರ
Updated on:
Oct 16, 2022 | 2:49 PM
T20 World Cup 2022: ಗಡುವು ಮುಗಿಯುವ ಮೊದಲು ಐಸಿಸಿಗೆ ಸಲ್ಲಿಸಿರುವ ಪಟ್ಟಿಯಲ್ಲಿ 5 ತಂಡಗಳಲ್ಲಿ ಒಟ್ಟು 18 ಬದಲಾವಣೆಗಳಾಗಿದ್ದು, ಇದರಲ್ಲಿ 9 ಆಟಗಾರರು ತಂಡದಿಂದ ಹೊರಬಿದ್ದಿದ್ದರೆ, ಇನ್ನು 9 ಆಟಗಾರರು ಅವರ ಬದಲಿಯಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
1 / 6
T20 ವಿಶ್ವಕಪ್ 2022 ಗೆ ಸಂಬಂಧಿಸಿದಂತೆ ಎಲ್ಲಾ ತಂಡಗಳು ತಮ್ಮ ಆಟಗಾರರ ಅಂತಿಮ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಬೇಕಾಗಿದ್ದ ಗಡುವು ಸಹ ಕೊನೆಗೊಂಡಿದೆ. ಈ ಗಡುವು ಮುಗಿಯುವ ಮೊದಲು ಐಸಿಸಿಗೆ ಸಲ್ಲಿಸಿರುವ ಪಟ್ಟಿಯಲ್ಲಿ 5 ತಂಡಗಳಲ್ಲಿ ಒಟ್ಟು 18 ಬದಲಾವಣೆಗಳಾಗಿದ್ದು, ಇದರಲ್ಲಿ 9 ಆಟಗಾರರು ತಂಡದಿಂದ ಹೊರಬಿದ್ದಿದ್ದರೆ, ಇನ್ನು 9 ಆಟಗಾರರು ಅವರ ಬದಲಿಯಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
2 / 6
ಈ 5 ತಂಡಗಳಲ್ಲಿ ಟೀಂ ಇಂಡಿಯಾದಿಂದ 3 ಆಟಗಾರರು ಹೊರಬಿದ್ದಿದ್ದುಮ ಅವರ ಸ್ಥಾನಕ್ಕೆ ಮತ್ತೆ ಮೂವರು ಎಂಟ್ರಿಕೊಟ್ಟಿದ್ದಾರೆ. ಹೊರಹೋದ ಮೂವರಲ್ಲಿ ರವೀಂದ್ರ ಜಡೇಜಾ, ಬುಮ್ರಾ ಮತ್ತು ದೀಪಕ್ ಚಹಾರ್ ಇದ್ದು, ಅವರ ಸ್ಥಾನಕ್ಕೆ ಅಕ್ಷರ್ ಪಟೇಲ್, ಶಮಿ ಮತ್ತು ಶಾರ್ದೂಲ್ ಠಾಕೂರ್ ಬಂದಿದ್ದಾರೆ.
3 / 6
ಇಂಗ್ಲೆಂಡಿನ ಟಿ20 ವಿಶ್ವಕಪ್ ತಂಡದಿಂದ ಜಾನಿ ಬೈರ್‌ಸ್ಟೋವ್ ಹೊರಬಿದ್ದಿದ್ದರೆ, ಅವರ ಜಾಗಕ್ಕೆ ಅಲೆಕ್ಸ್ ಹೇಲ್ಸ್ ಆಯ್ಕೆಯಾಗಿದ್ದಾರೆ.
4 / 6
ದಕ್ಷಿಣ ಆಫ್ರಿಕಾ ತಂಡದಲ್ಲೂ ಇಬ್ಬರು ಆಟಗಾರರು ಬದಲಾವಣೆಯಾಗಿದ್ದು, ರಾಸಿ ವ್ಯಾನ್ ಡೆರ್ ಡಸ್ಸೆನ್ ಬದಲಿಗೆ ವಿಯಾನ್ ಮುಲ್ಡರ್ ಬಂದಿದ್ದಾರೆ. ಹಾಗೆಯೇ ಡ್ವೇನ್ ಪ್ರಿಟೋರಿಯಸ್ ಬದಲಿಗೆ ಮಾರ್ಕೊ ಯಾನ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
5 / 6
ವೆಸ್ಟ್ ಇಂಡೀಸ್ ತಂಡದಿಂದಲೂ ಒಬ್ಬ ಆಟಗಾರ ಹೊರಬಿದ್ದಿದ್ದು, ಹೊರಬಿದ್ದ ಆಟಗಾರನಾಗಿ ಶಿಮ್ರಾನ್ ಹೆಟ್ಮೆಯರ್ ಇದ್ದರೆ, ಅವರ ಸ್ಥಾನಕ್ಕೆ ಶೆಮ್ರಾ ಬ್ರೂಕ್ಸ್ ಆಯ್ಕೆಯಾಗಿದ್ದಾರೆ.
6 / 6
T20 ವಿಶ್ವಕಪ್ 2022 ಪ್ರಾರಂಭವಾಗುವ ಮೊದಲು ಬಾಂಗ್ಲಾದೇಶ ತನ್ನ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಿದೆ. ಶಬ್ಬೀರ್ ರೆಹಮಾನ್- ಮೊಹಮ್ಮದ್ ಸೈಫುದ್ದೀನ್ ಅವರನ್ನು ತಂಡದಿಂದ ಕೈಬಿಟ್ಟಿದ್ದು, ಅವರ ಸ್ಥಾನಕ್ಕೆ ಸೌಮ್ಯ ಸರ್ಕಾರ್ ಹಾಗೂ ಶೋರಿಫುಲ್ ಇಸ್ಲಾಂ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ.
Published On - 12:25 pm, Sun, 16 October 22